Published on: August 23, 2022

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ:

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ:

ಸುದ್ದಿಯಲ್ಲಿ ಏಕಿದೆ?

ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಮುಖ್ಯಾಂಶಗಳು

  • ಮಂಡ್ಯ ಜಿಲ್ಲೆಯ ವ.ನಂ.ಶಿವರಾಮು ಅವರಿಗೆ ಪ್ರತಿಷ್ಠಿತ ಡಾ|| ಜಿ.ಶಂ.ಪರಮಶಿವಯ್ಯ ಪ್ರಶಸ್ತಿ ಮತ್ತು ಬಾಗಲಕೋಟೆಯ ಡಾ ಶಂಭು ಬಳಿಗಾರ ಅವರಿಗೆ ಡಾ ಬಿ.ಎಸ್.ಗದ್ದಿಗಿಮಠ ಪ್ರಶಸ್ತಿ ಘೋಷಿಸಲಾಗಿದೆ.
  • ಈ ಎರಡೂ ಪ್ರಶಸ್ತಿಗಳಿಗೆ ಕನ್ನಡ ಜಾನಪದ ಲೋಕದಲ್ಲಿ ತನ್ನದೇ ಆದ ಗೌರವವಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಒಟ್ಟು 30 ಜಾನಪದ ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ ಘೋಷಿಸಲಾಗಿದೆ.
  • ಈ ಪ್ರಶಸ್ತಿಯು ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ. ೨೫೦೦೦ ಮತ್ತು ಇಬ್ಬರಿ ಕ್ಷೇತ್ರ ತಜ್ಞ ರಿಗೆ ೫೦೦೦೦ ರೂ. ಜೊತೆಗೆ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ

ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು

  • ರಾಧಮ್ಮ (ಜನಪದ ಕರಕುಶಲ ಕಲೆ, ಉಡುಪಿ),
  • ಸಾಂಬಯ್ಯ ಹಿರೇಮಠ (ಜಾನಪದ ಹಾಡುಗಾರಿಕೆ, ಧಾರವಾಡ),
  • ನಾಗಮ್ಮ ಹೊನ್ನಪ್ಪಜೋಗಿ (ಸೋಬಾನೆ ಪದ, ಗದಗ),
  • ವೀರಭದ್ರಪ್ಪ ಯಲ್ಲಪ್ಪ ದಳವಾಯಿ (ಏಕತಾರಿ ಪದ, ವಿಜಯಪುರ),
  • ಶಿವನವ್ವ ಮಲ್ಲಪ್ಪ ಭಾವಿಕಟ್ಟಿ (ಹಂತಿಪದ, ಬಾಗಲಕೋಟೆ),
  • ಚಂದ್ರಪ್ಪ ಯಲ್ಲಪ್ಪ ಭಜಂತ್ರಿ (ಶಹನಾಯಿ, ಹಾವೇರಿ),
  • ಪುಂಡಲೀಕ ಮಾದರ (ಹಲಗೆ ವಾದನ, ಬೆಳಗಾವಿ),
  • ಶಾರದಾ ಮಹದೇವ ಮೋಗೇರ (ಸಂಪ್ರದಾಯದ ಪದ, ಉತ್ತರ ಕನ್ನಡ ಜಿಲ್ಲೆ),
  • ಮಾತಾ ಅಂಜಿನಮ್ಮ ಜೋಗತಿ (ಜೋಗತಿ ನೃತ್ಯ, ಬಳ್ಳಾರಿ),
  • ಪ್ರಕಾಶಯ್ಯ ನಂದಿ (ಗೀಗೀ ಪದ, ರಾಯಚೂರು),
  • ದೊಡ್ಡ ಯಮನೂರಪ್ಪ ಭೀಮಪ್ಪ ಭಜಂತ್ರಿ (ಶಹನಾಯಿ, ಕೊಪ್ಪಳ), ಕ
  • ರಬಸಯ್ಯ ಶಂಕರಯ್ಯ ಮಠಪತಿ (ತತ್ವಪದ, ಕಲಬುರ್ಗಿ),
  • ರಾಧಾಬಾಯಿ ಕೃಷ್ಣರಾವ ಮಾಲಿಪಾಟೀಲ (ಸಂಪ್ರದಾಯದ ಹಾಡುಗಳು, ಯಾದಗಿರಿ),
  • ಭಾರತೀಬಾಯಿ (ಲಂಬಾಣಿ ನೃತ್ಯ, ಬೀದರ್).
  • ಚಿನ್ನಮ್ಮಯ್ಯ (ಜಾನಪದ ಕಥೆ, ಬೆಂಗಳೂರು ನಗರ),
  • ಹುಚ್ಚ ಹನುಮಯ್ಯ (ಜಾನಪದ ವೈದ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ),
  • ಜಿ.ಗುರುಮೂರ್ತಿ (ತತ್ವಪದ, ರಾಮನಗರ)
  • ಹನುಮಕ್ಕ (ಸೋಬಾನೆ ಪದ, ತುಮಕೂರು),
  • ಡಿ.ಆರ್.ರಾಜಪ್ಪ (ಜಾನಪದ ಗಾಯನ, ಕೋಲಾರ),
  • ಎಂ.ಸಿ.ದೇವೇಂದ್ರಪ್ಪ (ಡೊಳ್ಳು ಕುಣಿತ, ಶಿವಮೊಗ್ಗ),
  • ಡಾ ಕಾ ರಾಮೇಶ್ವರಪ್ಪ (ಜಾನಪದ ಗೀತೆ, ಚಿತ್ರದುರ್ಗ),
  • ಡಿ.ಜಿ.ನಾಗರಾಜಪ್ಪ (ಭಜನೆ, ದಾವಣಗೆರೆ),
  • ನಾರಾಯಣಸ್ವಾಮಿ (ಪಂಡರಿ ಭಜನೆ, ಚಿಕ್ಕಬಳ್ಳಾಪುರ),
  • ಚನ್ನಮ್ಮ (ತತ್ವಪದ, ಮಂಡ್ಯ),
  • ಗುರುರಾಜ್ (ತಂಬೂರಿ ಪದ, ಮೈಸೂರು),
  • ಶ್ರೀರಂಗಶೆಟ್ಟಿ (ರಂಗದ ಕುಣಿತ, ಹಾಸನ),
  • ಅಣ್ಣುಶೆಟ್ಟಿ (ಭೂತಾರಾಧನೆ, ದಕ್ಷಿಣ ಕನ್ನಡ ಜಿಲ್ಲೆ),
  • ಶಿವರುದ್ರಪ್ಪಸ್ವಾಮಿ (ವೀರಭದ್ರನ ನೃತ್ಯ, ಚಾಮರಾಜನಗರ),
  • ಕೆ.ಎಚ್.ರೇವಣಸಿದ್ದಪ್ಪ (ವೀರಗಾಸೆ, ಚಿಕ್ಕಮಗಳೂರು),
  • ಕೆ.ಸಿ.ದೇವಕಿ (ಜಾನಪದ ಹಾಡುಗಾರಿಕೆ, ಕೊಡಗು).

