Published on: November 19, 2022

ಒನ್‌ ಹೆಲ್ತ್‌ ಮಿಷನ್‌

ಒನ್‌ ಹೆಲ್ತ್‌ ಮಿಷನ್‌

ಸುದ್ಧಿಯಲ್ಲಿ ಏಕಿದೆ ?

ಶೀಘ್ರದಲ್ಲೇ ಕರ್ನಾಟಕದಲ್ಲೂ ಒನ್ ಹೆಲ್ತ್ ಮಿಷನ್ ಪ್ರಾರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಸೂದ್ ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಈಗಾಗಲೇ ದಿಲ್ಲಿ ಸೇರಿ ಕೆಲ ರಾಜ್ಯಗಳಲ್ಲಿ ಇದು ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಆರಂಭಿಸಲಾಗುವುದು
  • ಒನ್ ಹೆಲ್ತ್ ಮಿಷನ್ ಏಕೀಕೃತ ಪರಿಕಲ್ಪನೆಯಾಗಿದ್ದು, ಮಾನವ, ಪ್ರಾಣಿ ಮತ್ತು ಪರಿಸರದ ಮೇಲೆ ನಿಗಾ ಇರಿಸುವ ಮೂಲಕ ರೋಗ ತಡೆಕಟ್ಟುವ ಕಾರ್ಯಕ್ರಮವಾಗಿದೆ.
  • ವಿಜ್ಞಾನ ತಂತ್ರಜ್ಞಾನ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶುಸಂಗೋಪನೆ, ಪರಿಸರ ಮತ್ತು ವನ್ಯ ಜೀವಿ ಇಲಾಖೆಯ ಜೊತೆ ಸಮನ್ವಯ ಸಾಧಿಸುವ ಮೂಲಕ ನಿಗಾ ವಹಿಸಲಾಗುತ್ತದೆ
  • ಕೋವಿಡ್ 19 ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನಿಗಾ ಇಡುವ ನಿಟ್ಟಿನಲ್ಲಿ ಆರು ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಭಾರತದ ರೋಗ ನಿಗಾ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿದೂಗಿಸಿ ಸಮಗ್ರ ವ್ಯವಸ್ಥೆಯನ್ನು ಸದೃಢಗೊಳಿಸುವ ಕಾರ್ಯಕ್ರಮ ಇದಾಗಿದೆ
  • ಈ ಏಕೀಕೃತ ಪರಿಕಲ್ಪನೆ ಮೂಲಕ ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಹಾಗೂ ಜಾಗತಿಕವಾಗಿ ಕೆಲಸ ಮಾಡುವ ಅಂಶಗಳನ್ನು ಸಮಗ್ರವಾಗಿ ಅವಲೋಕಿಸಲಾಗುತ್ತದೆ. ಇದರಿಂದ ಜನರಿಗೆ, ಪ್ರಾಣಿಗಳಿಗೆ ಮತ್ತು ಪರಿಸರದ ಗರಿಷ್ಠ ಆರೋಗ್ಯ ಬಲವರ್ಧನೆ ಮಾಡಲಾಗುವುದು. ಈ ಪರಿಕಲ್ಪನೆಗೆ ಭಾರತದಲ್ಲಿ ಮಾತ್ರವಲ್ಲ ಇತರೆ ಹಲವು ರಾಷ್ಟ್ರಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