Published on: September 20, 2021
ಕೂಪರ್ ಮಹಸೀರ್
ಕೂಪರ್ ಮಹಸೀರ್
ಸುದ್ಧಿಯಲ್ಲಿ ಏಕಿದೆ? ಸ್ಥಳೀಯವಾಗಿ ‘ಕಾಟ್ಲೆ’ ಎಂದು ಕರೆಯಲಾಗುವ ‘ಕೂಪರ್ ಮಹಸೀರ್’ ಅನ್ನು ಸಿಕ್ಕಿಂ ಸರ್ಕಾರವು ರಾಜ್ಯ ಮೀನು ಎಂದು ಘೋಷಿಸಿದೆ.
ರಾಜ್ಯ ಮೀನಿನ ಘೋಷಣೆ ಏಕೆ ?
- ಸ್ಥಳೀಯವಾಗಿ ಮೀನಿನ ಮಹತ್ವವನ್ನು ಎತ್ತಿ ಹಿಡಿಯಲು ಮತ್ತು ಅದರ ಸಂರಕ್ಷಣಾ ಕ್ರಮಗಳಿಗೆ ಒತ್ತು ನೀಡಲು ರಾಜ್ಯ ಸರ್ಕಾರವು ಇದನ್ನು ‘ರಾಜ್ಯದ ಮೀನು’ ಎಂದು ಘೋಷಿಸಿದೆ
‘ಕೂಪರ್ ಮಹಸೀರ್’ ಬಗ್ಗೆ
- ನಿಯೋಲಿಸೋಚಿಲಸ್ ಹೆಕ್ಸಾಗೊನೊಲೆಪಿಸ್ (Neolissochilus hexagonolepis) ಅನ್ನು ಸಾಮಾನ್ಯವಾಗಿ ಕೂಪರ್ ಮಹಸೀರ್ ಮತ್ತು ಸ್ಥಳೀಯವಾಗಿ ‘ಕಾಟ್ಲೆ’ ಎಂದು ಕರೆಯಲಾಗುತ್ತದೆ..
- ಕಾಟ್ಲೆ ಸಿಕ್ಕಿಂ ರಾಜ್ಯದಲ್ಲಿ ಪ್ರಮುಖವಾಗಿ ತೀಸ್ತಾ ಮತ್ತು ರಂಗಿತ್ ನದಿಗಳಲ್ಲಿ ಮತ್ತು ಅವುಗಳ ಉಪನದಿಗಳಲ್ಲಿ ಕಂಡುಬರುತ್ತದೆ.
- 1992 ರಲ್ಲಿ, ಲಖನೌದ ಐಸಿಎಆರ್-ನ್ಯಾಷನಲ್ ಬ್ಯೂರೋ ಆಫ್ ಫಿಶ್ ಜೆನೆಟಿಕ್ ರಿಸೋರ್ಸಸ್ (ಐಸಿಎಆರ್-ಎನ್ಬಿಎಫ್ಜಿಆರ್) ಕಾಟ್ಲೆ ಮೀನುಗಳನ್ನು ಅಳಿವಿನಂಚಿನಲ್ಲಿರುವ ಪ್ರಬೇಧವೆಂದು ವರ್ಗೀಕರಿಸಿದೆ. ನಂತರ, 2014ರಲ್ಲಿ ಈ ಮೀನನ್ನು ಐಯುಸಿಎನ್ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ಕೂಡ ಅಳಿವಿನಂಚಿನಲ್ಲಿರುವ ಮೀನು ಎಂದು ವರ್ಗೀಕರಿಸಿದೆ
ಸಿಕ್ಕಿಂ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು
- ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಮೀನಿಗೆ, ರಾಜ್ಯದ ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಸಿಕ್ಕಿಂ ಸರ್ಕಾರವು ಈಗಾಗಲೇ ರಾಜ್ಯದ ಜಲಾಶಯಗಳನ್ನು ಮೀನುಗಾರಿಕೆ ಚಟುವಟಿಕೆಗಳಿಗೆ ಮುಕ್ತ ಎಂದು ಘೋಷಿಸಿದೆ.
- ‘ಸಿಕ್ಕಿಂ ಮೀನುಗಾರಿಕಾ ನಿಯಮಗಳು, 1990 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳಿಗೆ ಅನುಗುಣವಾಗಿ ಜಲಾಶಯಗಳಲ್ಲಿ ಮೀನುಗಾರಿಕೆಗೆ ಆಸಕ್ತಿ ಹೊಂದಿರುವ ವೈಯಕ್ತಿಕ ಮೀನುಗಾರರು ಅಥವಾ ಮೀನುಗಾರರ ಸಹಕಾರ ಸಂಘಗಳು ಅಥವಾ ಎಸ್ಎಚ್ಜಿಗಳಿಗೆ ಮೀನುಗಾರಿಕಾ ನಿರ್ದೇಶನಾಲಯದಿಂದ ಪರವಾನಗಿ ನೀಡಲಾಗುತ್ತದೆ’.
- ಜಲಾಶಯಗಳು ಉತ್ತರ ಸಿಕ್ಕಿಂನ ಚುಂಗ್ಥಾಂಗ್, ಪೂರ್ವ ಸಿಕ್ಕಿಂನ ಡಿಚು ಮತ್ತು ರೊರಥಾಂಗ್ ಸೇರಿ ಪಶ್ಚಿಮ ಸಿಕ್ಕಿಂನ ಲೆಗ್ಶೆಪ್ನಲ್ಲಿವೆ.