Published on: January 23, 2023
ಕ್ರೀಡಾ ಸೌಕರ್ಯ ಅಭಿವೃದ್ಧಿ
ಕ್ರೀಡಾ ಸೌಕರ್ಯ ಅಭಿವೃದ್ಧಿ
ಸುದ್ದಿಯ್ಲಲಿ ಏಕಿದೆ? ಮಾಲ್ಡೀವ್ಸ್‌ನಲ್ಲಿ ಕ್ರೀಡಾ ಮೂಲಸೌರ್ಕಯಗಳ ಅಭಿವೃದ್ಧಿಗಾಗಿ ಭಾರತವು ಸುಮಾರು ರೂ.3,200 ಕೋಟಿಗೆ ರಿಯಾಯಿತಿ ಸಾಲದ ನೆರವು ವಿಸ್ತರಿಸಿದೆ.
ಮುಖ್ಯಾಂಶಗಳು
- ನೆರೆ ರಾಷ್ಟ್ರಗಳಾದ ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಜತೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಯ ಮಾತುಕತೆಗಾಗಿ ಸಚಿವ ಎಸ್. ಜೈಶಂಕರ್ ಮೂರು ದಿನಗಳ ಭೇಟಿ ಕೈಗೊಂಡಿದ್ದರು.
- ಜೈಶಂಕರ್ ಮತ್ತು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು ಶಾವಿಯಾನಿ ಫೋಕೈಡೋದಲ್ಲಿ ಭಾರತದ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಸಮುದಾಯ ಕೇಂದ್ರವನ್ನು ಉದ್ಘಾಟಿಸಿದರು.
- ಪ್ರಮುಖವಾದ ‘ಫಿಟ್ ಇಂಡಿಯಾ’ ಮತ್ತು ‘ಖೇಲೊ ಇಂಡಿಯಾ’ ಯೋಜನೆಗಳನ್ನು ನೆರೆಯ ದೇಶಗಳಿಗೂ ನೀಡುವ ಮೊದಲ ವಿದೇಶಿ ನೀತಿಯ ಭಾಗವಾಗಿ ಮಾಲ್ಡೀವ್ಸ್‌ನಲ್ಲಿ ಕ್ರೀಡಾಸೌಕರ್ಯ ಅಭಿವೃದ್ಧಿಗೆ ನೆರವು ನೀಡಲಾಗುತ್ತಿದೆ.
ಹನಿಮಾಧೂ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ:
- ಭಾರತದ ಸಹಭಾಗಿತ್ವದಲ್ಲಿ ಮಾಲ್ಡೀವ್ಸ್‌ನ ಹನಿಮಾಧೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪುನರಾಭಿವೃದ್ಧಿಗೆ ಸಚಿವ ಎಸ್. ಜೈಶಂಕರ್ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಶಂಕುಸ್ಥಾಪನೆ ನೆರವೇರಿಸಿದರು.
- ಠಾಕೂರುರುಫಾನು ಸ್ಮಾರಕಕ್ಕೆ ಗೌರವ: 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಮಾಲ್ಡೀವ್ಸ್ ರಾಷ್ಟ್ರೀಯ ನಾಯಕ, ಸುಲ್ತಾನ್ ಮೊಹಮ್ಮದ್ ಠಾಕೂರುರುಫಾನು ಅವರ ಸ್ಮಾರಕಕ್ಕೆ ಜೈಶಂಕರ್ ಗೌರವ ಸಲ್ಲಿಸಿದರು. 1573ರಿಂದ 1585ರವರೆಗೆ ದೇಶ ಆಳಿದ ಠಾಕೂರುರುಫಾನು ಅವರ ವಿಜಯವನ್ನು ಮಾಲ್ಡೀವ್ಸ್‌ನಲ್ಲಿ ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ.
ಫಿಟ್ ಇಂಡಿಯಾ
- 29 ಆಗಸ್ಟ್ 2019 ರಂದು “ಫಿಟ್ ಇಂಡಿಯಾ ಮೂವ್ಮೆಂಟ್” ಅನ್ನು ಪ್ರಾರಂಭಿಸಿದರು. ಅಭಿಯಾನವನ್ನು ಪ್ರಾರಂಭಿಸಲಾಯಿತು.
- “ಆರೋಗ್ಯಕರ ದೇಹವು ಮಾನವನ ದೊಡ್ಡ ಆಸ್ತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು”. ಈ ಚಿಂತನೆಯೊಂದಿಗೆ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಸಂದರ್ಭದಲ್ಲಿ ಫಿಟ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಲಾಯಿತು. ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು “ರಾಷ್ಟ್ರೀಯ ಕ್ರೀಡಾ ದಿನ” ಎಂದು ಸಹ ಆಚರಿಸಲಾಗುತ್ತದೆ.
ಖೇಲೋ ಇಂಡಿಯಾ
- ಈ ಕಾರ್ಯಕ್ರಮವು ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಯೋಜನೆ/ಯೋಜನೆಯಾಗಿದೆ. ಇದನ್ನು 2018 ರಲ್ಲಿ ಅಂದಿನ ಕ್ರೀಡಾ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ದೆಹಲಿಯಲ್ಲಿ ಪ್ರಾರಂಭಿಸಿದರು. ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಸುಧಾರಿಸಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
- ರಾಷ್ಟ್ರೀಯ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ ಮತ್ತು ವೈಯಕ್ತಿಕ ಅಭಿವೃದ್ಧಿಯ ಸಾಧನವಾಗಿ ಕ್ರೀಡೆಗಳನ್ನು ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿರುವ ಕೇಂದ್ರ ಸಚಿವ ಸಂಪುಟವು ‘ರಾಜೀವ್ ಗಾಂಧಿ ಖೇಲ್ ಅಭಿಯಾನ’ (ಹಿಂದೆ ‘ಯುವ ಕ್ರೀಡಾ ಎಂದು ಕರೆಯಲಾಗುತ್ತಿತ್ತು’ ಅನ್ನು ಕ್ರೋಢೀಕರಿಸುವ ಮೂಲಕ ಪರಿಷ್ಕೃತ ‘ಖೇಲೋ ಇಂಡಿಯಾ’ ಕಾರ್ಯಕ್ರಮದ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. & ಖೇಲ್ ಅಭಿಯಾನ’, ‘ನಗರ ಕ್ರೀಡಾ ಮೂಲಸೌಕರ್ಯ ಯೋಜನೆ’ ಮತ್ತು ರಾಷ್ಟ್ರೀಯ ಕ್ರೀಡಾ ಪ್ರತಿಭೆ ಹುಡುಕಾಟ ವ್ಯವಸ್ಥೆ ಕಾರ್ಯಕ್ರಮ’. “ಸ್ಪೋರ್ಟ್ಸ್ ಫಾರ್ ಎಕ್ಸಲೆನ್ಸ್” ಮತ್ತು “ಸ್ಪೋರ್ಟ್ಸ್ ಫಾರ್ ಆಲ್” ಅನ್ನು ಉತ್ತೇಜಿಸಲು ಶ್ರಮಿಸುತ್ತದೆ.