Published on: November 15, 2022
ಕಿನ್ನಾಳ ಕಾಮಧೇನು
ಕಿನ್ನಾಳ ಕಾಮಧೇನು

ಸುದ್ದಿಯಲ್ಲಿ ಏಕಿದೆ?
ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ವೊಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಕೈಜೋಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆಯ ಕಾಮಧೇನುವನ್ನು ಉಡುಗೊರೆಯಾಗಿ ನೀಡಿದ್ದಾರೆ.
ವೊಕಲ್ ಫಾರ್ ಲೋಕಲ್ ಅಭಿಯಾನ
- ಸ್ವಾವಲಂಬಿ ಭಾರತ ನಿರ್ಮಿಸಲು ಸ್ಥಳೀಯ ಜನರ ಜೀವನ ಸುಧಾರಿಸಲು ವೊಕಲ್ ಫಾರ್ ಲೋಕಲ್ ಕಾರ್ಯಕ್ರಮ ಜಾರಿಗೆ ತಂದಿರುವುದು ಸ್ಥಳಿಯ ರೈತರ, ಕರಕುಶಲ ಕಾರ್ಮಿಕರ, ಸ್ಥಳೀಯ ವ್ಯಾಪಾರಸ್ಥರ ಜೀವನ ಮಟ್ಟ ಸುಧಾರಿಸಲು ಇದು ಸಹಾಯಕಾರಿಯಾಗಿದೆ
‘ಕಿನ್ನಾಳ’
- ಕೊಪ್ಪಳವನ್ನು ಮೊದಲು ‘ಕೊಪಣಚಳ ಎಂದು ಕರೆಯಲಾಗುತ್ತಿತ್ತು. ಈ ಜಿಲ್ಲೆಯ ಒಂದು ಚಿಕ್ಕ ಗ್ರಾಮವೇ ಕಿನ್ನಾಳ. ಈ ಗ್ರಾಮ ಕರಕುಶಲ ಕಲೆಗೆ ಹೆಸರುವಾಸಿ .
- ‘ಕಿನ್ನಾಳ’ ಎಂದರೆ ‘ಆಟಿಕೆ’ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. “ಕಚ್ಚಾವಸ್ತುಗಳನ್ನು ಬಳಸಿ ಆಟಿಕೆಗಳ ವಸ್ತುಗಳಿಗೆ ವಾಸ್ತವಿಕ ಮತ್ತು ವಿನ್ಯಾಸವನ್ನು ಕರಕುಶಲ ಸ್ಪರ್ಶ ನೀಡುವ ಕಲೆ ಕಿನ್ನಾಳ ಕಲೆ”.
- ಕಿನ್ನಾಳ ಕುಶಲ ಕರ್ಮಿಗಳನ್ನು ಚಿತ್ರಕಾರರು ಎಂದು ಸಹ ಕರೆಯಲಾಗುತ್ತದೆ. ವಿಜಯ ನಗರ ಸಾಮ್ರಾಜ್ಯದ ಅರಸರು ಹಾಗೂ ಹೈದ್ರಾಬಾದ್ ನಿಜಾಮನ್ ಕಾಲದ ಈ ಕಿನ್ನಾಳ ಕಲೆಗೆ ಬಹು ಬೇಡಿಕೆ ಮತ್ತು ಪ್ರೊತ್ಸಾಹ ಇತ್ತು ಎನ್ನಲಾಗುತ್ತದೆ.
ಕಿನ್ನಾಳ ಕಲೆಯ ಇತಿಹಾಸ-ಹಿನ್ನೆಲೆ
- ಕಿನ್ನಾಳ ಕಲೆ ಭಾರತದ ಭೌಗೋಳಿಕ ಚಿಹ್ನೆಗಳ ಪಟ್ಟಿಯಲ್ಲಿ ಸೇರಿದೆ.
