Published on: September 10, 2023
ಕಂಪಾಲ ಘೋಷಣೆ
ಕಂಪಾಲ ಘೋಷಣೆ
ಸುದ್ದಿಯಲ್ಲಿ ಏಕಿದೆ? ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಕಾರಣದಿಂದ ಆಫ್ರಿಕಾದಲ್ಲಿ ವಲಸೆ ಪ್ರಕ್ರಿಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ಪರಿಸರ ಸಂರಕ್ಷಣೆ ಮತ್ತುಹವಾಮಾನ ಬದಲಾವಣೆಗೆ ಸಂಬಂಧಿಸಿದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಆಫ್ರಿಕಾ ಖಂಡದ 48 ರಾಷ್ಟ್ರಗಳು ಕಂಪಾಲ ಘೋಷಣೆಯನ್ನು ಮಾಡಿವೆ.
ಮುಖ್ಯಾಂಶಗಳು
- 2022ರಲ್ಲಿಈ ಘೋಷಣೆಯ ಬಗ್ಗೆ ಮೊಟ್ಟ ಮೊದಲ ಬಾರಿಗೆ ಪ್ರಸ್ತಾಪಿಸಲಾಗಿತ್ತು. ಇದಾದ ನಂತರ ಆಫ್ರಿಕಾದ 15 ರಾಷ್ಟ್ರಗಳು ಈ ಘೋಷಣೆಗೆ ಸಹಿ ಹಾಕಿ ಬೆಂಬಲವನ್ನು ಸೂಚಿಸಿದ್ದವು.
- ವಿಶ್ವಸಂಸ್ಥೆಯ ಆಂತರಿಕ ಸ್ಥಳಾಂತರ ಮಾನಿಟರಿಂಗ್ ಸೆಂಟರ್ ಪ್ರಕಾರ ಕಳೆದ ಒಂದು ವರ್ಷದಲ್ಲಿಯೇ 7.5 ದಶಲಕ್ಷ ಜನರು ಆಫ್ರಿಕಾದಿಂದ ವಲಸೆ ಹೋಗಿದ್ದು ಇದೇ ಪ್ರಕ್ರಿಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ವಿವಿಧ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಆಫ್ರಿಕಾದ ರಾಷ್ಟ್ರಗಳು ಘೋಷಣೆಯನ್ನು ಬೆಂಬಲಿಸಿದೆ.
ಉದ್ದೇಶ
- ಆಫ್ರಿಕಾ ಖಂಡ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಬಗೆಹರಿಸಲು ಕಂಪಾಲ ಘೋಷಣೆಯನ್ನು ಜಾರಿಗೆ ತರಲಾಗುತ್ತಿದೆ.
ಘೋಷಣೆಯ ಪ್ರಮುಖ ಅಂಶಗಳು
- ಘೋಷಣೆಗೆ ಸಹಿ ಹಾಕುವ ಪ್ರತಿಯೊಂದು ಸದಸ್ಯ ರಾಷ್ಟ್ರಗಳಲ್ಲಿಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಸೂಕ್ತ ಕಾರ್ಯಸೂಚಿ ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುವುದು ಕಡ್ಡಾಯವಾಗುತ್ತದೆ.
- ಉದ್ಯೋಗ ಸೃಷ್ಟಿಯ ಮೂಲಕ ಹಾಗೂ ಸುಸ್ಥಿರ ಅಭಿವೃದ್ಧಿಯ ಮೂಲಕ ವಲಸೆ ಪ್ರಕ್ರಿಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರಗಳು ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ದೇಶನಗಳನ್ನು ಘೋಷಣೆಯಲ್ಲಿ ನೀಡಲಾಗಿದೆ.
- ಶೋಷಿತ ವರ್ಗಗಳಿಗೆ, ಯುವಕರಿಗೆ ಮತ್ತು ಮಹಿಳೆ ಯರಿಗೆ ಬೇಕಾದ ಅವಶ್ಯಕ ಸವಲತ್ತುಗಳನ್ನು ಕಲ್ಪಿಸುವ ಮೂಲಕ ಸ್ವಾವಲಂಬಿ ಜೀವನವನ್ನು ಸಾಗಿಸಲು ಸಹಕಾರವನ್ನು ಕಲ್ಪಿಸತಕ್ಕದ್ದು.