Published on: June 9, 2022
ಕ್ಯೂಎಸ್ ಶ್ರೇಯಾಂಕ:
ಕ್ಯೂಎಸ್ ಶ್ರೇಯಾಂಕ:
ಸುದ್ಧಿಯಲ್ಲಿಏಕಿದೆ?
ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕಗಳ ಉನ್ನತ 200 ವಿಶ್ವವಿದ್ಯಾನಿಲಯಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದೆ.
ಮುಖ್ಯಾಂಶಗಳು
- ಕಳೆದ ಬಾರಿಗಿಂತ 31 ಸ್ಥಾನ ಮೇಲೇರಿ, 151ನೇ ರ‍್ಯಾಂಕಿಗೆ ಜಿಗಿದಿದೆ. ಅಲ್ಲದೇ, ದೇಶದ ನಾಲ್ಕು ಐಐಟಿಗಳು ಉನ್ನತ ರ‍್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
- ಲಂಡನ್ ಮೂಲದ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಕ ಕ್ವಾಕ್ವಾರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವಿಶ್ವದ ಅತ್ಯಂತ ಹೆಚ್ಚು ಜನಪ್ರಿಯ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶ್ರೇಯಾಂಕದ 19ನೇ ಆವೃತ್ತಿ ಬಿಡುಗಡೆ ಮಾಡಿದೆ.
- ಬಾಂಬೆ ಐಐಟಿ 172ನೇ ರ‍್ಯಾಂಕ್ ಪಡೆದು, ದೇಶದ ಎರಡನೇ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎನಿಸಿದೆ. ದೆಹಲಿಯ ಐಐಟಿ, 174ನೇ ಸ್ಥಾನ ಗಿಟ್ಟಿಸಿದೆ. ಕಾನ್ಪುರ್ ಐಐಟಿ ಮೇಲೇರಿ 264ನೇ ರ‍್ಯಾಂಕ್, ರೂರ್ಕಿಯ ಐಐಟಿ, 369ನೇ ರ‍್ಯಾಂಕ್ ಪಡೆದಿದೆ. ಗುವಾಹಟಿಯ ಐಐಟಿ 11 ಸ್ಥಾನ ಮೇಲೇರಿದ್ದರೆ, ಇಂದೋರ್ ಐಐಟಿ ಇದೇ ಪ್ರಥಮ ಬಾರಿಗೆ ಅತೀ ಹೆಚ್ಚು ಸ್ಥಾನ ಹೆಚ್ಚಿಸಿಕೊಂಡು, ಜಾಗತಿಕವಾಗಿ 391ನೇ ಸ್ಥಾನ ಪಡೆದಿದೆ. ಒಪಿ ಜಿಂದಾಲ್ ಗ್ಲೋಬಲ್ ಯುನಿರ್ವಸಿಟಿ ಸತತ ಮೂರನೇ ವರ್ಷವೂ ಅತ್ಯುನ್ನತ ಶ್ರೇಣಿಯ ಖಾಸಗಿ ವಿಶ್ವವಿದ್ಯಾಲಯ ಎನ್ನುವ ಶ್ರೇಯ ಗಿಟ್ಟಿಸಿದೆ. ಒಟ್ಟು 41 ಭಾರತೀಯ ವಿಶ್ವವಿದ್ಯಾನಿಲಯಗಳು ಕ್ಯೂಎಸ್ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿವೆ.. ಏಳು ವಿಶ್ವವಿದ್ಯಾಲಯಗಳು ಹೊಸದಾಗಿ ಶ್ರೇಯಾಂಕಕ್ಕೆ ಪ್ರವೇಶ ಪಡೆದಿವೆ.
-
ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (ಎಫ್‌ಎಸ್‌ಆರ್‌ಗೆ 225ನೇ ಸ್ಥಾನ), ಒಪಿ ಜಿಂದಾಲ್ ಗ್ಲೋಬಲ್ ಯುನಿವರ್ಸಿಟಿ (ಎಫ್‌ಎಸ್‌ಆರ್‌ಗೆ 235 ನೇ ಸ್ಥಾನ) ಈ ಎರಡು ಭಾರತೀಯ ವಿಶ್ವವಿದ್ಯಾನಿಲಯಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅನುಪಾತದಲ್ಲಿ ಅಗ್ರ 250ರಲ್ಲಿ ಸ್ಥಾನ ಪಡೆದಿವೆ. ಬೆಂಗಳೂರಿನ ಐಐಎಸ್‌ಸಿಯು ಎಫ್‌ಎಸ್‌ಆರ್‌ನಲ್ಲಿ 276ನೇ ಸ್ಥಾನದಲ್ಲಿದೆ.