Published on: November 22, 2021
ಕೆಮಿಕಲ್ ಕ್ಯಾಸ್ಟ್ರೇಶನ್
ಕೆಮಿಕಲ್ ಕ್ಯಾಸ್ಟ್ರೇಶನ್
ಸುದ್ಧಿಯಲ್ಲಿ ಏಕಿದೆ ? ಅತ್ಯಾಚಾರದ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಒಂದು ರೀತಿಯಲ್ಲಿ ಜಯ ಸಿಕ್ಕಿದೆ. ಕಾಮಾಶಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆಗೆ ಪಾಕ್ ಸಂಸತ್ನಲ್ಲಿ ಅಂಗೀಕಾರ ಸಿಕ್ಕಿದೆ.
ಹಿನ್ನಲೆ
- ಅತ್ಯಾಚಾರ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇದರ ಜೊತೆಗೆ ಆರೋಪಿಗಳ ವೃಷಣವನ್ನೇ ಕತ್ತರಿಸಬೇಕೆಂದು ಆಗ್ರಹ ಮಾಡಲಾಗಿತ್ತು. ಇದಕ್ಕೆಲ್ಲಾ ವಿಭಿನ್ನವಾಗಿ ಈಗ ಈ ಮಸೂದೆ ಅಂಗೀಕಾರವಾಗಿದೆ.
- 2020ರ ನವೆಂಬರ್ ತಿಂಗಳಲ್ಲಿ ಲಾಹೋರ್-ಸಿಯಾಲ್ಕೋಟ್ ರೋಡ್ನಲ್ಲಿ ಮಕ್ಕಳ ಎದುರೇ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದಕ್ಕೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದೇಶಾದ್ಯಂತ ಪ್ರತಿಭಟನೆ ನಡೆದಿತ್ತು.
ಏನಿದು ಕೆಮಿಕಲ್ ಕ್ಯಾಸ್ಟ್ರೇಶನ್?
- ಅತ್ಯಾಚಾರವೆಸಗುವ ಅಪರಾಧಿಯ ಮೇಲೆ ರಾಸಾಯನಿಕ ಬಳಕೆ ಮಾಡುವುದರಿಂದ ಆತನ ಜೀವಿತಾವಧಿಯಲ್ಲಿ ಮತ್ತೆ ಸಂಭೋಗ ನಡೆಸಲು ಅಸಮರ್ಥನಾಗಿರುತ್ತಾನೆ. ಆದರೆ ನ್ಯಾಯಾಲಯ ಹಾಗೂ ಕೋರ್ಟ್ ಇದಕ್ಕೆ ಅನುಮತಿ ನೀಡುವುದು ಕಡ್ಡಾಯ.
ಯಾವ ದೇಶಗಳಲ್ಲಿ ಇದನ್ನು ಅನುಮೋದಿಸಲಾಗಿದೆ ?
- ದಕ್ಷಿಣ ಕೊರಿಯಾ, ಪೋಲೆಂಡ್, ಅಮೆರಿಕದ ಕೆಲವೊಂದು ರಾಜ್ಯಗಳಲ್ಲಿ ಈ ಶಿಕ್ಷೆ ಜಾರಿಯಲ್ಲಿದೆ.