Published on: April 12, 2022

ಕೆಎಂಎಫ್ಗೆ ರಾಷ್ಟ್ರೀಯ ಪ್ರಶಸ್ತಿ

ಕೆಎಂಎಫ್ಗೆ ರಾಷ್ಟ್ರೀಯ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ? ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾಮಂಡಲ( ಎನ್‌ಸಿಡಿಎಫ್ಐ)ವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸು-ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಕೆಎಂಎಫ್’ ಗೆ ಪ್ರಶಸ್ತಿ ನೀಡಲಾಗಿದೆ

  • ದೇಶದಲ್ಲೀಗ ಅಮೂಲ್ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕರ್ನಾಟಕದ ಕೆಎಂಎಫ್ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಕರ್ನಾಟಕವಲ್ಲದೇ ನೆರೆಯ ಬಹುತೇಕ ರಾಜ್ಯಗಳಲ್ಲಿಯೂ ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆಗಳನ್ನು ರೈತ ಸಮುದಾಯಕ್ಕೆ ನೀಡುತ್ತಿದೆ. ಈ ಮೂಲಕ ಹೈನು ಉದ್ಯಮ ಬೆಳೆಯಲು ಈ ಸಂಸ್ಥೆಯು ಹೆಚ್ಚು ಸಹಕಾರಿಯಾಗಿದೆ.

ಪ್ರಶಸ್ತಿಯನ್ನು ಏಕೆ ನೀಡಲಾಗಿದೆ ?

  • ಎನ್‌ಸಿಡಿಎಫ್ಐ ಕಳೆದ ಐದು ವರ್ಷದ ಅವಧಿಯಲ್ಲಿ ಸುಮಾರು ಐದು ಸಾವಿರ ಕೋಟಿ ರೂಪಾಯಿಗೂ ಅಧಿಕ ವ್ಯವಹಾರಗಳನ್ನು ನಡೆಸಿದ್ದು, ಇದರಲ್ಲಿ ಕರ್ನಾಟಕದ ಕೆಎಂಎಫ್ ಈ ಸಂಸ್ಥೆಗೆ ಸುಮಾರು 2,400 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಿದ್ದರಿಂದ ಕೆಎಂಎಫ್ ನಂದಿನಿ ಬ್ರಾಂಡ್ ಗೆ ಪ್ರಶಸ್ತಿ ನೀಡಿ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಳವು ಗೌರವಿಸಿದೆ.

ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾಮಂಡಲ( ಎನ್‌ಸಿಡಿಎಫ್ಐ)

  • ಗುಜರಾತಿನ ಆನಂದ್ ಜಿಲ್ಲೆಯಲ್ಲಿರುವ ನ್ಯಾಷನಲ್ ಕೋಆಪರೇಟಿವ್ ಡೈರಿ ಫೆಡರೇಶನ್ ಆಫ್ ಇಂಡಿಯಾ (NCDFI), ಸಹಕಾರಿ ಡೈರಿ ವಲಯದ ಉನ್ನತ ಸಂಸ್ಥೆಯಾಗಿದ್ದು, ಇದರ ಸದಸ್ಯರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಫೆಡರಲ್ ಡೈರಿ ಸಹಕಾರಿಗಳನ್ನು ಒಳಗೊಂಡಿರುತ್ತಾರೆ. ಎನ್‌ಸಿಡಿಎಫ್‌ಐನ ಪ್ರಾಥಮಿಕ ಉದ್ದೇಶವು ಡೈರಿ ಸಹಕಾರಿ ಸಂಘಗಳ ಕೆಲಸವನ್ನು ಸಮನ್ವಯ, ನೆಟ್‌ವರ್ಕಿಂಗ್ ಮತ್ತು ವಕಾಲತ್ತು ಮೂಲಕ ಸುಗಮಗೊಳಿಸುವುದಾಗಿದೆ.