Published on: February 20, 2023

ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ)

ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ)


ಸುದ್ದಿಯಲ್ಲಿ ಏಕಿದೆ? ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ಚಿರತೆಯ ಅಸಹನೆಯ ವರ್ತನೆಗೆ ಸಿಡಿವಿ ರೋಗ ಕಾರಣ ಎಂದು ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ


ಮುಖ್ಯಾಂಶಗಳು

  • ಸಿಡಿವಿಯನ್ನು ಕ್ಯಾನೈನ್ ಮೊರ್ಬಿಲ್ಲಿವೈರಸ್ ಎಂದೂ ಕರೆಯುತ್ತಾರೆ.
  • ಇದು ಮಾಂಸಾಹಾರಿ ಪ್ರಾಣಿಗಳಲ್ಲಿ ‘ದಿಗ್ಭ್ರಮೆ’ ಮತ್ತು ‘ಭಯ ಕಳೆದುಕೊಳ್ಳುವಂತೆ  ನರಗಳ ಮೇಲೆ ಪರಿಣಾಮ ಬೀರುತ್ತದೆ.
  • ‘ನೇಪಾಳದಲ್ಲಿನ ಹುಲಿಗಳು ಮತ್ತು ಚಿರತೆಗಳಲ್ಲಿ ಸಿಡಿವಿ’ ಅಧ್ಯಯನ ಜನವರಿ 28 ರಂದು ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾಗಿತ್ತು. ಇದರಲ್ಲಿ 2020-2022ರ ನಡುವೆ ಸಿಡಿವಿಯೊಂದಿಗೆ ಮಾರಣಾಂತಿಕ ನರ ಸಮಸ್ಯೆಯ ಕಾಯಿಲೆಯಿಂದ ಬಳಲುತ್ತಿದ್ದ ಆರು ಭಾರತೀಯ ಚಿರತೆಗಳನ್ನು ನೇಪಾಳಕ್ಕೆ ನೀಡಲಾಗಿತ್ತು.
  • ಭಾರತದ ಮಾಂಸಾಹಾರಿಗಳಾದ ಹುಲಿ ಮತ್ತು ಚಿರತೆಗಳು ಸಹ ಅಪಾಯಕಾರಿ ವೈರಸ್‌ನಿಂದ ಸೋಂಕಿಗೆ ಒಳಗಾಗಿವೆ.
  • ರೇಬಿಸ್‌ನ ಸಂದರ್ಭದಲ್ಲಿ ಸಿಡಿವಿ-ಸೋಂಕಿತ ಪ್ರಾಣಿಗಳು ಮನುಷ್ಯರ ಭಯವನ್ನು ಕಳೆದುಕೊಳ್ಳುವುದು ಸಾಧ್ಯ.
  • ಪ್ರಸ್ತುತ ಉಪಖಂಡದಾದ್ಯಂತ ಸಿಡಿವಿ ರೋಗವಿದೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಸಿಂಹ,  ತೋಳ,  ನರಿ, ಹುಲಿ,  ಚಿರತೆ ಮತ್ತು ಕತ್ತೆಕಿರುಬಗಳಲ್ಲಿ  ಸಿಡಿವಿ ಪತ್ತೆ ಹಚ್ಚಲಾಗಿದೆ.

ಲಕ್ಷಣಗಳು

  • ಇದನ್ನು ಸ್ಥೂಲವಾಗಿ ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಆರಂಭಿಕ ಹಂತದಲ್ಲಿ ಜ್ವರ ಮತ್ತು ರೋಗ ನಿರೋಧಕ ಶಕ್ತಿ ಕುಂದಿರುತ್ತದೆ. ವೈರಸ್ ಅಂಗಾಂಶಕ್ಕೆ ಸೋಂಕು ಉಂಟುಮಾಡಿದಾಗ ತೀವ್ರವಾದ ಹಂತ ತಲುಪುತ್ತದೆ.
  • ಪರಿಣಾಮವಾಗಿ ಕಣ್ಣುಗಳು ಮತ್ತು ಮೂಗುಗಳಿಂದ ನೀರು ಸೋರುವುದು, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳು ಬರುತ್ತದೆ.
  • ಕೆಲ ಪ್ರಾಣಿಗಳು ಈ ಹಂತದಲ್ಲಿ ಸಾವನ್ನಪ್ಪುತ್ತವೆ, ಆದರೆ, ಮತ್ತೆ ಇತರ ಪ್ರಾಣಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತವೆ.
  • ಮೂರನೇ ಹಂತದಲ್ಲಿ ಪ್ರಾಣಿಗಳಲ್ಲಿ ನರದ ಸಮಸ್ಯೆ ಉಂಟಾಗುತ್ತದೆ.   ಸಿಡಿವಿ ಕಾಯಿಲೆಯ ಅಪಾಯವನ್ನು ತಗ್ಗಿಸಲು ರೇಬಿಸು ಚುಚ್ಚುಮದ್ದು ಮಾತ್ರ ಉಪಯುಕ್ತ ತಂತ್ರವಾಗಿದೆ.
  • ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ದೊಡ್ಡ ಬೆಕ್ಕುಗಳಿಗೆ ಮನುಷ್ಯರ ಬಗ್ಗೆ ಕಡಿಮೆ ಭಯಪಡುವಂತೆ ಮಾಡುತ್ತದೆ. ಇದು ಚಿರತೆ ಆಗಾಗ್ಗೆ ಆಹಾರಕ್ಕಾಗಿ ಜನವಸತಿಗಳನ್ನು ಪ್ರವೇಶಿಸಲು ಕಾರಣವಾಗಬಹುದು.
  • ಸಾಕು ನಾಯಿಗಳ ಬೇಟೆಯು ಸಾಂಕ್ರಾಮಿಕ ವೈರಸ್ ಪಡೆಯುವ ಪ್ರಮುಖ ಮಾರ್ಗವಾಗಿದೆ.

ವೈರಸ್ ಪತ್ತೆ : 2003 ರಲ್ಲಿ ರಷ್ಯಾದಲ್ಲಿಆರಂಭಿಕವಾಗಿ ಸಿಡಿವಿ ಪತ್ತೆಯಾಯಿತು. ನಂತರ ಇಂಡೋನೇಷ್ಯಾ ಮತ್ತು ಭಾರತದಲ್ಲಿನ ಹುಲಿಗಳು ಮತ್ತು ಚಿರತೆಗಳಲ್ಲಿ ಈ ರೋಗ ಗುರುತಿಸಲಾಯಿತು. ಈ ರೋಗ ಉಂಟುಮಾಡುವರಲ್ಲಿ ನಾಯಿಗಳು ಪ್ರಮುಖವಾಗಿವೆ.