ಜಿ.ಶಂ.ಪರಮಶಿವಯ್ಯ 

  • ೧೨.೧೧.೧೯೩೩೧೭.೬.೧೯೯೫ ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ವಿದ್ವಾಂಸ, ಜಾನಪದ ಭೀಷ್ಮ, ಜಾನಪದ ಗಣಿ ಮುಂತಾದ ಹಲವಾರು ವಿಶೇಷಣಗಳಿಗೆ ಪಾತ್ರರಾಗಿದ್ದ ಜೀಶಂಪ ಎಂದೇ ಖ್ಯಾತರಾದ ಜೀ.ಶಂ. ಪರಮಶಿವಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಬಲ ಜೀರಹಳ್ಳಿಯಲ್ಲಿ ೧೯೩೩ರ ನವಂಬರ್‌‌೧೨ ರಂದು.
  • ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ (೧೯೭೭). ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವ, ರಾಜ್ಯಪ್ರಶಸ್ತಿ (೧೯೮೭). ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಹದಿಮೂರನೆಯ ಅಧಿವೇಶನದ ಅಧ್ಯಕ್ಷತೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ (೧೯೯೧) ಅಧ್ಯಕ್ಷ ಪದವಿ ಮುಂತಾದವು ಇವರು ಪಡೆದ ಪ್ರಶಸ್ತಿಗಳಾಗಿವೆ. ಅದೇ ವರ್ಷ ‘ಜಾನಪದ ಸಂಭಾವನೆ’ ಎಂಬ ಅಭಿನಂದನ ಗ್ರಂಥವೂ ಅರ್ಪಿತ.
  • ಕೃತಿ: ‘ಹೊನ್ನಬಿತ್ತೇವು ಹೊಲಕೆಲ್ಲ’ .

ಡಾ ಬಿ.ಎಸ್.ಗದ್ದಿಗಿಮಠ

  • ೦೭.೦೧.೧೯೧೭೩೦–೧೦.೧೯೬೦ ‘ಜನಪದ ಗೀತೆಗಳು’ ಎಂಬ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಜಾನಪದ ಕ್ಷೇತ್ರದಲ್ಲಿ ಪಿಎಚ್‌. ಡಿ. ಪಡೆದವರಲ್ಲಿ ಮೊದಲಿಗರು ಎಂಬ ಪ್ರಶಂಸೆಗೆ ಪಾತ್ರರಾಗಿರುವ ಗದ್ದಗಿಮಠರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಕೆರೂರಿನಲ್ಲಿ ೭.೧.೧೯೧೭ ರಲ್ಲಿ. ‘ಜನಪದ ಗೀತೆಗಳು’ ಎಂಬ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ೧೯೫೫ ರಲ್ಲಿ ಡಾಕ್ಟರೇಟ್‌ ಪಡೆದರು.
  • ತಾವು ಸಂಗ್ರಹಿಸಿದ ಜನಪದ ಗೀತೆಗಳನ್ನು ಪ್ರಕಟಿಸಲು ‘ಜನಪದ ಕಾವ್ಯಮಾಲೆ’ ಎಂಬ ಒಂದು ಮಾಲೆಯನ್ನೇ ಪ್ರಾರಂಭಿಸಿ ‘ನಾಲ್ಕು ನಾಡಪದಗಳು’, ‘ಕಂಬಿಯ ಪದಗಳು’, ‘ಜನತಾಗೀತೆಗಳು’, ‘ಲೋಕಗೀತೆಗಳು’, ಕುಮಾರ ರಾಮನ ದುಂದುಮೆ (ಬಾಜನಗಬ್ಬ-ಒಂದು ಬಗೆಯ ಕಾವ್ಯ) ಗಳು ಎಂಬ ಗ್ರಂಥಗಳನ್ನು ಪ್ರಕಟಿಸಿದರು. ‘ಮಲ್ಲಮಲ್ಲಾಣಿ’ ಮತ್ತು ಕುಮಾರ ರಾಮನ ದುಂದುವೆಗಳಲ್ಲಿನ ಮೂಲ ಜಾನಪದ ಆಶಯಕ್ಕೆ ಚ್ಯುತಿ ಬಾರದಂತೆ, ಕಾಲ್ಪನಿಕ ಕಥಾವೃತ್ತದಿಂದ ಬರೆದ ‘ಅರ್ಜುನ ಜೋಗಿಯ ಹಾಡುಗಬ್ಬ’ ಕೃತಿಯು ಓದುಗರ ಗಮನ ಸೆಳೆದ ಕೃತಿ.

