Published on: December 31, 2022

ಕುವೆಂಪು ಜಯಂತಿ

ಕುವೆಂಪು ಜಯಂತಿ

ಸುದ್ದಿಯಲ್ಲಿ ಏಕಿದೆ? ಡಿಸೆಂಬರ್ 29  ಕವಿ ಕುವೆಂಪು ಅವರ 118   ನೇ ಜನ್ಮ ದಿನಾಚರಣೆಯಾಗಿದ್ದು ಕರ್ನಾಟಕ ಸರ್ಕಾರ 2015 ರಿಂದ ಇವರ ಹುಟ್ಟು ಹಬ್ಬವನ್ನು  ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದೆ.

ಮುಖ್ಯಾಂಶಗಳು

  • ಕನ್ನಡ ಸಾಹಿತ್ಯದಲ್ಲಿ 20 ನೇ ಶತಮಾನವನ್ನು ಕುವೆಂಪು ಯುಗ ಎಂದು ಕರೆಯಲಾಗಿದೆ.

ಕುವೆಂಪು ಅವರ ಪರಿಚಯ

  • ಕುವೆಂಪುಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು.
  • ವರಕವಿ ಬೇಂದ್ರೆ ಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ಕನ್ನಡದ ಎರಡನೆಯ ರಾಷ್ಟ್ರಕವಿ. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾವರು.
  • ‘ವಿಶ್ವ ಮಾನವ’ ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು.
  • ಕುವೆಂಪುರವರ ಮೊದಲ ಕಾವ್ಯನಾಮ-“ಕಿಶೋರ ಚಂದ್ರವಾಣಿ” -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು.
  • ಕುವೆಂಪು ರಾಷ್ಟೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ.
  • 1987 ರಲ್ಲಿ ಶಿವಮೊಗ್ಗದಲ್ಲಿ ಕುವೆಂಪುರವರ ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.
  • ಅವರಎರಡು ಬೃಹತ್ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ.

ಪ್ರಶಸ್ತಿ ಪುರಸ್ಕಾರಗಳು

  • ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (1968) ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – (ಶ್ರೀರಾಮಾಯಣ ದರ್ಶನಂ) ,
  • (ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು)
  • ಪದ್ಮಭೂಷಣ (1958)
  • ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್.
  • ‘ರಾಷ್ಟ್ರಕವಿ’ ಪುರಸ್ಕಾರ (1964)
  • ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (1966)
  • ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (1969)
  • ಪದ್ಮವಿಭೂಷಣ (1989)
  • ಕರ್ನಾಟಕ ರತ್ನ (1992)
  • ಪಂಪ ಪ್ರಶಸ್ತಿ(1988)