Published on: October 20, 2021

ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಸುದ್ಧಿಯಲ್ಲಿ ಏಕಿದೆ?  ಉತ್ತರ ಪ್ರದೇಶದ ಕುಶಿನಗರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ.

  • ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಜೂನ್ 2020 ರಲ್ಲಿ ಅನುಮೋದನೆ ನೀಡಿತ್ತು.

ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

  • ಕುಶಿನಗರ ವಿಮಾನ ನಿಲ್ದಾಣವು ಶ್ರಾವಸ್ತಿ, ಕಪಿಲ್ವಾಸ್ತು, ಲುಂಬಿನಿ (ಕುಶಿನಗರವು ಬೌದ್ಧ ಸಾಂಸ್ಕೃತಿಕ ತಾಣ) ನಂತಹ ಹಲವಾರು ಬೌದ್ಧ ಸಾಂಸ್ಕೃತಿಕ ತಾಣಗಳ ಹತ್ತಿರದಲ್ಲಿದೆ. ಕುಶಿನಗರ ವಿಮಾನ ನಿಲ್ದಾಣವನ್ನು “ಅಂತರಾಷ್ಟ್ರೀಯ ವಿಮಾನ ನಿಲ್ದಾಣ” ವಾಗಿ ಘೋಷಣೆ ಮಾಡಿರುವುದು ಇತರೆ ರಾಷ್ಟ್ರಗಳೊಂದಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಧಾರಿತ ಸಂಪರ್ಕವನ್ನು ನೀಡುತ್ತದೆ. ಅಲ್ಲದೆ, ದೇಶೀಯ/ಅಂತರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.
  • ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ವಾಯು ಸಂಪರ್ಕವಷ್ಟೇ ಅಲ್ಲ, ರೈತರು, ಪಶು ಪಾಲಕರು, ಅಂಗಡಿಯವರು, ಕಾರ್ಮಿಕರು, ಸ್ಥಳೀಯ ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ವ್ಯಾಪಾರದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪ್ರವಾಸೋದ್ಯಮವು ಗರಿಷ್ಠ ಲಾಭವನ್ನು ಪಡೆಯುತ್ತದೆ, ಅಲ್ಲದೆ, ಇಲ್ಲಿನ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ
  • ಉದ್ಟಾಟನೆಯ ದಿನ ಕೊಲಂಬೊದಿಂದ ಸುಮಾರು 100 ಮಂದಿ ಬೌದ್ಧ ಭಿಕ್ಕುಗಳ ನಿಯೋಗವನ್ನು ಹೊತ್ತ ವಿಮಾನವು ನಿಲ್ದಾಣದ ನೆಲಸ್ಪರ್ಶ ಮಾಡಲಿದೆ. ನಿಯೋಗದ ಜೊತೆಗೆ 12 ಮಹಾತ್ಮರ ಪವಿತ್ರ ಅವಶೇಷಗಳನ್ನು ತರಲಿದ್ದು, ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.
  • ನಿಯೋಗದಲ್ಲಿ ಶ್ರೀಲಂಕಾದ ಬೌದ್ಧಧರ್ಮದಲ್ಲಿನ ಎಲ್ಲ ನಾಲ್ಕು ಹಂತದ ಅರುನಾಯಕರಾದ (ಉಪ ನಾಯಕರು) ಅಸ್ಗಿರಿಯ, ಅಮರಪುರ, ರಾಮಾಣ್ಯ, ಮಲ್‌ವಟ್ಟಾದ, ನಮಲ್‌ ರಾಜಪಕ್ಸೆ ನೇತೃತ್ವದ ಶ್ರೀಲಂಕಾದ ಐವರು ಸಚಿವರ ನಿಯೋಗವೂ ಮೊದಲ ವಿಮಾನದಲ್ಲಿ ಬರಲಿದೆ.

ಅಭಿಧಮ್ಮ ದಿನ

  • ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಅಕ್ಟೋಬರ್ 20 ರಂದು ಅಭಿಧಮ್ಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
  • ಅಭಿಧಮ್ಮ ದಿನವು “ವರ್ಷವಾಸ್ ಅಥವಾ ವಸ್ಸ” ಎಂಬ ಮೂರು ತಿಂಗಳ ಮಳೆ ಹಿಮ್ಮೆಟ್ಟುವಿಕೆಯ ಅಂತ್ಯವನ್ನು ಸಂಕೇತಿಸುತ್ತದೆ. ಈ ಮಳೆ ಹಿಮ್ಮೆಟ್ಟುವಿಕೆಯನ್ನು ಬೌದ್ಧ ಸನ್ಯಾಸಿಗಳು ಗಮನಿಸುತ್ತಾರೆ. ಈ ಅವಧಿಯಲ್ಲಿ, ಸನ್ಯಾಸಿಗಳು ಪ್ರಾರ್ಥನೆಗಾಗಿ ವಿಹಾರ ಮತ್ತು ಮಠದಲ್ಲಿ ಒಂದೇ ಸ್ಥಳದಲ್ಲಿ ಇರುತ್ತಾರೆ.