ಕರ್ನಾಟಕ ಜಾನಪದ ಅಕಾಡೆಮಿ

  • ಕರ್ನಾಟಕದ ಸಮೃಧ್ದ ಜಾನಪದವನ್ನೂಯಕ್ಷಗಾನ ಕಲೆಯನ್ನೂ ಪ್ರೋತ್ಸಹಿಸುವ ಮತ್ತು ಅವುಗಳನ್ನು ಕಾಪಾಡಿಕೊಂಡು ಬರುವ ದೃಷ್ಠಿಯಿಂದ ಈ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದೆ (೧೯೮೦). ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಜಾನಪದ ವಿದ್ವಾಂಸರು ಮತ್ತು ಕಲೆಗಾರರಿಗೆ ಜಾನಪದ ತಜ್ಞ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ಅಕಾಡೆಮಿಯ ಉದ್ದೇಶಗಳು

  • ಜಾನಪದ ಮತ್ತು ಯಕ್ಷಗಾನ ಕಲೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರದೇಶಗಳ ನಡುವೆ ವಿಚಾರ ವಿನಿಮಯ, ಜನಪದ ಸಾಹಿತ್ಯ ಸಂಗ್ರಹಣೆ, ಪ್ರಕಟಣೆ, ಗ್ರಂಥಭಂಡಾರದ ಸ್ಥಾಪನೆ, ಕಲೆ ಕಲಾವಿದರನ್ನು ಗುರುತಿಸಿ ಗೌರವಿಸುವುದು, ಜಾನಪದಕ್ಕೆ ಅಗತ್ಯ ಪ್ರಚಾರ ಹಾಗೂ ಸೌಲಭ್ಯ ನೀಡುವುದು ಮುಂತಾದವುಗಳು.

ಅಕಾಡೆಮಿ ಅಧ್ಯಕ್ಷರು, ಸದಸ್ಯರು ಮತ್ತು ಸಮಿತಿಗಳು

  • ಅಧ್ಯಕ್ಷರೇ ಅಕಾಡೆಮಿಯ ಮುಖ್ಯಸ್ಥರು ಇವರ ಕಾಲಾವಧಿ ಮೂರುವರ್ಷಗಳು ಇವರೊಡನೆ ೧೦ ನಾಮಕರಣಗೊಂಡ ಸದಸ್ಯರಿರುತ್ತಾರೆ. ಇವರ ಕಾಲಾವಧಿ ಮೂರುವರ್ಷಗಳು. ಸದಸ್ಯರನ್ನು ಸರ್ಕಾರ ನಾಮಕರಣ ಮಾಡುತ್ತದೆ. ಹೀಗೆ ನಾಮಕರಣಗೊಂಡ ಸದಸ್ಯರು ಮತ್ತೆ ಮೂರು ಸಹ ಸದಸ್ಯರನ್ನು ಆಯ್ದುಕೊಳ್ಳಲು ಅವಕಾಶವಿದೆ. ಆಡಳಿತದಲ್ಲಿ ನೆರವು ನೀಡಲು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಒಬ್ಬರು ರಿಜಿಸ್ಟಾರ್ ಮತ್ತು ಲೆಕ್ಕಪತ್ರಗಳನ್ನು ನೋಡಿಕೊಳ್ಳಲು ಒಬ್ಬರು ವಿತ್ತಾಧಿಕಾರಿಗಳನ್ನೂ ಸರ್ಕಾರ ನಿಯೋಜಿಸುವುದು. ಕಾರ್ಯಕ್ರಮಗಳನ್ನು ರೂಪಿಸಲು, ಯೋಜನೆಗಳನ್ನು ತಯಾರಿಸಲು ಅಧ್ಯಕ್ಷರು, ಅಧಿಕಾರಿಗಳ ಜೊತೆ ಸ್ಥಾಯಿಸಮಿತಿಗಳೂ ಉಪಸಮಿತಿಗಳೂ ಇರುತ್ತವೆ. ಯೋಜನೇತರ ಕಾರ್ಯಕ್ರಮಗಳನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಜಾರಿಗೊಳಿಸಲಾಗುತ್ತದೆ.

ಅಕಾಡೆಮಿ ಹೊರ ತಂದಿರುವ ಪತ್ರಿಕೆಗಳು

  • ಜಾನಪದ ಗಂಗೋತ್ರಿ
  • ಜಾನಪದ ಸಮಾಚಾರ