- ಕಿನ್ನಾಳ ಒಂದು ಕಾಲದ ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿತ್ತೆಂದು ಹಂಪಿಯ ಪಂಪಾ ಪತೇಶ್ವರ ದೇವಾಲಯದ ಮರದ ರಥದಲ್ಲಿ ಕೆತ್ತಲಾದ ಮ್ಯೂ ರಲ್ ವರ್ಣ ಚಿತ್ರಗಳು ಸೇರಿದಂತೆ ವಿವಿಧ ಕೆತ್ತನೆಗಳ ಮೂಲಕ ತಿಳಿಯುತ್ತೇವೆ.
- ಹಿಂದಿನ ಕಾಲದ ಜನರು ಬೊಂಬೆಗಳನ್ನು ವಿವಿಧ ವೃತ್ತಿಗಳ ಆಧಾರದಲ್ಲಿ ತಯಾರಿಸುವುದು ಜನಪ್ರಿಯವಾಗಿತ್ತು. ಪ್ರಾಣಿ , ಪಕ್ಷಿಗಳು ಗರುಡ, ಮಹಾ ಕಾವ್ಯದ ಹಕ್ಕಿ , ವಿವಿಧ ದೇವರ ಮೂರ್ತಿಗಳು , ಹಬ್ಬದ ಋತುವಿನಲ್ಲಿ ವಿವಿಧ ಮಣ್ಣಿನ ಆಟಿಕೆಗಳು ಮತ್ತು ಚಿತ್ರಗಳನ್ನು ತಯಾರಿಸುತ್ತಿದ್ದರು. ವಿಜಯ ನಗರದ ಅರಸರ ಕಾಲಕ್ಕಿಂತಲೂ ಹಿಂದೆಯೇ ಈ ಕಲೆ ಇತ್ತು ಎನ್ನಲಾಗಿದೆ.
ಕಿನ್ನಾಳ ಕಲೆಯ ಮಹತ್ವ
- ಕಿನ್ನಾಳ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ, ಸಾಹಿತ್ಯ ಹಾಗೂ ಪರಂಪರೆ ಬೆಳೆಸುವಲ್ಲಿ ಸಹಕಾರಿ .
- ಅಲ್ಪ ಬಂಡವಾಳ ಹೂಡಿ ದೇಶಿಯ ಸಂಪನ್ಮೂಲಗಳ ಬಳಕೆ ಮಾಡಿಕೊಳ್ಳುವ ಕಲೆ.
- ಒಬ್ಬ ಕಲಾವಿದನಿಂದ ತನ್ನ ಮನೆಯ ಇತರೆ ಸದಸ್ಯರಿಗೂ ಕೂಡಾ ಉದ್ಯೋಗಕ್ಕೆ ಅವಕಾಶ.
- ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡದೇ ಮಾಲಿನ್ಯ ರಹಿತವಾದ ಕಲೆಗಾರಿಕೆ.
- ಅಧಿಕ ತಂತ್ರಜ್ಞಾನಗಳನ್ನು ಬಳಸದೆ ಸಾಂಪ್ರದಾಯಿಕ ಪದ್ಧತಿಯಲ್ಲೇ ಕರಕುಶಲ ನಡೆಯುತ್ತದೆ.
- ಕಿನ್ನಾಳದ ಆಟಿಕೆಗಳು , ಧೀರ್ಘ ಬಾಳಿಕೆ ಬರುತ್ತವೆ
ಕಿನ್ನಾಳ ಕಲೆಗೆ ಬೇಕಾದ ವಸ್ತುಗಳು
- ಆಟಿಕೆ ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸಲು ಹಗುರ ಮರ, ಇದ್ದಿಲು , ಹುಣಸೆಯ ಬೀಜ, ಉರುಟು ಕಲ್ಲುಗಳು , ಸೆಣಬು, ತಾವೇ ತಯಾರಿಸಿದ ಕೆಲ ಬಣ್ಣಗಳು , ಮರ ಕೊಯ್ದ ಗರಗಸದ ಧೂಳು ಸೇರಿದಂತೆ ಸ್ಥಳೀಯವಾಗಿ ಇತರೆ ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಕಿನ್ನಾಳ ಕಲೆಯಲ್ಲಿ ತೊಡಗುತ್ತಾರೆ.