Published on: May 3, 2024

ಕೋವಿಡ್ ಲಸಿಕೆ – ಕೋವಿಶೀಲ್ಡ್

ಕೋವಿಡ್ ಲಸಿಕೆ – ಕೋವಿಶೀಲ್ಡ್

ಸುದ್ದಿಯಲ್ಲಿ ಏಕಿದೆ?   ಕೋವಿಡ್ ಲಸಿಕೆ– ಕೋವಿಶೀಲ್ಡ್ ಅನ್ನು ಅಭಿವೃದ್ಧಿ‍ಪಡಿಸಿದ್ದ ಕಂಪನಿ, ಆ ಲಸಿಕೆಯಿಂದ ಮಾರಣಾಂತಿಕ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಸ್ಟ್ರಾಜೆನೆಕಾ ಕಂಪನಿ ಇದೇ ಮೊದಲ ಬಾರಿಗೆ ಲಂಡನ್ನ ನ್ಯಾಯಾಲಯದ ಎದುರು ಒಪ್ಪಿಕೊಂಡಿದೆ.

ಮುಖ್ಯಾಂಶಗಳು

  • ಬ್ರಿಟನ್ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡು ಮೃತಪಟ್ಟ ಮತ್ತು ಶಾಶ್ವತ ಅನಾರೋಗ್ಯಕ್ಕೆ ತುತ್ತಾದ 51 ಮಂದಿಯ ಕುಟುಂಬದವರು 2023ರಲ್ಲಿ ಆಸ್ಟ್ರಾಜೆನೆಕಾ ವಿರುದ್ಧ ನ್ಯಾಯಾಲಯದ ಮೊರೆಹೋಗಿದ್ದರು.
  • ಈ ವಿಚಾರಣೆಯ ಭಾಗವಾಗಿ ಕಂಪನಿಯು ಲಂಡನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ಇದೆ.
  • ಕೋವಿಶೀಲ್ಡ್ ಪಡೆದುಕೊಂಡವರಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ರಕ್ತಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೆಟ್ ಸಂಖ್ಯೆ ಇಳಿಕೆ (ಟಿಟಿಎಸ್) ಸಮಸ್ಯೆ ತಲೆದೋರುತ್ತದೆ ಎಂದು ಕಂಪನಿ ಪ್ರಮಾಣಪತ್ರದಲ್ಲಿ ವಿವರಿಸಿದೆ. ಆದರೆ ಇದು ಅಪರೂಪದ ಅಡ್ಡಪರಿಣಾಮವಾದರೂ ಮಾರಣಾಂತಿಕ ಸಮಸ್ಯೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
  • ಭಾರತದಲ್ಲಿ ಈವರೆಗೆ ಒಟ್ಟು 200 ಕೋಟಿ ಡೋಸ್ಗಳಷ್ಟು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಅದರಲ್ಲಿ 176 ಕೋಟಿ ಡೋಸ್ ಕೋವಿಶೀಲ್ಡ ನದ್ದಾಗಿವೆ

ಲಸಿಕೆಯನ್ನು ಅಭಿವೃದ್ಧಿಪಡಿಸಿದವರು: ಬ್ರಿಟನ್ನ ಆಕ್ಸ್ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಕಂಪನಿ ಜಂಟಿಯಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದವು. ಭಾರತದ ‘ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ (ಎಸ್ಐಐ) ಕಂಪನಿಯು ಈ ಲಸಿಕೆಗಳನ್ನು ತಯಾರಿಸುವ ಗುತ್ತಿಗೆ ಪಡೆದುಕೊಂಡಿತ್ತು.

