Published on: November 22, 2022
ಕಾಶಿ- ತಮಿಳು ಸಂಗಮಮ್’
ಕಾಶಿ- ತಮಿಳು ಸಂಗಮಮ್’
ಸುದ್ದಿಯಲ್ಲಿ ಏಕಿದೆ?
ಒಂದು ತಿಂಗಳ ಕಾಲ ನಡೆಯುವ ಕಾಶಿ–ತಮಿಳು ಸಮಾಗಮ ಕಾರ್ಯಕ್ರಮಕ್ಕೆ ವಾರಾಣಸಿಯ ಬನಾರಸ್ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಮುಖ್ಯಾಂಶಗಳು
- ಇದು ಕೇಂದ್ರ ಸರ್ಕಾರದ ‘ಆಜಾದಿ ಕ ಅಮೃತ್ ಮಹೋತ್ಸವ್’ ಕಾರ್ಯಕ್ರಮದ ಭಾಗವಾಗಿದೆ.
- ಒಂದು ಭಾರತ, ಶ್ರೇಷ್ಠ ಭಾರತ’ ಎಂಬ ಉದ್ದೇಶದ ಕಾರ್ಯಕ್ರಮ ತಮಿಳು ಭಾಷೆ ಮತ್ತು ಸಂಸ್ಕೃತಿಯ ಅನಾವರಣವಾಗಿದೆ.
- ತಮಿಳುನಾಡಿನಿಂದ 2500ಕ್ಕೂ ಹೆಚ್ಚು ಪ್ರತಿನಿಧಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ‘ತಿರುಕ್ಕುರಳ್’ ಪುಸ್ತಕವನ್ನು ಮತ್ತು ಅದರ 13 ಭಾಷೆಗಳ ಅನುವಾದವನ್ನು ಬಿಡುಗಡೆ ಮಾಡಿದರು.
- ಮಹಾನ್ ಕವಿ ಮತ್ತು ಕ್ರಾಂತಿಕಾರಿ ಶ್ರೀ ಸುಬ್ರಮಣ್ಯ ಭಾರತಿ ಅವರು ತಮಿಳುನಾಡು ಮೂಲದವರಾಗಿದ್ದರೂ ಕಾಶಿಯಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದರು ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.
- ಆಯೋಜಕರು : ಕೇಂದ್ರದ ಶಿಕ್ಷಣ ಸಚಿವಾಲಯ
- ಸಹಯೋಗ: ಸಂಸ್ಕೃತಿ, ಜವಳಿ, ರೈಲ್ವೆ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಉತ್ತರ ಪ್ರದೇಶ ಸರ್ಕಾರ
- ಅನುಷ್ಠಾನ :ಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವು ಕಾರ್ಯಕ್ರಮದ ಎರಡು ಅನುಷ್ಠಾನ ಸಂಸ್ಥೆಗಳಾಗಿವೆ.
- ಭಾಗವಹಿಸುವವರು “ ಕಾರ್ಯಕ್ರಮದಲ್ಲಿ ಈ ಎರಡೂ ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರೊಂದಿಗೆ ಇತರ ಹಂತಗಳ ಜನರು ಒಟ್ಟಿಗೆ ಸೇರಲು, ಅವರ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಪರಸ್ಪರ ವಿನಿಮಯಮಾಡಿಕೊಳ್ಳಲು ಮತ್ತು ಪರಸ್ಪರರ ಅನುಭವದಿಂದ ಕಲಿಯಲೋಸುಗ ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಉದ್ದೇಶ
- ದೇಶದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಕಲಿಕಾ ಕ್ಷೇತ್ರಗಳಲ್ಲಿ ಎರಡು ತಾಣಗಳಾದ ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಂಬಂಧಗಳನ್ನು ಆಚರಿಸುವುದು, ಪುನರುಚ್ಚರಿಸುವುದು ಮತ್ತು ಮರುಶೋಧಿಸುವುದಾಗಿದೆ.
ಸುಬ್ರಮಣ್ಯ ಭಾರತಿ
- 1882 ರ ಡಿಸೆಂಬರ್ 11 ರಂದು ಎಟ್ಟಾಯಪುರಂನಲ್ಲಿ ಜನಿಸಿದರು
- ಇವರು ಒಬ್ಬ ತಮಿಳು ಬರಹಗಾರ, ಕವಿ, ಪತ್ರಕರ್ತ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ಬಹುಭಾಷಾವಾದಿ.
- “ಮಹಾಕವಿ ಭಾರತಿ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಆಧುನಿಕ ತಮಿಳು ಕಾವ್ಯದ ಪ್ರವರ್ತಕರಾಗಿದ್ದರು ಮತ್ತು ಸಾರ್ವಕಾಲಿಕ ಶ್ರೇಷ್ಠ ತಮಿಳು ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
- ಅವರ ಹಲವಾರು ಕೃತಿಗಳು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ದೇಶಭಕ್ತಿಗೀತೆಗಳನ್ನು ಒಳಗೊಂಡಿವೆ.
- 2021ರಲ್ಲಿ ಇವರ ಪುಣ್ಯಸ್ಮರಣೆಯ ದಿನ(ಸೆಪ್ಟೆಂಬರ್ 11)ವನ್ನು ‘ಮಹಾಕವಿ ದಿನ’ವನ್ನಾಗಿ ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
- ಅವರ ಪ್ರಬಂಧ ಮತ್ತು ಕವನಗಳ ಸಂಕಲನವನ್ನು ಮನಿತಿಲ್ ಉರಿತಿ ವೆಂಡಮ್ ಎಂಬ ಪುಸ್ತಕದಲ್ಲಿ ಹೊರ ತಂದು ಶಾಲಾ ಮಕ್ಕಳಲ್ಲಿ ವಿತರಿಸಲಾಯಿತು.