Published on: March 27, 2023

ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ

ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ


ಸುದ್ದಿಯಲ್ಲಿ ಏಕಿದೆ? ಮೊದಲ ಬಾರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ, ‘ಶ್ರವಣದೋಷ ಮುಕ್ತ ಕರ್ನಾಟಕ’ ಅಡಿಯಲ್ಲಿ ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗೆ 2022-23ನೇ ಸಾಲಿನಲ್ಲಿ 32 ಕೋಟಿ ರೂ. ಅನುದಾನ ನೀಡಲಾಗಿದ್ದು, ಸಲಕರಣೆ ಮತ್ತುಸಾಧನ ಸಾಮಗ್ರಿ ಒದಗಿಸಲಾಗುತ್ತಿದೆ.


ಮುಖ್ಯಾಂಶಗಳು

  • ‘ಶ್ರವಣದೋಷ ಮುಕ್ತಕರ್ನಾಟಕ’ ಘೋಷವಾಕ್ಯದಡಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯನ್ನು ಜಾರಿ ಮಾಡಲಾಗಿದೆ.
  • ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ.
  • ಇತರ ತೃತೀಯ ಆರೈಕೆ ಕೇಂದ್ರಗಳನ್ನು ವಿಭಾಗೀಯ ಮಟ್ಟದಲ್ಲಿಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ನೋಂದಾಯಿಸಲು ಕ್ರಮ ಕೈಗೊ ಳ್ಳಲಾಗಿದೆ.
  • ನೋಂದಾಯಿತ ಆಸ್ಪತ್ರೆಗಳಲ್ಲಿಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನುರಿತ ತಜ್ಞ ವೈದ್ಯರಿಂದ ನಡೆಸಲಾಗುತ್ತದೆ.

ಕಿವುಡುತನ ಮತ್ತು ಅದಕ್ಕೆ ಕಾರಣಗಳು

  • ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 0-6 ವರ್ಷದೊಳಗಿನ ಮಕ್ಕಳಲ್ಲಿಶ್ರವಣದೋಷ ಹೊಂದಿರುವ 1,939 (ಶೇ. 0.02) ಮಕ್ಕಳು ಇದ್ದಾರೆ.
  • ಕಿವುಡುತನ ಹುಟ್ಟುನಿಂದ ಬಂದಿರುವ ಸಮಸ್ಯೆ ಇದಾಗಿದೆ. ತಾಯಿಯ ಗರ್ಭಾವ್ಯಸ್ಥೆಯಲ್ಲಿಸೋಂಕು ಇದ್ದರೆ ಭ್ರೂಣಕ್ಕೆ ಕಿವುಡುತನ ಉಂಟಾಗುತ್ತದೆ.
  • ಜೆನೆಟಿಕ್ಸ್, ಜೋರಾದ ಶಬ್ದ, ಸೋಂಕು, ದೀರ್ಘಕಾಲದ ಕಾಯಿಲೆಗಳು ( ಟಿ.ಬಿ, ಕ್ಯಾನ್ಸರ್‌)
  • ವೈರಾಣುಗಳು, ಎಚ್ಐವಿ, ಔಷಧ ಮತ್ತು ಮಗು ಹುಟ್ಟುವ ಸಮಯದಲ್ಲಿಬರುವ ಜಾಂಡೀಸ್, ಸೆಪ್ಸಿಸ್ ಮತ್ತು ಬಾಲ್ಯದಲ್ಲಿಉಂಟಾಗುವ ಗಾಯಗಳು, ಸೋಂಕು, ಮೆನಿಂಜೈಟಿಸ್, ಎನ್ಸೆಫಾಲಿಟಿಸ್ನಿಂದಲೂ ಕಿವುಡು ಸಮಸ್ಯೆ ಕಾಡುತ್ತದೆ.
  • ಅಲ್ಲದೆ, ರಕ್ತಸಂಬಂಧದಲ್ಲಿಮದುವೆಯಾಗುವುದು, ರುಬೆಲ್ಲಾದ ಸೋಂ ಕಿನಿಂದಲೂ ಮಗುವಿಗೆ ಕಿವುಡು ಸಮಸ್ಯೆ ಉಂಟಾಗುತ್ತದೆ.

ಯೋಜನೆಯ ವಿವರ

  • 6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ ಜಾರಿಗೆ ತರಲಾಗಿದೆ.
  • ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆ ಸೇರಿ ಇತರ ಔಷಧಗಳಿಗೆ ಅಂದಾಜು 6.27 ಲಕ್ಷ ರೂ. ತಗಲುತ್ತದೆ. ಈ ವೆಚ್ಚವನ್ನು ಸರ್ಕಾರ ಭರಿಸಲಿದೆ. ಉಳಿದ ಅನುದಾನದಲ್ಲಿಇಂಪ್ಲಾಂಟ್ಗಳು ಮತ್ತುಶ್ರವಣ ಸಾಧನ ಖರೀದಿಸಲು ಕ್ರಮವಹಿಸಲಾಗಿದೆ.
  • ಉಳಿದ ಶಸ್ತ್ರಚಿಕಿತ್ಸಾ ಸೇವೆ ಒದಗಿಸಲು 25 ತೃತೀಯ ಸೇವೆಗಳ ಆರೈಕೆ ಕೇಂದ್ರ ನೋಂದಾಯಿಸಲಾಗಿದೆ. ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್.ಪಿ.ಪಿ.ಸಿ.ಡಿ.)ದಡಿ ಕಾರ್ಯನಿರ್ವಹಿಸುವ ಶ್ರವಣಶಾಸ್ತ್ರ ತಂಡಗಳು ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮ (ಆರ್.ಬಿ.ಎಸ್.ಕೆ.)ದಡಿ ಸಂಚಾರಿ ಆರೋಗ್ಯ ತಂಡಗಳ ಸಹಯೋಗದೊಂದಿಗೆ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಗುರುತಿಸಲಾದ ಅರ್ಹ ಮಕ್ಕಳನ್ನು ಹೆಚ್ಚಿನ ಮೌಲ್ಯಮಾಪನ ಮತ್ತು ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ

ಏನಿದು ಕಾಕ್ಲಿಯರ್ ಇಂಪ್ಲಾಂಟ್?

  • ಕಾಕ್ಲಿಯರ್ ಇಂಪ್ಲಾಂಟ್ ಒಂದು ಸಣ್ಣ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಈ ಸಾಧನವು ತೀವ್ರ ಮತ್ತು ಆಳವಾದ ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ. ಒಳ ಕಿವಿಯ ಕಾಕ್ಲಿಯಾಗೆ ಸೇರಿಸಿ ಇಂಪ್ಲಾಂಟ್  ಅಳವಡಿಸಿದ ನಂತರ ಪ್ರೊಸೆಸರ್ ಅನ್ನು ಕಿವಿಯ ಹಿಂದೆ ಇರಿಸಲಾಗುತ್ತದೆ, ನಿಷ್ಕ್ರಿಯ ಶ್ರವಣ ಸಾಧನ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು ಆಡಿಯೋ ಸಂಕೇತಗಳನ್ನು ಮೆದುಳಿಗೆ ರವಾನಿಸುತ್ತದೆ