Published on: December 13, 2022

ಕೆನೆತ್‌ ಪೊವೆಲ್‌

ಕೆನೆತ್‌ ಪೊವೆಲ್‌

ಸುದ್ದಿಯಲ್ಲಿ ಏಕಿದೆ? ಪೊವೆಲ್‌ ನಿಧನಕ್ಕೆ ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಹಾಗೂ ಎಎಫ್‌ಐ ಸಂತಾಪ ಸೂಚಿಸಿದೆ

ಮುಖ್ಯಾಂಶಗಳು

  • ಒಲಿಂಪಿಯನ್ ಹಾಗೂ 1970ರ ಏಷ್ಯನ್‌ ಕ್ರೀಡಾಕೂಟದ 4X100 ಮೀ. ರಿಲೇನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದ ಕೆನೆತ್‌ ಪೊವೆಲ್‌ ಅವರು ಅಥ್ಲೆಟಿಕ್ಸ್‌ ವಲಯದಲ್ಲಿ ‘ದಿ ಜಂಟ್ಲ್‌ಮನ್‌ ಸ್ಪ್ರಿಂಟರ್‌’ ಎಂದೇ ಜನಪ್ರಿಯರಾಗಿದ್ದರು.
  • ಆದರೆ 1970ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರಲ್ಲದೆ 4X100 ಮೀ. ರಿಲೇನಲ್ಲಿ ಭಾರತಕ್ಕೆ ಮೂರನೇ ಸ್ಥಾನ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
  • ಪೊವೆಲ್‌ ಅವರಿದ್ದ ತಂಡ 40.9 ಸೆ.ಗಳಲ್ಲಿ ಗುರಿ ತಲುಪಿತ್ತು. ಈ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ (40.4 ಸೆ.) ಮತ್ತು ಜಪಾನ್‌ (40.7 ಸೆ.) ತಂಡಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದವು.
  • 1963 ರಲ್ಲಿ ಅಲಹಾಬಾದ್‌ನಲ್ಲಿ ನಡೆದಿದ್ದ ಚೊಚ್ಚಲ ಅಂತರ ರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ‘ಸ್ಪ್ರಿಂಟ್‌ ಡಬಲ್‌’ ಸಾಧನೆ ಮಾಡಿದ್ದರು.
  • ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ಬಳಿಕ ಹ್ಯಾಂಡ್‌ಬಾಲ್‌ ಆಟದಲ್ಲಿ ತಮ್ಮ ಸಾಮರ್ಥ್ಯ ತೋರಿದ್ದರು. ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
  • ಜನನ :1940ರ ಏಪ್ರಿಲ್‌ 20 ರಂದು ಕೋಲಾರ
  • ಪ್ರಶಸ್ತಿಗಳು: 1965 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಈ ಗೌರವಕ್ಕೆ ಪಾತ್ರರಾದ ರಾಜ್ಯದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು.
  • ಕರ್ನಾಟಕ ಸರ್ಕಾರ 2018 ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.