Published on: September 19, 2022

ಕೆಂಪೇಗೌಡರ ಪ್ರತಿಮೆ: ಉದ್ಘಾಟನಾ ಅಭಿಯಾನ

ಕೆಂಪೇಗೌಡರ ಪ್ರತಿಮೆ: ಉದ್ಘಾಟನಾ ಅಭಿಯಾನ

ಸುದ್ದಿಯಲ್ಲಿ ಏಕಿದೆ?

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತದಿಂದ ಪವಿತ್ರ ಮೃತ್ತಿಕೆ (ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಮುಖ್ಯಾಂಶಗಳು

  • ರಾಜ್ಯ ಸರಕಾರವು ವಿಧಾನಸೌಧದ ಆವರಣದಲ್ಲೂ ರೂ. 50 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಜೊತೆಗೆ ಲಾಲ್ ಬಾಗ್ ಆವರಣದಲ್ಲೂ ನಾಡಪ್ರಭುವಿನ ಪ್ರತಿಮೆ ಸ್ಥಾಪಿಸಲಾಗುವುದು.
  • ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್ ಸ್ಥಾಪನೆಗೆ ಸರಕಾರವು ₹84 ಕೋಟಿ ವಿನಿಯೋಗಿಸುತ್ತಿದೆ. ಈ ಪ್ರತಿಮೆಗೆ ಕೆಂಪೇಗೌಡರ ಆಶಯಗಳನ್ನು ಸಂಕೇತಿಸುವಂತೆ ‘ಪ್ರಗತಿ ಪ್ರತಿಮೆ’ (Statue of Prosperity) ಎಂದು ನಾಮಕರಣ ಮಾಡಲಾಗುತ್ತಿದೆ.
  • ಅಭಿಯಾನದ ಅಂಗವಾಗಿ 31 ಜಿಲ್ಲೆಗಳಿಗೂ ತಲಾ ಒಂದು ಎಲ್ಇಡಿ ಅಲಂಕೃತ ವಾಹನ ಹೋಗಲಿದೆ. ಇದರಲ್ಲಿ ಪುಣ್ಯಪುರುಷರ ಸಂದೇಶಗಳು ಇರಲಿದ್ದು, ಕೆಂಪೇಗೌಡರನ್ನು ಕುರಿತ ಸಾಕ್ಷ್ಯಚಿತ್ರ ಪ್ರಸಾರ ಆಗಲಿದೆ.
  • ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡರ ಜೀವನಕ್ಕೆ ಸಂಬಂಧಿಸಿದ 46 ಸ್ಥಳಗಳಿಗೆ ಕಾಯಕಲ್ಪ ನೀಡುತ್ತಿದೆ. ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ವೀರಸಮಾಧಿ ತಾಣವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ

ಕೆಂಪೇಗೌಡರ ಅಧ್ಯಯನ ಕೇಂದ್ರ:

  • ಐವತ್ತು ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರ ಬೆಂಗಳೂರು ವಿವಿ ಆವರಣದಲ್ಲಿ ತಲೆಎತ್ತಲಿದೆ. ಇದು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಮುಂಭಾಗದಲ್ಲಿ ಮೈದಾಳಲಿದೆ.
  • ಇದರಲ್ಲಿ ಗುಣಮಟ್ಟದ ಆ್ಯಂಪಿ ಥಿಯೇಟರ್, ಪಾತ್ ವೇ, ಸುರಂಗ ನಿರ್ಮಾಣ, ಎವಿ ಎಕ್ಸಿಬಿಷನ್ ವ್ಯವಸ್ಥೆ,  ತ್ರೀ-ಡಿ ಪ್ರೊಜೆಕ್ಷನ್, ಚಕ್ರಾಕಾರದ ಕಾರಂಜಿ, ಹೂದೋಟ, ವಿಐಪಿ ಲಾಂಜ್, ಕಿಯೋಸ್ಕ್, ವಿಶ್ರಾಂತಿ ಕೊಠಡಿಗಳು, ಅತ್ಯುತ್ತಮ ಹಾಸುಗಲ್ಲುಗಳು, ಪೆವಿಲಿಯನ್ ಗಳು, ಕಾಂಕ್ರೀಟ್ ತಡೆಗೋಡೆ ಇರಲಿವೆ

ಪರಿಕಲ್ಪನೆ:

  • ವಿಶ್ವದ ಎಲ್ಲೆಡೆಯಿಂದ ಮತ್ತು ಭಾರತದ ನಾನಾ ಭಾಗಗಳಿಂದ ಬರುವವರಿಗೆ ಬೆಂಗಳೂರಿನಲ್ಲಿ ಇಳಿದ ಕೂಡಲೇ ಇದು ವಿಶಿಷ್ಟ ಅನುಭವ ಕೊಡುವಂತಹ ವಿಶಿಷ್ಟ ಪರಿಕಲ್ಪನೆ ಆಗಿದೆ.

ಉದ್ದೇಶ 

ಅಭಿಯಾನವು ರಾಜ್ಯದ ಎಲ್ಲರನ್ನೂ ಒಳಗೊಳ್ಳಲಿದ್ದು, ನವ ಕರ್ನಾಟಕ ನಿರ್ಮಾಣದ ದೊಡ್ಡ ಹೆಜ್ಜೆಯಾಗಿದೆ. ಬೆಂಗಳೂರನ್ನು ಐಟಿ-ಬಿಟಿ ನಗರದ ಜತೆಗೆ ಪರಂಪರೆಯೊಂದಿಗೆ ಬೆಸೆಯಬೇಕಾಗಿದೆ. ಈ ಥೀಮ್ ಪಾರ್ಕ್ ಮತ್ತು ಪ್ರತಿಮೆ ಸ್ಥಾಪನೆಯು ಅಂತಹ ಒಂದು ಉಪಕ್ರಮವಾಗಿದೆ.