Published on: November 27, 2021

ಕರ್ನಾಟಕಕ್ಕೆ ಶೀಘ್ರವೇ ರಾಜ್ಯ ಕಪ್ಪೆ

ಕರ್ನಾಟಕಕ್ಕೆ ಶೀಘ್ರವೇ ರಾಜ್ಯ ಕಪ್ಪೆ

ಸುದ್ಧಿಯಲ್ಲಿ ಏಕಿದೆ ? ಶೀಘ್ರವೇ ಕರ್ನಾಟಕ ತನ್ನದೇ ಆದ ರಾಜ್ಯ ಕಪ್ಪೆಯೊಂದನ್ನು ಹೊಂದಲಿದೆ ಹಾಗೂ ಈ ರೀತಿ ರಾಜ್ಯ ಕಪ್ಪೆಯೊಂದು ಹೊಂದಿದ ಭಾರತದ ಮೊದಲ ರಾಜ್ಯವಾಗಲಿದೆ.

ಮುಖ್ಯಾಂಶಗಳು

  • ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ, ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಹೇಳಿದ್ದಾರೆ.
  • ಕಪ್ಪೆಗಳ ಪ್ರಭೇದಗಳ ಬಗ್ಗೆ ಜನರಿಗೆ ಉತ್ತಮ ರೀತಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬೋರ್ನಿಯೊದಲ್ಲಿ ಆಯೋಜಿಸಲಾಗುವ ಫ್ರಾಗ್ ರೈನ್ ಮಾದರಿಯಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆದ ಬಳಿಕ,  2002 ರ ಜನವರಿ ತಿಂಗಳಲ್ಲಿ ಶರಾವತಿಯಲ್ಲಿ ಮೊದಲ ಬಾರಿಗೆ ಕಪ್ಪೆ ಹಬ್ಬ ಆಯೋಜನೆಯಾಗಲಿದೆ.

ಕರ್ನಾಟಕ ಇದುವರೆಗೆ ಇವುಗಳನ್ನು ಹೊಂದಿದೆ

  • ರಾಜ್ಯ ಮರ — ಶ್ರೀಗಂಧ
  • ರಾಜ್ಯ ಪ್ರಾಣಿ — ಆನೆ
  • ರಾಜ್ಯ ಚಿಟ್ಟೆ — ಸದರ್ನ್ ಬರ್ಡ್ ವಿಂಗ್
  • ರಾಜ್ಯ ಪಕ್ಷಿ — ಭಾರತೀಯ ರೋಲರ್
  • ರಾಜ್ಯ ಹೂವು — ಕಮಲ
  • ರಾಜ್ಯ ಮೀನು — ಕರ್ನಾಟಿಕ್ ಕಾರ್ಪ್
  • ರಾಜ್ಯದ ಹಣ್ಣು – ಮಾವು