Published on: December 14, 2022

ಒರಾಯನ್‌ ಗಗನನೌಕೆ

ಒರಾಯನ್‌ ಗಗನನೌಕೆ

ಸುದ್ದಿಯಲ್ಲಿ ಏಕಿದೆ? ಪರೀಕ್ಷೆ ಉದ್ದೇಶದೊಂದಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಉಡ್ಡಯನ ಮಾಡಿದ್ದ ಒರಾಯನ್ ಗಗನನೌಕೆ ವ್ಯೋಮಯಾನವನ್ನು ಪೂರ್ಣಗೊಳಿಸಿ ಭೂಮಿಯತ್ತ ಮರುಳಿದೆ.

ಮುಖ್ಯಾಂಶಗಳು

  • 25 ದಿನಗಳ ತನ್ನ ವ್ಯೋಮಯಾನದ ವೇಳೆ, ಚಂದ್ರನ ಸುತ್ತ ತಿರುಗಿದ ಈ ಗಗನನೌಕೆ, ನಿಗದಿಯಂತೆ ಮೆಕ್ಸಿಕೊದ ಬಾಜಾ ದ್ವೀಪಕಲ್ಪ ಬಳಿ (ಪೆಸಿಫಿಕ್‌)ಸಮುದ್ರದಲ್ಲಿ ಇಳಿಯಿತು.
  • ಗಗನನೌಕೆಯನ್ನು ಹೊತ್ತು ತರುವ ಸಲುವಾಗಿ, ಅದು ಬಂದಿಳಿಯುವ ಸ್ಥಳದಿಂದ ಕೆಲವು ಮೈಲಿಗಳ ದೂರದಲ್ಲಿ ನೌಕಾಪಡೆಯ ಹಡಗನ್ನು ನಿಯೋಜಿಸಲಾಗಿತ್ತು.
  • ಈ ಗಗನನೌಕೆಯನ್ನು ನವೆಂಬರ್ 16ರಂದು ಉಡ್ಡಯನ ಮಾಡಲಾಗಿತ್ತು
  • ರಾಕೆಟ್‌ಗಳು ನಿಗದಿತ ಕಕ್ಷೆ ತಲುಪಿ ನಿರ್ನಾಮವಾಗುವುದು ಸಾಮಾನ್ಯ. ಆದರೆ, ಸ್ಪೇಸ್‌ ಎಕ್ಸ್‌ ಮಾತ್ರ ಭೂಮಿಗೆ ಮರಳುವ ರಾಕೆಟ್‌ ಹೊಂದಿದೆ. ಇದೇ ರೀತಿ, ಓರಿಯನ್‌ ಗಗನನೌಕೆಯ ಕ್ಯಾಪ್ಸೂಲ್‌ ಕೂಡ ಭೂಮಿಗೆ ಯಶಸ್ವಿಯಾಗಿ ಮರಳಿದೆ.

ನಾಸಾದ ಯೋಜನೆ ಮತ್ತು ಉದ್ದೇಶ

  • ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
  • ಅಂತರಿಕ್ಷಕ್ಕೆ ಗಗನನೌಕೆ ಕಳುಹಿಸಿದ ಬಳಿಕ ಈ ಕ್ಯಾಪ್ಸೂಲ್‌ನೊಳಗಿರುವ ಗಗನಯಾನಿಗಳು ಈ ರೀತಿ ಭೂಮಿಗೆ ವಾಪಸ್‌ ಬರಬೇಕಿದೆ.
  • ಸದ್ಯ ನಾಸಾವು ಓರಿಯನ್‌ ವ್ಯೋಮನೌಕೆಯನ್ನು ಪರೀಕ್ಷಾರ್ಥವಾಗಿ ಕಳುಹಿಸಿತ್ತು. ಅದರೊಳಗೆ ಯಾವುದೇ ಗಗನಯಾನಿಗಳು ಇರಲಿಲ್ಲ.
  • 2024ರ ಬಳಿಕ ಇಂತಹ ಮಿಷನ್‌ ಕೈಗೊಳ್ಳಲು ಯೋಜಿಸಿದೆ. 2025 ಅಥವ 2026ರಲ್ಲಿ ಮಾನವಸಹಿತ ಯಾನ ಕೈಗೊಳ್ಳಲು ಉದ್ದೇಶೀಸಿದೆ. ಅಂದರೆ, ಈ ವ್ಯೋಮನೌಕೆಯನ್ನು ಗಗನಯಾನಿಗಳನ್ನು ಕಳುಹಿಸಿ ಚಂದ್ರದ ಮೇಲ್ಮೈಗೆ ಇಳಿಸಿ, ಬಳಿಕ ವಾಪಸ್‌ ಭೂಮಿಗೆ ಬರುವ ಯೋಜನೆ ರೂಪಿಸಿದೆ.
  • ಇದೀಗ ನಾಸಾವು ಕೈಗೊಳ್ಳುವ ಯೋಜನೆಗೆ ಆರ್ಟಿಮಿಸ್‌ ಎಂದು ಹೆಸರಿಡಲಾಗಿದೆ. ಚಂದ್ರನಲ್ಲಿ ನೆಲೆಸುವ ಸಾಧ್ಯತೆ ಕುರಿತು ಪರಿಶೀಲಿಸುವುದು ಭವಿಷ್ಯದ ಚಂದ್ರಯಾನದ ಪ್ರಮುಖ ಉದ್ದೇಶವಾಗಿದೆ