Published on: June 2, 2023

ಐರಾವತ್‌ ಸೂಪರ್‌ ಕಂಪ್ಯೂಟಿಂಗ್‌

ಐರಾವತ್‌ ಸೂಪರ್‌ ಕಂಪ್ಯೂಟಿಂಗ್‌

ಸುದ್ದಿಯಲ್ಲಿ ಏಕಿದೆ? ಜರ್ಮನಿಯಲ್ಲಿ ನಡೆಯುತ್ತಿರುವ 2023ನೇ ಸಾಲಿನ ‘ಅಂತಾರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಸಮಾವೇಶ’ದಲ್ಲಿ  ವಿಶ್ವದ 500 ಶಕ್ತಿಶಾಲಿ ಎಐ ಸೂಪರ್‌ ಕಂಪ್ಯೂಟರ್‌ಗಳನ್ನು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಭಾರತದ ‘ಐರಾವತ್‌’ ಗೆ 75ನೇ ಸ್ಥಾನ ಸಿಕ್ಕಿದೆ.

ಮುಖ್ಯಾಂಶಗಳು

  • ತಯಾರಕರು: ಮಹಾರಾಷ್ಟ್ರದ ಪುಣೆಯ ಸಿ-ಡಾಕ್‌ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ. ಈ ನೆಟ್‌ವೆಬ್‌ ಟೆಕ್ನಾಲಜೀಸ್‌ ಎಂಬ ಸಂಸ್ಥೆ ತಯಾರಿಸಿರುವ ಸೂಪರ್‌ ಕಂಪ್ಯೂಟರ್‌ ಆಗಿದೆ.

ಐರಾವತ್‌

  • 3,170 ಟೆರಾಫ್ಲ್ಯಾಪ್‌ಗಳ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ
  • ಭಾರತದ ಅತಿದೊಡ್ಡ ಮತ್ತು ವೇಗವಾದ, ಕೃತಕ ಬುದ್ಧಿಮತ್ತೆ ಆಧರಿತ ಸೂಪರ್‌ ಕಂಪ್ಯೂಟಿಂಗ್‌ ವ್ಯವಸ್ಥೆ ಇದಾಗಿದೆ.
  • ಇದು ‘Ubuntu 20.04.2 LTS’ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದ್ದು, 81,344 ಕೋರ್‌ಗಳ 2.25 GHz ಸಾಮರ್ಥ್ಯದ ‘ಎಎಂಡಿ ಇಪಿವೈಸಿ 78742 64ಸಿ’ ಪ್ರೊಸೆಸರ್‌ ಅನ್ನು ಹೊಂದಿದೆ.

ಭಾರತದಲ್ಲಿ ಕೃತಕ ಬುದ್ಧಿಮತ್ತೆ

  • ”ಈ ಡಿಜಿಟಲ್‌ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಅತ್ಯಂತ ಭರವಸೆಯ ತಂತ್ರಜ್ಞಾನವಾಗಿದೆ. ಅಗಾಧ ಡೇಟಾ ಲಭ್ಯತೆ, ಬಲಶಾಲಿ ಡಿಜಿಟಲ್‌ ಆರ್ಥಿಕತೆ ಹಾಗೂ ಕೌಶಲಯುಕ್ತ ಕಾರ್ಯಪಡೆಯಿಂದಾಗಿ ಕೃತಕ ಬುದ್ಧಿಮತ್ತೆಗೆ ಭಾರತವು ಬಲಿಷ್ಠ ಪರಿಸರ ವ್ಯವಸ್ಥೆ ಹೊಂದಿದೆ. ದೇಶವು ಇದಕ್ಕೆ ತಕ್ಕ ಸ್ಪರ್ಧಾತ್ಮಕ ಪ್ರಯೋಜನಗಳನ್ನೂ ಹೊಂದಿದೆ.”
  • ‘ನ್ಯಾಚುರಲ್‌ ಲ್ಯಾಂಗ್‌ವೇಜ್‌ ಪ್ರೊಸೆಸಿಂಗ್‌’, ‘ಇಮೇಜ್‌ ಪೊಸೆಷನ್‌’, ‘ಪ್ಯಾಟರ್ನ್‌ ರೆಕಗ್ನಿಷನ್‌, ‘ಮೆಡಿಕಲ್‌ ಇಮೇಜಿಂಗ್‌’, ‘ರೋಬೋಟಿಕ್ಸ್‌’, ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಆಯಕಟ್ಟಿನ ವಲಯಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತವು ಅನ್ವಯಿಕ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಪ್ರಯೋಜನ
    ‘ಐರಾವತ್‌’ ಸೂಪರ್‌ ಕಂಪ್ಯೂಟರ್‌ನ ಅತ್ಯಾಧುನಿಕ ರಚನೆ ಮತ್ತು ಅದ್ಭುತ ಗಣಕ ಸಾಮರ್ಥ್ಯಗಳಿಂದ ಹವಾಮಾನ ಮುನ್ಸೂಚನೆ, ಔಷಧ ಸಂಶೋಧನೆ, ಹವಾಮಾನದ ಮಾದರಿ ಮತ್ತು ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಅವಕಾಶಗಳು ತೆರೆದುಕೊಂಡಿವೆ.