Published on: February 9, 2023

ಕನ್ನಡದಲ್ಲಿ ಧ್ವನಿ ಆಧಾರಿತ ಸೇವೆ

ಕನ್ನಡದಲ್ಲಿ ಧ್ವನಿ ಆಧಾರಿತ ಸೇವೆ


ಸುದ್ಧಿಯಲ್ಲಿ ಏಕಿದೆ? ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಧ್ವ ನಿ ಆಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮೊಬೈಲ್ ಸ್ಮಾರ್ಟ್‌ಫೋನ್ ಆ್ಯಪ್ ‘ಹಲೋ ಉಜ್ಜೀವನ್’ಅನ್ನು ಉಜ್ಜೀವನ್ ಸ್ಮಾಲ್ ಫೈ ನಾನ್ಸ್ ಬ್ಯಾಂಕ್ ಬಳಕೆಗೆ ಮುಕ್ತವಾಗಿಸಿದೆ.


ಮುಖ್ಯಾಂಶಗಳು

  • ಸಾಲದ ಕಂತುಗಳ ಪಾವತಿ, ಎಫ್.ಡಿ ಹಾಗೂ ಆರ್.ಡಿ. ಖಾತೆ ಆರಂಭಿಸುವುದು, ಹಣ ವರ್ಗಾವಣೆ, ಖಾತೆಯಲ್ಲಿನ ಬಾಕಿ ಮೊತ್ತವನ್ನು ಪರೀಕ್ಷಿಸುವ ಕೆಲಸಗಳನ್ನು ಈ ಆ್ಯಪ್ ಮೂಲಕ ಪ್ರಾದೇಶಿಕ ಭಾಷೆ ಬಳಸಿ ಮಾಡಬಹುದು.
  • ಈ ಆ್ಯಪ್ಅನ್ನು ಪ್ರಾಯೋಗಿಕ ಬಳಕೆಗೆ ಮುಕ್ತವಾಗಿಸಿದ್ದ ನಂತರದಲ್ಲಿ ಮೂರು ತಿಂಗಳಲ್ಲಿ 1,200 ಎಫ್.ಡಿ. ಹಾಗೂ ಆರ್.ಡಿ. ಖಾತೆಗಳನ್ನು ತೆರೆಯಲಾಗಿದೆ.
  • 75 ಸಾವಿರಕ್ಕೂ ಹೆಚ್ಚು ಜನ ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ.
  • ಈ ಆ್ಯಪ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ₹ 1,000 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿ ಆಗಬೇಕು ಎಂಬ ನಿರೀಕ್ಷೆಯನ್ನು ಬ್ಯಾಂಕ್ ಹೊಂದಿದೆ.

‘ಹಲೋ ಉಜ್ಜೀ ವನ್’ ಆ್ಯಪ್ ಬಗ್ಗೆ 

  • ‘ಈ ಆ್ಯಪ್ ಪ್ರಾದೇಶಿಕ ಭಾಷೆಗಳಲ್ಲಿ ಇರುವ ವ್ಯತ್ಯಾಸಗಳನ್ನು ಗುರುತಿಸುತ್ತದೆ.
  • ಕನ್ನಡದ ವಿಚಾರವಾಗಿ ಹೇಳುವುದಾದರೆ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಭಾಷೆಯ ಬಳಕೆಯಲ್ಲಿ ಇರುವ ವ್ಯತ್ಯಾಸಗಳನ್ನು ಸಹ ಇದು ಗುರುತಿಸಿ, ಬಳಕೆದಾರರ ಜೊತೆ ಸಂವಾದಿಸುತ್ತದೆ’.
  • ಈ ಆ್ಯಪ್ ಬಳಸುವಾಗ ಪಾಸ್ವರ್ಡ್‌ಗಳನ್ನು ಕೀಪ್ಯಾಡ್ ಮೂಲಕ ಭರ್ತಿ ಮಾಡಬೇಕು.
  • ಮೌಖಿಕವಾಗಿ ಪಾಸ್ವರ್ಡ್‌ಹೇಳಲು ಅವಕಾಶವಿಲ್ಲ.