Published on: December 26, 2022

ಕಂದಾಯ ಕಾಯ್ದೆ ತಿದ್ದುಪಡಿ

ಕಂದಾಯ ಕಾಯ್ದೆ ತಿದ್ದುಪಡಿ

ಸುದ್ದಿಯಲ್ಲಿ ಏಕಿದೆ? ಕೃಷಿಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ಭೂ ಪರಿವರ್ತನೆಗೆ ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೇ ಮಂಜೂರಾತಿ ಆದೇಶ ನೀಡುವಂತೆ ಜಿಲ್ಲಾಧಿಕಾರಿಗೆ ಗಡುವು ವಿಧಿಸುವ ಉದ್ದೇ ಶದಿಂದ ಮಂಡಿಸಿದ ‘ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ‘ ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ತಿದ್ದುಪಡಿಯ ಉದ್ದೇಶ

  • ‘ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ‘ರೈತ ಸ್ನೇಹಿ’ಗೊಳಿಸಲು ತಿದ್ದುಪಡಿ ಮಾಡಲಾಗಿದೆ’. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95 ಮತ್ತು 96ನ್ನು ಮತ್ತಷ್ಟು ತಿದ್ದುಪಡಿ ತರುವ ಉದ್ದೇ ಶವನ್ನು ಮಸೂದೆ ಹೊಂದಿದೆ.

ತಿದ್ದುಪಡಿಯಲ್ಲಿರುವ  ಅಂಶಗಳು

  • ‘ಮಹಾ ಯೋಜನೆ ಅಥವಾ ನಗರ ಯೋಜನಾ ಪ್ರಾಧಿಕಾರದ ಮಂಜೂರಾತಿ ಅನ್ವಯ ಕೃಷಿಭೂಮಿ ಅಥವಾ ಅದರ ಭಾಗವನ್ನು ಯಾವುದಾದರೂ ಇತರ ಉದ್ದೇ ಶಕ್ಕೆ ಬಳಸಲು ಇಚ್ಚಿಸುವವರು ನಿಗದಿಪಡಿಸಿದ ದಂಡ ಪಾವತಿಸಿ ಪ್ರಮಾಣಪತ್ರ ಸಹಿತ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.
  • ಹೀಗೆ ಸಲ್ಲಿಕೆಯಾದ ಅರ್ಜಿಗಳಿಗೆ ಏಳು ದಿನಗಳಲ್ಲಿ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಬೇಕು. 15 ದಿನ ಕಳೆದರೂ ಜಿಲ್ಲಾಧಿಕಾರಿ ಅರ್ಜಿಗಳ ವಿಲೇವಾರಿ ಮಾಡದಿದ್ದರೆ, ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಪರಿಭಾವಿಸಿಕೊಳ್ಳಬಹುದು’ ಎಂದು ಪ್ರಸ್ತಾವಿತ ಮಸೂದೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95 ಮತ್ತು 96

  • ಸೆಕ್ಷನ್ 95: ಬೇಸಾಯದ ಭೂಮಿಯ ಬಳಕೆಗಳು ಮತ್ತು ಬೇಸಾಯದ ಭೂಮಿಯನ್ನು ಇತರ ಉದ್ದೇಶಕ್ಕಾಗಿ ಬಳಸುವ ಬಗೆಗಿನ ವಿಧಾನದ ಬಗ್ಗೆ ಹೇಳುತ್ತದೆ
  • ಸೆಕ್ಷನ್ 96: ಬೇಸಾಯದ ಭೂಮಿಯನ್ನು ಅನುಮತಿ ಇಲ್ಲದೆ ಇತರ ಉದ್ದೇಶಕ್ಕಾಗಿ ಬಳಸುವುದಕ್ಕೆ ದಂಡ ವಿಧಿಸುವುದರ ಬಗ್ಗೆ ತಿಳಿಸುತ್ತದೆ