Published on: November 5, 2022

ಕೃಷಿ ಮೇಳ 2022

ಕೃಷಿ ಮೇಳ 2022

ಸುದ್ದಿಯಲ್ಲಿ ಏಕಿದೆ?

ಸಾವಯವ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ನಾಲ್ಕು ದಿನಗಳ ಕೃಷಿ ಮೇಳವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆರಂಭಗೊಂಡಿದೆ.

  • ಯಾರ ಸಹಯೋಗದಲ್ಲಿ ನಡೆಯುತ್ತದೆ?

ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ ಜಲಾನಯನ ಅಭಿವೃದ್ಧಿ, ಪಶು ಸಂಗೋಪನೆ ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಉದ್ದೇಶ

  • ವ್ಯವಸಾಯ ಕ್ಷೇತ್ರದತ್ತ ಯುವಜನರನ್ನು ಸೆಳೆಯಲು ಹಾಗೂ ಕೃಷಿಯಲ್ಲಿ ತೊಡಗಿರುವ ಅನ್ನದಾತರಿಗೆ ಹೊಸತಳಿ, ತಾಂತ್ರಿಕತೆಯನ್ನು ಪರಿಚಯಿಸಲಾಗುತ್ತಿದೆ.

ಮುಖ್ಯಾಂಶಗಳು

  • ಕೃಷಿ ವಿಶ್ವ ವಿದ್ಯಾನಿಲಯವು ಸಂಶೋಧಿಸಿರುವ ಹತ್ತು ಹಲವು ಆವಿಷ್ಕಾರದ ಸಾಧನೆಯನ್ನು ರೈತರ ಎದುರು ಅನಾವರಣಗೊಳಿಸಲಾಗುತ್ತದೆ. ಹೊಸ ತಂತ್ರಜ್ಞಾನದಡಿ ಶೋಧಿಸಿರುವ ಸುಧಾರಿತ ಕೃಷಿ ಯಂತ್ರೊಪಕರಣ, ಕೊಯ್ಲಿನೋತ್ತರ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಕೆ, ಸಿರಿಧಾನ್ಯಗಳ ಮಹತ್ವ ಅರಿಯುವ ಅವಕಾಶ ಸಿಗಲಿದೆ.
  • ಮುಖ್ಯವಾಗಿ ಕೃಷಿಗೆ ನವೋದ್ಯಮದ ಸ್ಪರ್ಶ ನೀಡುವ ಹಿನ್ನೆಲೆಯಲ್ಲಿ ಯುವ ಕೃಷಿ ಪದವೀಧರರು ಹುಟ್ಟು ಹಾಕಿರುವ ಕಿರು ಉದ್ಯಮಗಳ ರೈತರ ಆದಾಯ ವೃದ್ಧಿಗೆ ಹೊಸ ಮಾರ್ಗ ತೆರೆದುಕೊಳ್ಳಲು ವೇದಿಕೆ ಸಿಗಲಿದೆ.
  • ಪ್ರಮುಖ ಆಕರ್ಷಣೆಗಳು: ಮೇಳವು ಆಹಾರ ಸಂಸ್ಕರಣೆ, ಅಂಗಾಂಶ ಕೃಷಿ, ಬೆಳೆ ರಕ್ಷಣೆ, ನಿಖರವಾದ ಕೃಷಿ, ಅಗ್ರಿ ಡ್ರೋನ್‌ಗಳು ಮತ್ತು ಮಾರುಕಟ್ಟೆ ಮತ್ತು ಪೂರೈಕೆ ಸರಪಳಿಯಂತಹ ಕ್ಷೇತ್ರಗಳಲ್ಲಿ 30 ಸ್ಟಾರ್ಟಪ್‌

ಇಸ್ರೇಲ್ ಮಾದರಿ ಕೃಷಿಗಿಂತ ಕೋಲಾರ್ ಮಾದರಿ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಕೃಷಿ ಸಚಿವರು ಅಭಿಪ್ರಾಯಪಟ್ಟರು

ಇಸ್ರೇಲ್ ಮಾದರಿ ಕೃಷಿ ಎಂದರೇನು?

