Published on: March 25, 2023

ಒಂದು ವಿಶ್ವ ಟಿಬಿ ಶೃಂಗಸಭೆ

ಒಂದು ವಿಶ್ವ ಟಿಬಿ ಶೃಂಗಸಭೆ

ಸುದ್ದಿಯಲ್ಲಿ ಏಕಿದೆ? ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಒಂದು ವಿಶ್ವ ಟಿಬಿ ಶೃಂಗಸಭೆಯಲ್ಲಿ ಟಿಬಿ ಮುಕ್ತ ಪಂಚಾಯತ್, ಅಲ್ಪಾವಧಿಯ ಟಿಬಿ ತಡೆಗಟ್ಟುವ ಚಿಕಿತ್ಸೆಗೆ (ಟಿಪಿಟಿ)ನ್ನು ಭಾರತದಾದ್ಯಂತ ಅಧಿಕೃತ ಅನುಷ್ಠಾನ, ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ 2023 ರ ಬಿಡುಗಡೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು.

ಮುಖ್ಯಾಂಶಗಳು

  • ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗಿಯಾಗಿದ್ದಾರು.
  • ಈ ಶೃಂಗಸಭೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್ಡಬ್ಲ್ಯೂ) ಮತ್ತು ಸ್ಟಾಪ್ ಟಿಬಿ ಪಾಲುದಾರಿಕೆಯಲ್ಲಿ ಆಯೋಜಿಸಲಾಗಿತ್ತು.
  • ವಾರಣಾಸಿಯಲ್ಲಿ ಮೆಟ್ರೋಪಾಲಿಟನ್ ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕದ ತಾಣವನ್ನು ಉದ್ಘಾಟಿಸಿದರು.
  • ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಗಾಗಿ ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
  • ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಜಿಲ್ಲಾ ಮಟ್ಟದಲ್ಲಿ ನೀಲಗಿರಿ, ಪುಲ್ವಾಮಾ ಮತ್ತು ಅನಂತ್ ನಾಗ್ ಈ ಪ್ರಶಸ್ತಿಗಳನ್ನು ಪಡೆದಿವೆ.

ಕ್ಷಯ ರೋಗ ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳು

  • ರೋಗಿಗಳಿಗೆ ನೆರವಾಗುವ ನಿ-ಕ್ಷಯ್ ಮಿತ್ರ ಅಭಿಯಾನದಡಿ, ಸುಮಾರು 10 ಲಕ್ಷ ಕ್ಷಯ ರೋಗಿಗಳನ್ನು ನಾಗರಿಕರು ದತ್ತು ಪಡೆದಿದ್ದಾರೆ ಮತ್ತು 10-12 ವರ್ಷ ವಯಸ್ಸಿನ ಮಕ್ಕಳು ಸಹ ಮುಂದೆ ಬಂದಿದ್ದಾರೆ.
  • ಟಿಬಿ ತಡೆಗಟ್ಟುವಿಕೆಗಾಗಿ ಸರ್ಕಾರವು 6 ತಿಂಗಳ ಕೋರ್ಸ್ ಬದಲಿಗೆ 3 ತಿಂಗಳ ಚಿಕಿತ್ಸಾ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.
  • ಆರೋಗ್ಯ ಸಚಿವಾಲಯ-ಐಸಿಎಂಆರ್ ಉಪ-ರಾಷ್ಟ್ರೀಯ ರೋಗ ಕಣ್ಗಾವಲಿಗೆ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದೆ, ಇದು ಡಬ್ಲ್ಯುಎಚ್ಒ ಹೊರತುಪಡಿಸಿ, ಈ ರೀತಿಯ ಮಾದರಿಯನ್ನು ಹೊಂದಿರುವ ಏಕೈಕ ದೇಶ ಭಾರತವಾಗಿದೆ.
  • 2030ರ ಜಾಗತಿಕ ಗುರಿಯ ಬದಲಾಗಿ ಭಾರತವು 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ (ಟಿಬಿ ಮುಕ್ತ ಭಾರತ) ಮಾಡುವ ಗುರಿಯನ್ನು ಹೊಂದಿದೆ.

2025ರ ವೇಳೆಗೆ ಭಾರತದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ 

  • “ಕ್ಷಯ ರೋಗವನ್ನು ಈಗ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯ ಅತ್ಯಗತ್ಯ ಭಾಗವನ್ನಾಗಿ ಮಾಡಲಾಗಿದೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಯೋಜಿಸಲಾಗಿದೆ.
  • ಪ್ರಕರಣಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಮತ್ತು ಸಮುದಾಯ ಮುಂತಾದ ವಿವಿಧ ಮಧ್ಯಸ್ಥಗಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಮೂಲಕ ಕ್ಷಯ ಆರೈಕೆಯನ್ನು ವಿಸ್ತರಿಸುವುದು, ಆ ಮೂಲಕ  ಕ್ಷಯ ರೋಗದ ಹೊಸ ಪ್ರಕರಣಗಳನ್ನು ತಡೆಯುವುದು ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ʻಕ್ಷಯರೋಗ ಮುಕ್ತ  ಭಾರತʼ ಅಭಿಯಾನವನ್ನು ಪ್ರಾರಂಭಿಸಲಾಗಿದೆ,”
  • ʻಕ್ಷಯ ರೋಗ ನಿರ್ಮೂಲನೆಗೆ ರಾಷ್ಟ್ರೀಯ ಕಾರ್ಯತಂತ್ರ ಯೋಜನೆʼಯಲ್ಲಿ “ರೋಗತಡೆ” ಎಂಬ ಆಧಾರಸ್ತಂಭದ  ಅಡಿಯಲ್ಲಿ ಟಿಬಿ ತಡೆಗಟ್ಟುವ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ

ಹಿನ್ನೆಲೆ

  • 2001 ರಲ್ಲಿ ಸ್ಥಾಪಿತವಾದ ಸ್ಟಾಪ್ ಟಿಬಿ ಪಾಲುದಾರಿಕೆ ವಿಶ್ವಸಂಸ್ಥೆಯ ಆರಂಭಿಸಿದ ಸಂಸ್ಥೆಯಾಗಿದ್ದು, ಇದು ಟಿಬಿ ಪೀಡಿತ ಜನರು, ಸಮುದಾಯಗಳು ಮತ್ತು ದೇಶಗಳ ಧ್ವನಿಯಾಗಿದೆ.
  • ಮಾರ್ಚ್ 2018 ರಲ್ಲಿ, ನವದೆಹಲಿಯಲ್ಲಿ ನಡೆದ ಟಿಬಿ ಕೊನೆಗಾಣಿಸುವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು, ನಿಗದಿತ ಸಮಯಕ್ಕಿಂತ ಐದು ವರ್ಷ ಮುಂಚಿತವಾಗಿ 2025 ರ ವೇಳೆಗೆ ಟಿಬಿ ಸಂಬಂಧಿತ ಎಸ್.ಡಿ.ಜಿ ಗುರಿಗಳನ್ನು ಸಾಧಿಸುವಂತೆ ಭಾರತಕ್ಕೆ ಕರೆ ನೀಡಿದರು.