Published on: November 22, 2022

ಕಮೆಂಗ್ ಜಲವಿದ್ಯುತ್ ಯೋಜನೆ

ಕಮೆಂಗ್ ಜಲವಿದ್ಯುತ್ ಯೋಜನೆ

ಸುದ್ದಿಯಲ್ಲಿ ಏಕಿದೆ?

ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಕಮೆಂಗ್ ಜಲವಿದ್ಯುತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಿದರು.

ಮುಖ್ಯಾಂಶಗಳು

  • ಯೋಜನೆಯು 2030 ರ ವೇಳೆಗೆ 30,000 ಮೆಗಾವ್ಯಾಟ್ ಯೋಜಿತ ಜಲ ಸಾಮರ್ಥ್ಯದ ಸೇರ್ಪಡೆಯ ಭಾಗವಾಗಿದೆ.
  • ಇದು ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಒಂದು ಮಿನಿ ರತ್ನ ಪವರ್ ಸಾರ್ವಜನಿಕ ವಲಯ ಘಟಕವಾದ ಈಶಾನ್ಯ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NEEPCO Ltd) ಮೂಲಕ ಜಾರಿಗೊಳಿಸಲಾದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ.
  • ಕಮೆಂಗ್ ಜಲವಿದ್ಯುತ್ ಕೇಂದ್ರ ಈಶಾನ್ಯ ಭಾಗದ ರಾಜ್ಯದಲ್ಲಿ 6ನೇ ಜಲವಿದ್ಯುತ್ ಘಟಕವಾಗಿದೆ.
  • ಯೋಜನೆಯು ಎರಡು ಅಣೆಕಟ್ಟುಗಳನ್ನು ಮತ್ತು 3,353 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲು 150 ಮೆಗಾವ್ಯಾಟ್ ನ 4 ಘಟಕಗಳನ್ನು ಹೊಂದಿದೆ.
  • ಸಾಮರ್ಥ್ಯ: 600 ಮೆಗಾವ್ಯಾಟ್
  • ವೆಚ್ಚ: ರೂ. 8,450 ಕೋಟಿ
  • ವಿಸ್ತೀರ್ಣ ಪಶ್ಚಿಮ ಕಮೆಂಗ್ ಜಿಲ್ಲೆಯ 80 ಚದರ ಕಿಲೋಮೀಟರ್‌ಗಿಂತಲೂ ಅಧಿಕ ಪ್ರದೇಶ

ಉದ್ದೇಶ

  • ಈ ಯೋಜನೆಯಿಂದ ಅರುಣಾಚಲ ಪ್ರದೇಶಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗಲಿದೆ. ಸ್ಥಿರತೆ ಮತ್ತು ಏಕೀಕರಣದ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್‌ಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಮೆಂಗ್ ನದಿ

  • ಹಿಂದೆ ಭರಾಲಿ ನದಿ ಎಂದು ಕರೆಯಲಾಗುತ್ತಿತ್ತು.
  • ಉಗಮ : ತವಾಂಗ್ ಜಿಲ್ಲೆಯಲ್ಲಿ ಹಿಮದಿಂದ ಆವೃತವಾದ ಗೋರಿ ಚೆನ್ ಪರ್ವತದ ಕೆಳಗಿನ ಹಿಮನದಿ ಸರೋವರದಿಂದ ಹುಟ್ಟುತ್ತದೆ.
  • ಈಗ ಅರುಣಾಚಲ ಪ್ರದೇಶದಲ್ಲಿ ಕಮೆಂಗ್ ಮತ್ತು ಅಸ್ಸಾಂನಲ್ಲಿ ಜಿಯಾಭಾರಲಿ ಎಂದು ಕರೆಯುತ್ತಾರೆ
  • ಬ್ರಹ್ಮಪುತ್ರ ನದಿಯ ಉಪನದಿಯಾಗಿದೆ.
  • ಉದ್ದ : ಸುಮಾರು 264 ಕಿಲೋಮೀಟರ್ (164 ಮೈಲಿ)
  • ಜಲಾನಯನ ಪ್ರದೇಶ : ಸುಮಾರು 11,843 ಚದರ ಕಿಲೋಮೀಟರ್ (4,573 ಚದರ ಮೈಲಿ)
  • ಉಪನದಿಗಳು

ಎಡ:  ಟೆಂಗಾ, ಬಿಚೋಮ್ ಮತ್ತು ದಿರಂಗ್ ಚು

ಬಲ : ಬೋರ್ ಡಿಕರೈ, ಪಚಾ