Published on: November 19, 2022

ಓಪನ್‌ ನೆಟ್‌ವರ್ಕ್ ಡಿಜಿಟಲ್‌ ಕಾಮರ್ಸ್‌

ಓಪನ್‌ ನೆಟ್‌ವರ್ಕ್ ಡಿಜಿಟಲ್‌ ಕಾಮರ್ಸ್‌

ಸುದ್ಧಿಯಲ್ಲಿ ಏಕಿದೆ ?

ವಿದ್ಯುನ್ಮಾನ ಜಾಲಗಳ ಮೂಲಕ ಸರಕು ಮತ್ತು ಸೇವೆಗಳ ವಿನಿಮಯಕ್ಕೆ ಉತ್ತೇಜನ ನೀಡುವ ಉದ್ದೇಶದ ಓಎನ್‌ಡಿಸಿ (ಓಪನ್‌ ನೆಟ್‌ವರ್ಕ್ ಡಿಜಿಟಲ್‌ ಕಾಮರ್ಸ್‌) ಪಾರದರ್ಶಕ ಮತ್ತು ಉತ್ತಮ ವ್ಯವಸ್ಥೆಯಾಗಿ ರೂಪುಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಮುಖ್ಯಾಂಶಗಳು

  • ಪ್ರಾಯೋಗಿಕವಾಗಿ ಒಎನ್ ಡಿಸಿ ಯನ್ನು ಐದು ನಗರಗಳಾದ ದೆಹಲಿ, ಬೆಂಗಳೂರು, ಭೋಪಾಲ್, ಶಿಲ್ಲಾಂಗ್, ಹಾಗೂ ಕೊಯಂಬತ್ತೂರಿನಲ್ಲಿ ಆರಂಭಿಸಿದೆ.ಈ ಪ್ರಯತ್ನದಿಂದ ಸಣ್ಣ ಉದ್ಯಮಿಗಳು ಹಾಗೂ ಮಾರಾಟಗಾರರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಹಾಗಾಗಿ ಈ ವ್ಯವಸ್ಥೆಯನ್ನು ದೇಶದ ಬೇರೆ ಭಾಗಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ
  • ಸರ್ಕಾರದ ನೇತೃತ್ವದ ಡಿಜಿಟಲ್ ಮಾರ್ಕೆಟಿಂಗ್ ನೆಟ್ವರ್ಕ್ ಇದಾಗಿದ್ದು, ಸಣ್ಣ ವ್ಯಾಪಾರಿಗಳನ್ನು ಹಾಗೂ ಗ್ರಾಹಕರನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
  • ದೇಶದಲ್ಲಿ ಈ ಕಾಮರ್ಸ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು ಸರ್ಕಾರ ಒಎನ್ ಡಿಸಿ ವೇದಿಕೆಯ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳನ್ನು ಉತ್ತೇಜಿಸುವ ಹಾಗೂ ವಿಶ್ವದ ದೈತ್ಯ ಕಂಪನಿಗಳಾದ ಅಮೇಜಾನ್ ಹಾಗೂ ವಾಲ್ಮಾರ್ಟ್ ನಂತಹ ಸಂಸ್ಥೆಗಳಿಗೆ ಪರ್ಯಾಯ ಹುಟ್ಟುಹಾಕಲು ಇದನ್ನು ಆರಂಭಿಸುತ್ತಿದೆ.

ಓಎನ್ ಡಿಸಿ ಎಂದರೇನು?

  • ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಅಂದರೆ ಒಂದು ಮಾರುಕಟ್ಟೆ ಹಾಗೂ ಜಾಲವಾಗಿದ್ದು, ಮುಕ್ತವಾದ, ಎಲ್ಲವನ್ನೂ ಒಳಗೊಂಡ, ಉತ್ತಮ ಬೆಲೆಯ ಹಾಗೂ ಸ್ಪರ್ಧಾತ್ಮಕ ತೆರೆದ ಮಾರುಕಟ್ಟೆಯನ್ನು ನಿರ್ಮಿಸುವ ಗುರಿ ಇದರದ್ದಾಗಿದೆ.
  • ಇದರಲ್ಲಿ ವ್ಯಾಪಾರ ನಡೆಸಲು ವ್ಯಾಪಾರಿ ಹಾಗೂ ಗ್ರಾಹಕ ಪರಸ್ಪರ ಒಂದೇ ವೇದಿಕೆಯಲ್ಲಿ ಇರಬೇಕಾದ್ದಿಲ್ಲ. ಬದಲಾಗಿ ಓಎನ್ ಡಿಸಿ ನೆಟ್ವರ್ಕ್ ಮೂಲಕ ಅನ್ ಲೈನ್ ಮೂಲಕ ಅಗತ್ಯವಾದ ವಸ್ತುಗಳ ಲಭ್ಯತೆ ಹಾಗೂ ಅವುಗಳ ಖರೀದಿಯನ್ನು ಮಾಡಬಹುದು. ಓಎನ್ ಡಿಸಿ ವ್ಯಾಪಾರಿ ಹಾಗೂ ಗ್ರಾಹಕರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಗ್ರಾಹಕ ಅನ್ ಲೈನ್ ನಲ್ಲಿ ಓಎನ್ ಡಿಸಿ ನೆಟ್ವರ್ಕ್ ಬಳಸಿ ವಸ್ತುವಿಗಾಗಿ ಹುಡುಕಿದರೆ, ಓಎನ್ ಡಿಸಿ ತನ್ನ ಜೊತೆ ಸಂಯೋಜನೆಗೊಂಡಿರುವ ಎಲ್ಲಾ ಮಾರಾಟಗಾರರಿಗೆ ಕನೆಕ್ಟ್ ಆಗಲಿದೆ.
  • ಈ ಪ್ರಕ್ರಿಯೆಯಲ್ಲಿ ಓಎನ್ ಡಿಸಿ ಸಂಪೂರ್ಣ ನಿಯಂತ್ರಣ ಹೊಂದಿದ್ದು, ವ್ಯಾಪಾರ, ಹಣ ಪಾವತಿ, ಆರ್ಡರ್ ತಲುಪುವವರೆಗೂ ಮೇಲ್ವಿಚಾರಣೆ ಹೊಂದಿದೆ
  • ಒಎನ್ ಡಿಸಿ ನೆಟ್ವರ್ಕ್ ಅಡಿಯಲ್ಲಿ ಗ್ರಾಹಕರ ಆಪ್ ಗಳಾದ ಮೈಸ್ಟೋರ್, ಪೇಟಿಎಂ, ಸ್ಪೈಸ್ ಮನಿ ಆಪ್ ಗಳಲ್ಲಿ ಒಎನ್ ಡಿಸಿ ಸೇವೆ ಲಭ್ಯವಿದೆ. ಇನ್ನು ವ್ಯಾಪಾರಿ ಸಂಸ್ಥೆಗಳಾದ ಡಿಜಿಟ್, ಈ ಸಮುದಾಯ್, ಗೋಫ್ರುಲ್ ಗಲ್, ಗ್ರೋಥ್ ಫ್ಯಾಲ್ಕನ್, ಸೆಲ್ಲರ್ ಆಪ್ ಸಂಸ್ಥೆಗಳು ನೆಟ್ವರ್ಕ್ ನೊಂದಿಗೆ ಸೇರಿಕೊಂಡಿದ್ದು, ಸದ್ಯ ಡನ್ಝೋ ಹಾಗೂ ಲೋಡ್ ಶೇರ್ ಈ ಎರಡು ಸೇವಾ ಕಂಪನಿಗಳು ಮಾತ್ರ ಸಂಯೋಜನೆಗೊಂಡಿವೆ.