Published on: October 11, 2022

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ:

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ:

ಸುದ್ದಿಯಲ್ಲಿ ಏಕಿದೆ?

ನಾಸಾದ ಬಾಹ್ಯಾಕಾಶ ನೌಕೆ ‘ಡಾರ್ಟ್‌’, ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶಲ್ಲಿ ಸಾವಿರಾರು ಕಿ.ಮೀ. ವರೆಗೂ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲೆಗಳ ಚೂರುಗಳು ಚದುರಿದ ಚಿತ್ರಗಳನ್ನು ಚಿಲಿಯಲ್ಲಿರುವ ದೂರದರ್ಶಕ ಸೆರೆಹಿಡಿದಿದೆ.

ಮುಖ್ಯಾಂಶಗಳು

  • ರೀಡೈರೆಕ್ಷನ್‌ ಟೆಸ್ಟ್‌ – ಕ್ಷುದ್ರಗ್ರಹದ ಪಥ ಬದಲಿಸುವ ಪರೀಕ್ಷೆ)’ ಕ್ಷುದ್ರಗ್ರಹ ‘ಡಿಮೊರ್ಫಾಸ್’ಗೆ ಹೈಪರ್‌ ಸಾನಿಕ್‌ ವೇಗದಲ್ಲಿ ಡಿಕ್ಕಿ ಹೊಡೆದಿದೆ. 530 ಅಡಿ ಅಗಲದ ಕ್ಷುದ್ರಗ್ರಹದ ಪಥ ಬದಲಿಸುವ ಸಲುವಾಗಿ ಅದರ ಮೇಲೆ ಬಾಹ್ಯಾಕಾಶ ನೌಕೆಯು ಡಿಕ್ಕಿ ಹೊಡೆಯಿತು.
  • ಭೂಮಿಯಿಂದ 7 ದಶಲಕ್ಷ ಮೈಲುಗಳ (11 ದಶಲಕ್ಷ ಕಿಲೋಮೀಟರ್) ದೂರದಲ್ಲಿ ಈ ವಿದ್ಯಮಾನ ನಡೆದಿದೆ. ಈ ಪರೀಕ್ಷೆಗಾಗಿ ‘ಡಾರ್ಟ್‌’ ಅನ್ನು ಹತ್ತು ತಿಂಗಳ ಹಿಂದೆ ನಭಕ್ಕೆ ಉಡಾಯಿಸಲಾಗಿತ್ತು.
  • ಈ ಪರೀಕ್ಷೆಯ ಎರಡು ದಿನಗಳ ನಂತರ, ಖಗೋಳವಿಜ್ಞಾನಿಗಳು ಚಿಲಿಯಲ್ಲಿರುವ ‘ಸೌಥ್ ಆಸ್ಟ್ರೋಫಿಸಿಕಲ್ ರಿಸರ್ಚ್‌ ಟೆಲಿಸ್ಕೋಪ್‌’ (ಎಸ್‌ಒಎಆರ್‌) ಮೂಲಕ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಕ್ಷುದ್ರಗ್ರಹದ ಕಕ್ಷೆಯನ್ನು ಮಾರ್ಪಡಿಸಲು ಕೈಗೊಂಡ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಇದಾಗಿದೆ.
  • ಅನ್ಯಗ್ರಹಗಳಿಂದ ಭೂಮಿಗೆ ಎದುರಾಗುವ ಹಾನಿಯನ್ನು ತಪ್ಪಿಸುವ ಈ ಮಹತ್ವದ ಯೋಜನೆಯಲ್ಲಿ ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೊಫಿಸಿಕ್ಸ್‌) ವಿಜ್ಞಾನಿ ಕ್ರಿಶ್ಪಿನ್‌ ಕಾರ್ತಿಕ್‌ ಸಹ ಇದ್ದರು.

ಉದ್ದೇಶ :

  • ಚಲನ ಶಕ್ತಿಯನ್ನು ಬಳಸಿಕೊಂಡು ಕ್ಷುದ್ರಗ್ರಹದ ಪಥವನ್ನು ಬದಲಾಯಿಸುವ ಸಾಮರ್ಥ್ಯವನ್ನು ಬಾಹ್ಯಾಕಾಶ ನೌಕೆಯು ಹೊಂದಿದೆಯೇ ಎಂದು ಅವಲೋಕಿಸಲು ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು.

ಡಿಕ್ಕಿ ಹೊಡೆಸಲು ಕಾರಣ

  • ಭೂಮಿಗೆ ಆಕಾಶ ಕಾಯಗಳಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಲು, ಸೆಪ್ಟೆಂಬರ್‌ 26ರಂದು ‘ಡಾರ್ಟ್‌’ ನೌಕೆಯಿಂದ ಉದ್ದೇಶಪೂರ್ವಕವಾಗಿ ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಲಾಗಿತ್ತು. 66 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗಹದಿಂದಾಗಿಯೇ ಡೈನೋಸಾರ್‌ಗಳ ಸಂತತಿ ಅಳಿಯಿತು ಎಂದು ಊಹಿಸಲಾಗಿದೆ.
  • ಭವಿಷ್ಯದಲ್ಲಿ ಇಂತಹ ಗಂಡಾಂತರ ಎದುರಾಗದಿರಲಿ ಎಂಬ ಕಾರಣಕ್ಕೇ ಈ ಪರೀಕ್ಷೆ ನಡೆಸಲಾಗಿದೆ’. ‘ಭೂಮಿಯಿಂದ ಬಹುದೂರದಲ್ಲಿರುವ ಕ್ಷುದ್ರಗ್ರಹವೊಂದರ ಪಥವನ್ನು ಸ್ವಲ್ಪ ಬದಲಿಸಿದರೂ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಇಂತಹ ಪ್ರಯೋಗಗಳು ಅಗತ್ಯ ವಾಗಿವೆ.