  • ಆರಂಭದಲ್ಲಿ ಬೆಳೆ ಬೆಳೆಯುವ ಪ್ರದೇಶವನ್ನು ಉಳುಮೆ ಮಾಡಿ ಸಸಿ ನೆಡಲುಬೇಕಾದ ದಾಯ ಮಾಡಲಾಗುತ್ತಿದೆ. ನಂತರ ಸಸಿ ನೆಡುವ ಜಾಗದಲ್ಲಿ ನೀರು ಹಾಯಿಸಲು ಹನಿ ನೀರಾವರಿ ಪದ್ಧತಿಯ ಸಣ್ಣ ಕೊಳವೆ ಅಳವಡಿಸಿ ಕಾಂಪೋಸ್ಟ್ ಗೊಬ್ಬರ ಹಾಕಲಾಗುತ್ತದೆ.
  • ಇದರ ಮೇಲೆ ಕಳೆ ಬೆಳೆಯದಂತೆ ತಡೆಯುವ ಒಂದು ರೀತಿಯ ಪ್ಲಾಸ್ಟಿಕ್ ಹಾಳೆಯಂಥ ಮಲ್ಚಿಂಗ್ ಪೇಪರ್ ಹಾಸಲಾಗುತ್ತದೆ. ಮಧ್ಯೆ ಮಾಡುವ ರಂಧ್ರಗಳಲ್ಲಿ ಬೆಳೆಯಬೇಕಿರುವ ಸಸಿಗಳನ್ನು ನೆಡಲಾಗುತ್ತದೆ.
  • ಇದೆಲ್ಲ ಪ್ರಕ್ರಿಯೆಗೂ ಹೆಚ್ಚಿನ ಕೂಲಿಕಾರರ ಅಗತ್ಯ ಬರುವುದಿಲ್ಲ. ಸಸಿಗಳನ್ನು ನೆಟ್ಟ ನಂತರ ಹನಿ ನೀರಾವರಿ ಮೂಲಕ ನೀರನ್ನು ಬಿಡಲಾಗುತ್ತದೆ. ರಾಸಾಯನಿಕ ಗೊಬ್ಬರವನ್ನು ಕೂಡ ಹನಿ ನೀರಾವರಿಯಲ್ಲೇ ಮಿಶ್ರಣ ಮಾಡಿ ಹಾಯಿಸಲಾಗುತ್ತದೆ.
  • ಪ್ರಯೋಜನ: ಮಲ್ಚಿಂಗ್ ವ್ಯವಸ್ಥೆ ಮಾಡುವುದರಿಂದ ಸಸಿಗಳಿಗೆಲ್ಲ ಸಮಾನವಾಗಿ ನೀರು ಗೊಬ್ಬರ ದೊರಕುತ್ತದೆ. ಬೆಳವಣಿಗೆಯೂ ಸರಾಗವಾಗುತ್ತದೆ. ಮಧ್ಯೆ ಕಳೆಗಿಡ ಬೆಳೆಯಲು ಅಸಾಧ್ಯವಾಗುವುದರಿಂದ ಕೊಟ್ಟ ಗೊಬ್ಬರವೆಲ್ಲ ಸಸಿಗಳ ಪಾಲಾಗುತ್ತದೆ. ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ಪೇಪರ್ ಒಳಗಡೆ ತೇವಾಂಶವೂ ತಗ್ಗುವುದಿಲ್ಲ. ಇದರಿಂದ ಹಣ, ಸಮಯ, ನೀರು ಎಲ್ಲವೂ ಉಳಿತಾಯ.

ಕೋಲಾರ್ ಮಾದರಿ ಕೃಷಿ

  • ಉಪಕಸುಬುಗಳು ಸಮಗ್ರ ಕೃಷಿಗೆ ಒತ್ತು: ಏಕ ಬೆಳೆ ಪದ್ಧತಿಗಿಂತ ಬಹು ಬೆಳೆ ಹಾಗೂ ಉಪ ಕಸುಬುಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯವಾಗಿಸಿಕೊಳ್ಳುವುದು.