ಟಿಟಿಎಸ್ ಎಂದರೆ…

  • ತ್ರಾಂಬೋಸಿನ್ ವಿತ್ ತ್ರಾಂಬೋ ಸೈಟೊಪೀನಿಯಾ ಸಿಂಡ್ರೋಮ್ ಎನ್ನುವುದು ಟಿಟಿಎಸ್ ವಿಸ್ತೃತ ರೂಪ.
  • ತ್ರಾಂಬೋಸಿನ್ ಎಂದರೆ, ರಕ್ತ ಹೆಪ್ಪುಗಟ್ಟುವಿಕೆ ಎಂದರ್ಥ.
  • ತ್ರಾಂಬೋಸೈಟೊಪೀನಿಯಾ ಎಂದರೆ, ರಕ್ತದಲ್ಲಿನ ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆಯಾಗುವುದು.
  • ಹೀಗೆ ರಕ್ತವು ಹೆಪ್ಪುಗಟ್ಟುವ ಜೊತೆಗೆ ಪ್ಲೇಟ್ಲೆಟ್ ಸಂಖ್ಯೆಯೂ ಕಡಿಮೆಯಾಗುವುದೇ ಟಿಟಿಎಸ್.
  • ಲಸಿಕೆ ತೆಗೆದುಕೊಳ್ಳದಿದ್ದರೂ ಮನುಷ್ಯನಲ್ಲಿ ಈ ಸ್ಥಿತಿ ತಲೆದೋರುತ್ತದೆ. ಆದರೆ, ಲಸಿಕೆ ಪಡೆದ ನಂತರ ಲಸಿಕೆಯ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುವುದನ್ನು ‘ವ್ಯಾಕ್ಸಿನ್ ಇನ್ಡ್ಯೂಸ್ಡ್ ಪ್ರೊತ್ರೊಂಬೊಟಿಕ್ ಇಮ್ಯೂನ್ ತ್ರಾಂಬೊಸೈಟೊಪೀನಿಯಾ(ವಿಐಪಿಐಟಿ) ಅಥವಾ ‘ವ್ಯಾಕ್ಸಿನ್ ಇನ್ಡ್ಯೂಸ್ಡ್ ತ್ರೊಂಬೊಟಿಕ್ ತ್ರಾಂಬೋಸೈಟೊಪೀನಿಯಾ(ವಿಐಟಿಟಿ) ಎನ್ನುತ್ತಾರೆ.
  • ರೋಗಲಕ್ಷಣ ಮತ್ತು ಪರಿಣಾಮಗಳು ಮೂರರದ್ದೂ ಒಂದೇ ಆಗಿರುತ್ತದೆ.

ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುತ್ತದೆ

ತೀವ್ರತರವಾದ ನೋವು ಮತ್ತು ಊತ, ಎದೆನೋವು, ದೇಹದ ಒಂದು ಪಾರ್ಶ್ವದಲ್ಲಿ ಮರಗಟ್ಟುವುದು ಮತ್ತು ಬಲಹೀನತೆಯ ಅನುಭವ, ಸ್ಥಿರವಾಗಿರದ ಮನಸ್ಸು– ಇವು ರೋಗಲಕ್ಷಣಗಳು ದೇಹಚಲನೆಯು ತ್ರಾಸದಾಯಕವಾಗುವುದು, ಆನುವಂಶಿಕ ರೋಗಗಳು ಉಲ್ಬ ಣ, ತೂಕ ಹೆಚ್ಚುವುದು, ಗರ್ಭಧಾರಣೆಯಲ್ಲಿ ತೊಂದರೆ, ಕ್ಯಾನ್ಸರ್ ಹಾರ್ಮೋನ್ಗಳು ಉತ್ಪತ್ತಿ ಕುಂಠಿತ, ಆಗ ಬಾಹ್ಯವಾಗಿ ಹಾರ್ಮೋನ್ಗಳನ್ನು ನೀಡುವಂತಾಗಬಹುದು. ದೇಹದ ಪ್ರತಿಕಾಯಗಳನ್ನು ದುರ್ಬಲಗೊಳಿಸುವಂಥ ರೋಗಗಳು ಕಾಣಿಸಿಕೊಳ್ಳುತ್ತವೆ, ಉದಾ: ಸಕ್ಕರೆ ಕಾಯಿಲೆ. ಇವು ಟಿಟಿಎಸ್ನ ಅಪಾಯಗಳು

ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗುವುದು

  • ಒಂದು ಮೈಕ್ರೊಲೀಟರ್ ನಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೂ ಪ್ಲೇಟ್ಲೆಟ್ ಸಂಖ್ಯೆ ಇರಬೇಕು
  • ಟಿಟಿಎಸ್ ತಲೆದೋರಿದಾಗ ಮನುಷ್ಯನೊಬ್ಬನಲ್ಲಿ 1.5 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯ ಪ್ಲೇಟ್ಲೆಟ್ ಇರುತ್ತವೆ
  • ಒಂದು ವೇಳೆ 10 ಸಾವಿರಕ್ಕಿಂತ ಕಡಿಮೆ ಸಂಖ್ಯೆಯ ಪ್ಲೇಟ್ಲೆಟ್ ಇದ್ದರೆ, ಇದು ಅಪಾಯಕಾರಿ ಸ್ಥಿತಿ. ಆಂತರಿಕ ರಕ್ತಸ್ರಾವವಾಗುವ ಸಂಭವ ಇರುತ್ತದೆ. ವಿರಳ ಸಂದರ್ಭಗಳಲ್ಲಿ ಮಿದುಳಿನಲ್ಲಿಯೂ ರಕ್ತಸ್ರಾವವಾಗಬಹುದು
  • ಪಿಎಫ್4 ಎಲಿಸಾ ಪರೀಕ್ಷೆಯು ಪೇಟ್ಲೆಟ್ಸ್ ಸಂಖ್ಯೆಯನ್ನು ಪತ್ತೆಹಚ್ಚುತ್ತದೆ.