Published on: November 6, 2021

ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್

ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್

ಸುದ್ಧಿಯಲ್ಲಿ ಏಕಿದೆ?  ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್‌ ಯೋಜನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿವೆ.

  • ಎರಡೂ ದೇಶಗಳು ಜಂಟಿಯಾಗಿ ಘೋಷಿಸಿರುವ ಈ ಯೋಜನೆಯು ಕಾರ್ಯಗತವಾದರೆ, ಅಗತ್ಯದಷ್ಟು ಸೌರಶಕ್ತಿ ಲಭ್ಯವಿಲ್ಲದ ದೇಶಗಳಿಗೂ ಸೌರವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ. ಸೌರಶಕ್ತಿ ಆಧರಿತ ವಿದ್ಯುತ್ ಅನ್ನು ಹೆಚ್ಚು ಉತ್ಪಾದಿಸುವ ದೇಶಗಳು, ಸೌರಶಕ್ತಿ ಲಭ್ಯವಿಲ್ಲದ ದೇಶಗಳಿಗೆ ಆ ಹೆಚ್ಚುವರಿ ವಿದ್ಯುತ್ ಅನ್ನು ಪೂರೈಸಲು ಈ ಗ್ರಿಡ್ ಅನುಕೂಲ ಮಾಡಿಕೊಡುತ್ತದೆ. ಈ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ತಡೆಗಟ್ಟಲು ಬಡ ರಾಷ್ಟ್ರಗಳೂ ನೆರವಾಗಲು ಈ ಗ್ರಿಡ್ ಅನುವು ಮಾಡಿಕೊಡುತ್ತದೆ’ ಎಂದು ಯೋಜನೆ ಚಾಲನೆ ವೇಳೆ ವಿವರಿಸಲಾಗಿದೆ.
  • ಜಾಗತಿಕ ವಿದ್ಯುತ್ ಗ್ರಿಡ್‌ ಯೋಜನೆಗೆ 80 ದೇಶಗಳು ಬೆಂಬಲ ಸೂಚಿಸಿವೆ. ‘ವಿಶ್ವವು ಶುದ್ಧ ಮತ್ತು ನವೀಕರಿಸಬಹುದಾದ ವಿದ್ಯುತ್‌ನತ್ತ ಚಲಿಸಬೇಕಾದರೆ, ಎಲ್ಲಾ ದೇಶಗಳನ್ನೂ ಒಳಗೊಂಡ ಈ ಜಾಗತಿಕ ಗ್ರಿಡ್‌ ಮಾತ್ರವೇ ಏಕೈಕ ಪರಿಹಾರ’
  • ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತವು, ಪಳೆಯುಳಿಕೆ ಇಂಧನ ಕಡಿತದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿಯೇ ಗುರಿಯನ್ನು ಹಾಕಿಕೊಂಡಿದೆ. ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆಯು ಭಾರತದ ಇಂಗಾಲ ಕಡಿತದ ಸಾಧ್ಯತೆಗಳನ್ನು ತೋರಿಸುತ್ತದೆ
  • ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜಗತ್ತಿಗೆ ಸೋಲಾರ್ ಕ್ಯಾಲ್ಕುಲೇಟರ್ ಅಪ್ಲಿಕೇಶನ್ ಅನ್ನು ನೀಡಲು ಹೊರಟಿದೆ. ಈ ಕ್ಯಾಲ್ಕುಲೇಟರ್ ಮೂಲಕ, ಪ್ರಪಂಚದ ಯಾವುದೇ ಸ್ಥಳದ ಸೌರ ಶಕ್ತಿಯ ಸಾಮರ್ಥ್ಯವನ್ನು ಉಪಗ್ರಹ ಡೇಟಾದ ಆಧಾರದ ಮೇಲೆ ಲೆಕ್ಕ ಹಾಕಬಹುದು. ಸೌರ ಯೋಜನೆಗಳ ಸ್ಥಳವನ್ನು ನಿರ್ಧರಿಸಲು ಈ ಅಪ್ಲಿಕೇಶನ್ ಉಪಯುಕ್ತವಾಗಿದೆ