Published on: November 14, 2022

ಕರೆನ್ಸಿ ಕಣ್ಗಾವಲಿನಿಂದ ಭಾರತಕ್ಕೆ ವಿನಾಯತಿ

ಕರೆನ್ಸಿ ಕಣ್ಗಾವಲಿನಿಂದ ಭಾರತಕ್ಕೆ ವಿನಾಯತಿ

ಸುದ್ದಿಯಲ್ಲಿ ಏಕಿದೆ?

ಅಮೆರಿಕದ ಹಣಕಾಸು ಇಲಾಖೆ ಭಾರತಸಹಿತ ಐದು ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳನ್ನು ಕರೆನ್ಸಿ ಕಣ್ಗಾವಲು ಪಟ್ಟಿಯಿಂದ ತೆಗೆದು ಹಾಕಿದೆ.

ಮುಖ್ಯಾಂಶಗಳು

  • ಇಟಲಿ, ಮೆಕ್ಸಿಕೋ, ಥಾಯ್ಲೆಂಡ್ ಮತ್ತುವಿಯೆಟ್ನಾಂ ಈ ಪಟ್ಟಿಯಿಂದ ಹೊರಬಂದ ಇತರ ನಾಲ್ಕು ದೇಶಗಳು.
  • ಹಣಕಾಸು ಇಲಾಖೆ ಅಮೆರಿಕದ ಸಂಸತ್ತಿಗೆ ಸಲ್ಲಿಸಿರುವ ದ್ವೈವಾರ್ಷಿಕ ವರದಿ ಪ್ರಕಾರ ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ ಮತ್ತುತೈವಾನ್ ಪ್ರಸ್ತುತ ಈ ಪಟ್ಟಿಯಲ್ಲಿಉಳಿದುಕೊಂಡಿವೆ
  • ರೂಪಾಯಿ ಮೌಲ್ಯ ಚೇತರಿಕೆಗೆ ಅನುಕೂಲ ಪಟ್ಟಿಯಿಂದ ಹೊರ ಬಿದ್ದಿರುವ ದೇಶಗಳು ಮೂರು ಆರ್ಥಿಕ ಮಾನದಂಡಗಳ ಪೈಕಿ ಒಂದನ್ನು ಸತತ ಎರಡು ವರದಿಗಳಲ್ಲಿಪಾಲಿಸಿವೆ ಎಂದು ಹಣಕಾಸು ಇಲಾಖೆ ಹೇಳಿದೆ.

ಏನಿದು ಸಿಎಂಎಲ್?

  • ಆಯಾ ದೇಶಗಳ ಕರೆನ್ಸಿಗಳ ಚಟುವಟಿಕೆಗಳು ಮತ್ತುಅತಿಸೂಕ್ಷ್ಮ ಆರ್ಥಿಕ ನೀತಿಗಳ ಮೇಲೆ ಸಿಎಂಎಲ್ ನಿಗಾ ಇರಿಸುತ್ತದೆ.

ನಿಗಾ ಏಕೆ?

  • ಮುಖ್ಯವಾಗಿ ಅಮೆರಿಕದ ವಿದೇಶಿ ವಿನಿಮಯ ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿಇತರ ರಾಷ್ಟ್ರಗಳು ತಮ್ಮ ಹಿತಾಸಕ್ತಿಕಾಪಾಡಿಕೊಳ್ಳಲು ಅಥವಾ ಲಾಭ ಉದ್ಧೇಶಕ್ಕಾಗಿ ಕಾನೂನುಬಾಹಿರ ಕೃತ್ಯಗಳಲ್ಲಿತೊಡಗಿಕೊಂಡಿವೆ ಎಂದು ಶಂಕಿಸಲಾದ ರಾಷ್ಟ್ರಗಳನ್ನು ಕರೆನ್ಸಿ ಕಣ್ಗ್ಗಾವಲು ಪಟ್ಟಿಗೆ ಸೇರ್ಪಡೆ ಮಾಡಿ ನಿಗಾ ವಹಿಸಲಾಗುತ್ತದೆ. ಜತೆಗೆ, ಸರಕು ಮತ್ತುಸೇವೆಗಳಲ್ಲಿಅಮೆರಿಕದ ವಿದೇಶಿ ವಾಣಿಜ್ಯದ ಅಂದಾಜು ಶೇ.80 ಪಾಲು ಹೊಂದಿರುವ ಪ್ರಮುಖ ದೇಶಗಳ ನೀತಿಗಳನ್ನು ಹಣಕಾಸು ಇಲಾಖೆ ಪರಿಶೀಲಿಸುತ್ತದೆ.

ಭಾರತಕ್ಕೆ ಆಗುವ ಪ್ರಯೋಜನಗಳು

  • ಅಮೆರಿಕದ ಸಿಎಂಎಲ್ನಲ್ಲಿರುವ ದೇಶವನ್ನು ‘ಕರೆನ್ಸಿ ವಂಚಕ’ ಎಂದು ಪರಿಗಣಿಸಲಾಗುತ್ತದೆ. ‘ಸಿಎಂಎಲ್ನಿಂದ ಭಾರತ ನಿರ್ಗಮಿಸಿರುವುದರಿಂದ ಈ ಹಣೆಪಟ್ಟಿಗೆ ಒಳಗಾಗದೆ ಆರ್ಬಿಐ ವಿನಿಮಯ ದರಗಳನ್ನು ನಿಭಾಯಿಸಲು ಬಲವಾದ  ಕ್ರಮಗಳನ್ನು ಕೈಗೊಳ್ಳಬಹುದಾಗಿದೆ’, ಮಾರುಕಟ್ಟೆ ದೃಷ್ಟಿಯಿಂದ ಇದು ದೊಡ್ಡ ಗೆಲುವಾಗಿದೆ. ಜಾಗತಿಕ ಬೆಳವಣಿಗೆಯಲ್ಲಿಭಾರತದ ಬೆಳೆಯುತ್ತಿರುವ ಪಾತ್ರದ ಮಹತ್ವವನ್ನು ಇದು ತೋರಿಸುತ್ತದೆ. ರೂಪಾಯಿ ಚೇತರಿಕೆಗೂ ಇದ ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.