Published on: September 5, 2021

ಕೇಂದ್ರದ ಐತಿಹಾಸಿಕ ಶಾಂತಿ ಒಪ್ಪಂದ

ಕೇಂದ್ರದ ಐತಿಹಾಸಿಕ ಶಾಂತಿ ಒಪ್ಪಂದ

ಸುದ್ಧಿಯಲ್ಲಿ ಏಕಿದೆ?  ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಯತ್ತ ವಿಶೇಷ ಗಮನ ಹರಿಸುತ್ತಿರುವ ಕೇಂದ್ರ ಸರ್ಕಾರ ಸೆ.04 ರಂದು ಅಸ್ಸಾಂ ನ 5 ಬಂಡುಕೋರ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.

  • ಅಸ್ಸಾಂ ನ ಕರ್ಬಿ ಅಂಗ್ಲಾಂಗ್ ನ ಭಾಗದಲ್ಲಿ ಈ ಬಂಡುಕೋರ ಸಂಘಟನೆಗಳು ಸಕ್ರಿಯವಾಗಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಸಿಎಂ ಹಿಮಂತ್ ಬಿಸ್ವ ಶರ್ಮ ಹಾಗೂ ಬಂಡುಕೋರ ಸಂಘಟನೆಗಳ ಪ್ರಮುಖ ನಾಯಕರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
  • ಶಸ್ತ್ರಾಸ್ತ್ರ ತ್ಯಜಿಸಿದ ಬಂಡುಕೋರರಿಗೆ ಪುನರ್ವಸತಿ ಹಾಗೂ ಅವರ ಮೇಲಿನ ಘೋರವಲ್ಲದ ಅಪರಾಧಗಳಿಗೆ ವಿಧಿಸಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದು, ರಾಜ್ಯದಲ್ಲಿ ಕರ್ಬಿ ಭಾಷೆಯನ್ನು ಸಹ ಭಾಷೆಯನ್ನಾಗಿ ಪರಿಗಣಿಸುವುದು ಸೇರಿದಂತೆ ಹಲವು ಅಂಶಗಳು ಒಪ್ಪಂದದ ಪ್ರಮುಖ ಭಾಗವಾಗಿವೆ.