Published on: July 28, 2022
ಒಲಿಂಪಿಯಾಡ್ ಕ್ರೀಡಾ ಜ್ಯೋತಿ
ಒಲಿಂಪಿಯಾಡ್ ಕ್ರೀಡಾ ಜ್ಯೋತಿ
ಸುದ್ದಿಯಲ್ಲಿ ಏಕಿದೆ?
ಭಾರತದ ಆತಿಥ್ಯದಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಯಾತ್ರೆಯು ಉದ್ಯಾನನಗರಿಯಲ್ಲಿ ವೈಭವದಿಂದ ನಡೆಯಿತು.
ಮುಖ್ಯಾಂಶಗಳು
- ಚೆಸ್ ಒಲಿಂಪಿಯಾಡ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10ರ ವರೆಗೆ ಆಯೋಜನೆಯಾಗಿದೆ.
- ದೇಶದ ವಿವಿಧ ನಗರಗಳಲ್ಲಿ ಯಾತ್ರೆ ಮಾಡಿದ ಜ್ಯೋತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು. ಕರ್ನಾಟಕದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಜಿ.ಎ.ಸ್ಟ್ಯಾನಿ, ಎಂ.ಎಸ್.ತೇಜಕುಮಾರ್ ಮತ್ತು ಗಿರೀಶ್ ಕೌಶಿಕ್ ಅವರು ವಿಮಾನ ನಿಲ್ದಾಣದಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಆ ಬಳಿಕ ಮೆರವಣಿಗೆ ಮೂಲಕ ರಾಜಭವನಕ್ಕೆ ತರಲಾಯಿತು
-
100 ವರ್ಷಗಳ ಇತಿಹಾಸ ಹೊಂದಿರುವ ಚೆಸ್ ಒಲಿಂಪಿಯಾಡ್ ಭಾರತದಲ್ಲಿ ಆಯೋಜನೆಯಾಗಿರುವುದು ಇದೇ ಮೊದಲು. ಈ ಬಾರಿ ದಾಖಲೆಯ 187 ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳುತ್ತಿವೆ. ಅಂತರರಾಷ್ಟ್ರೀಯ ಚೆಸ್ ಸಂಸ್ಥೆ (ಫಿಡೆ) ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್‌ನಲ್ಲಿ ಒಲಿಂಪಿಕ್ ಮಾದರಿಯಲ್ಲಿ ಜ್ಯೋತಿಯಾತ್ರೆ ಪರಿಚಯಿಸಿತ್ತು. ಜ್ಯೋತಿ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಕಳೆದ ತಿಂಗಳು ಚಾಲನೆ ನೀಡಿದ್ದರು.