Published on: March 31, 2023

ಕೋಬ್ರಾ ವಾರಿಯರ್ ವ್ಯಾಯಾಮ

ಕೋಬ್ರಾ ವಾರಿಯರ್ ವ್ಯಾಯಾಮ


ಸುದ್ದಿಯಲ್ಲಿ ಏಕಿದೆ? ಎಕ್ಸರ್ಸೈಸ್ ಕೋಬ್ರಾ ವಾರಿಯರ್ ರಕ್ಷಣಾ ವಲಯಕ್ಕೆ ಸೇರಿದ ವಿಮಾನಗಳ ಶಕ್ತಿ ಪ್ರದರ್ಶನ ಶೋ ಆಗಿದ್ದು ಭಾರತೀಯ ವಾಯುಪಡೆಯ (IAF) ಮಿರಾಜ್-2000 ವಿಮಾನಗಳು ಯುನೈಟೆಡ್ ಕಿಂಗ್‌ಡಂನಲ್ಲಿ ಕೋಬ್ರಾ ವಾರಿಯರ್ ವ್ಯಾಯಾಮದಲ್ಲಿ ಭಾಗವಹಿಸಿದ್ದವು.


ಮುಖ್ಯಾಂಶಗಳು

  • ಯುನೈಟೆಡ್ ಕಿಂಗ್‌ಡಮ್, ಫಿನ್‌ಲ್ಯಾಂಡ್, ಸ್ವೀಡನ್, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಸಿಂಗಾಪುರ ಸೇರಿದಂತೆ ಇತರ ಆರು ವಾಯುಪಡೆಗಳೊಂದಿಗೆ ಈ ಜಂಟಿ ತರಬೇತಿ ವ್ಯಾಯಾಮ ನಡೆಯಿತು.
  • ಫೆಬ್ರವರಿ 2019 ರಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಭಾಗವಹಿಸಿದ ಎಲ್ಲಾ ಮೂರು ಸ್ಕ್ವಾಡ್ರನ್‌ಗಳಿಂದ ಮಿರಾಜ್-2000 ಗಳನ್ನು ತೆಗೆದುಕೊಳ್ಳಲಾಗಿದೆ.
  • ನಮ್ಮ ಬೆಂಗಳೂರು ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್ ಶೋನಂತೆ ಯುನೈಟೆಡ್ ಕಿಂಗ್ಡಮ್ ನ ರಾಯಲ್ ಏರ್ಪೋರ್ಸ್ ಬೇಸ್ ಇರುವ ವಾಡಿಂಗ್ಟನ್ ನಲ್ಲೂ ಎಕ್ಸರ್ಸೈಸ್ ಕೋಬ್ರಾ ವಾರಿಯರ್ ಹೆಸರಲ್ಲಿ ಇಂಥದೊಂದು ಶೋ ನಡೆಯುತ್ತದೆ.
  • ಈ ಬಾರಿ ಭಾರತೀಯ ವಾಯಸೇನೆಯ145 ಯೋಧರನ್ನು ಒಳಗೊಂಡ ಒಂದು ತಂಡ ಇದರಲ್ಲಿ ಭಾಗವಹಿಸಿದೆ.
  • ಈ ವ್ಯಾಯಾಮವು ಹೆಚ್ಚಿನ ತೀವ್ರತೆ, ಹೆಚ್ಚಿನ ಬಲ ಮತ್ತು ಯುದ್ಧತಂತ್ರದ ವಾಯು ಯುದ್ಧದ ಹೋರಾಟದ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತದೆ.
  • ಫಿನ್‌ಲ್ಯಾಂಡ್, ಭಾರತ ಮತ್ತು ಸೌದಿ ಅರೇಬಿಯಾ ಮೊದಲ ಬಾರಿಗೆ ವ್ಯಾಯಾಮ ಕೋಬ್ರಾ ವಾರಿಯರ್‌ಗೆ ಸೇರಿಕೊಂಡವು.

ವ್ಯಾಯಾಮ ಕೋಬ್ರಾ ವಾರಿಯರ್

  • ಎಕ್ಸರ್ಸೈಸ್ ಕೋಬ್ರಾ ವಾರಿಯರ್ ಅನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ ಮತ್ತು ರಾಯಲ್ ಏರ್ ಫೋರ್ಸ್ ಆಯೋಜಿಸುವ ಅತಿದೊಡ್ಡ ವಾಯು ವ್ಯಾಯಾಮವಾಗಿದೆ. ಈ ಆವೃತ್ತಿಯಲ್ಲಿ ಸುಮಾರು 70 ವಿಮಾನಗಳು ಭಾಗವಹಿಸಿದ್ದವು. ಈ ವ್ಯಾಯಾಮವು ಭಾಗವಹಿಸುವ ರಾಷ್ಟ್ರಗಳನ್ನು ಪರಸ್ಪರ ಮತ್ತು ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ಕಾರ್ಯನಿರ್ವಹಿಸಲು ಆಹ್ವಾನಿಸುತ್ತದೆ.

ಮಿರಾಜ್-2000 ಜೆಟ್

  •  ಮಿರಾಜ್ 2000 ಬಹು-ಕಾರ್ಯ ನಿರ್ವಹಿಸುವ ಯುದ್ಧಫೈಟರ್ ಜೆಟ್
  • ಭಾರತವು 1980 ರಲ್ಲಿ ಫ್ರಾನ್ಸ್‌ನೊಂದಿಗೆ ಈ ಫೈಟರ್ ಜೆಟ್ ಗಳನ್ನು ಖರೀದಿಸಲು ಒಪ್ಪಂದವನ್ನು ಮಾಡಿಕೊಂಡಿತು. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಬಳಸಲಾಗಿತ್ತು
  • ಗರಿಷ್ಠ ವೇಗ: 2,336 km/h
  • ವ್ಯಾಪ್ತಿ: 1,550 ಕಿ.ಮೀ
  • ಪರಿಚಯ: ಜೂನ್ 1984
  • ಹಾರಾಡುವಾಗ ಅದರಿಂದ ಹೊರಬರುವ ಇಂಧನದ ಹೊಗೆ ಕಡಿಮೆ ಇರುತ್ತದೆ. ಆದರಿಂದ ನೆಲದ ಮೇಲಿರುವ ಸೈನ್ಯಕ್ಕೆ ಇದನ್ನ ಪತ್ತೆಮಾಡಲು ಕಷ್ಟವಾಗುತ್ತೆ.
  • ಈ ವಿಮಾನ ಪ್ರತಿ ಗಂಟೆಗೆ 900 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.