Published on: December 7, 2022
ಕರ್ನಾಟಕ ಕ್ರೀಡಾ ಪ್ರಶಸ್ತಿಗಳು
ಕರ್ನಾಟಕ ಕ್ರೀಡಾ ಪ್ರಶಸ್ತಿಗಳು
ಸುದ್ದಿಯಲ್ಲಿ ಏಕಿದೆ?
ರಾಜ್ಯ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ನೀಡುವ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ವಿಜೇತರಿಗೆ ನಗದು ಪುರಸ್ಕಾರ ಹಾಗೂ 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮುಖ್ಯಾಂಶಗಳು
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯದ ಹಲವು ಕ್ರೀಡಾ ಸಾಧಕರು ಆಯ್ಕೆಯಾಗಿದ್ದಾರೆ.
2021ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು
- ಚೇತನ್ ಬಿ – ಅಥ್ಲೇಟಿಕ್ಸ್
- ಶಿಖಾ ಗೌತಮ್ – ಬ್ಯಾಡ್ಮಿಂಟನ್
- ಕೀರ್ತಿ ರಂಗಸ್ವಾಮಿ – ಸೈಕ್ಲಿಂಗ್
- ಅದಿತ್ರಿ ವಿಕ್ರಾಂತ್ ಪಾಟೀಲ್ – ಫೆನ್ಸಿಂಗ್
- ಅಮೃತ್ ಮುದ್ರಾಬೆಟ್ – ಜಿಮ್ನಾಸ್ಟಿಕ್
- ಶೇಷೇಗೌಡ ಬಿ.ಎಂ – ಹಾಕಿ
- ರೇಷ್ಮಾ ಮರೂರಿ – ಲಾನ್ ಟೆನ್ನಿಸ್
- ತನೀಷ್ ಜಾರ್ಜ್ ಮ್ಯಾಥ್ಯು – ಈಜು
- ಯಶಸ್ವಿನಿ ಘೋರ್ಪಡೆ – ಟೇಬಲ್ ಟೆನ್ನಿಸ್
- ಹರಿಪ್ರಸಾದ್ – ವಾಲಿಬಾಲ್
- ಸೂರಜ್ ಸಂಜು ಅಣ್ಣೀಕೇರಿ – ಕುಸ್ತಿ
- ಹೆಚ್.ಎಸ್.ಸಾಕ್ಷಾತ್ – ನೆಟ್ ಬಾಲ್
- ಮನೋಜ್ ಬಿ.ಎಂ – ಬಾಸ್ಕೆಟ್ ಬಾಲ್.
- ರಾಘವೇಂದ್ರ ಪಿ – ಪ್ಯಾರಾ ಅಥ್ಲೆಟಿಕ್ಸ್
- ಏಕಲವ್ಯ ಪ್ರಶಸ್ತಿಯು ಏಕಲವ್ಯ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ, ಸಮವಸ್ತ್ರ, 2 ಲಕ್ಷ ರೂ. ನಗದು ಬಹುಮಾನ ಒಳಗೊಂಡಿರುತ್ತದೆ.
2021ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು
- ಅಲ್ಕಾ ಎನ್ ಫಡತಾರೆ – ಸೈಕ್ಲಿಂಗ್
- ಬಿ.ಆನಂದ್ ಕುಮಾರ್ – ಪ್ಯಾರಾ ಬ್ಯಾಡ್ಮಿಂಟನ್
- ಹೆಚ್.ಎಲ್.ಶೇಖರಪ್ಪ – ಯೋಗ
- ಕೆ.ಸಿ.ಅಶೋಕ್ – ವಾಲಿಬಾಲ್
- ರವೀಂದ್ರ ಶೆಟ್ಟ – ಕಬ್ಬಡ್ಡಿ
- ಬಿ.ಜಿ.ಅಮರನಾಥ್ – ಯೋಗ
- ಜೀವಮಾನ ಸಾಧನೆ ಪ್ರಶಸ್ತಿಯು ಪ್ರಶಸ್ತಿ ಫಲಕ, ಸಮವಸ್ತ್ರ, 1.50 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕಾರ
- ಕವನ ಎಂ.ಎಂ – ಬಾಲ್ ಬ್ಯಾಡ್ಮಿಂಟನ್
- ಬಿ.ಗಜೇಂದ್ರ – ಗುಂಡು ಎತ್ತುವುದು
- ಶ್ರೀಧರ್ – ಕಂಬಳ
- ರಮೇಶ್ ಮಳವಾಡ್ – ಖೋ-ಖೋ
- ವೀರಭದ್ರ ಮುಧೋಳ್ – ಮಲ್ಲಕಂಬ
- ಖುಷಿ ಹೆಚ್ – ಯೋಗ
- ಲೀನಾ ಅಂತೋಣಿ ಸಿದ್ದಿ – ಮಟ್ಟಿ ಕುಸ್ತಿ
- ದರ್ಶನ್ ಜೆ – ಕಬ್ಬಡ್ಡಿ
- ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸಮವಸ್ತ್ರ, 1 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
2021-23ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರು
- BMS ಕಾಲೇಜು, ಮಂಗಳ ಪ್ರೆಂಡ್ಸ್ ಸರ್ಕಲ್, ನಿಟ್ಟೆ ಎಜುಕೇಷನ್ ಟ್ರಸ್ಟ್ ಗೆ ಪ್ರಶಸ್ತಿ ಪ್ರದಾನಮಾಡಲಾಗಿದೆ.
-
ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 5 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.