Published on: June 6, 2022

‘ಖುಷಿ ಹಬ್”

‘ಖುಷಿ ಹಬ್”

ಸುದ್ಧಿಯಲ್ಲಿ ಏಕಿದೆ?

ಎರಡನೇ ಮಕ್ಕಳ ಸ್ನೇಹಿ ಪ್ರದೇಶಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆ ಚಾಲನೆ ನೀಡಿದೆ. ಆರ್ ಪಿಎಫ್ ಔಟ್ ಫೋಸ್ಟ್ ಬಳಿಯ ಪ್ಲಾಟ್ ಫಾರಂ ನಂಬರ್ 1 ರಲ್ಲಿ ಸುಮಾರು 400 ಚದರ ಅಡಿ ವಿಸ್ತೀರ್ಣದಲ್ಲಿ ‘ಖುಷಿ ಹಬ್” ತಲೆ ಎತ್ತಿದೆ.

ಉದ್ದೇಶ

  • ಮನೆಯಿಂದ ಓಡಿ ಬಂದ ಮಕ್ಕಳು, ಮಾನವ ಕಳ್ಳ ಸಾಗಣೆ ಅಥವಾ ನಾಪತ್ತೆಯಾದ ಮಕ್ಕಳಿಗೆ ಆಪ್ತ ಸಮಾಲೋಚನೆ ನೀಡುವುದು ಈ ಸ್ಥಳದ ಪ್ರಮುಖ ಉದ್ದೇಶವಾಗಿದೆ.
  • ಮಕ್ಕಳಿಗೆ ಸರಾತ್ಮಕ ವಾತಾವರಣ ರೂಪಿಸಿ, ಅವರಿಗೆ ಸುರಕ್ಷತೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ತಮ್ಮ ಸಮಸ್ಯೆಗಳನ್ನು ಹೇಳಲು ಆತ್ಮವಿಶ್ವಾಸ ನೀಡುತ್ತದೆ. ನಂತರ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುತ್ತದೆ

ಮುಖ್ಯಾಂಶಗಳು

  • ಮಕ್ಕಳ ಸಹಾಯವಾಣಿ, ಇತರ ಎನ್ ಜಿಒ ಹೊರತಾಗಿ ಆರ್ ಪಿಎಫ್ ಸಿಬ್ಬಂದಿ ವಾರದಲ್ಲಿ ಎಲ್ಲ ವೇಳೆಯಲ್ಲೂ ಇರಲಿದ್ದಾರೆ.

ಮೊದಲ ಖುಷಿ ಹಬ್

  • ಕೆಎಸ್‌ಆರ್‌ ನಿಲ್ದಾಣದಲ್ಲಿ ಆರಂಭಿಸಲಾದ ಮೊದಲ ಜಾಗದಲ್ಲಿ ಇದುವರೆಗೆ ಸುಮಾರು 100 ಮಕ್ಕಳಿಗೆ ಆಪ್ತ ಸಮಾಲೋಚನೆ ನೀಡಲಾಗಿದೆ.  ಶೌಚಾಲಯಗಳು, ಪಾಂಟ್ರಿಗಳಂತಹ ಸೌಕರ್ಯಗಳಲ್ಲದೆ ಪುಸ್ತಕಗಳು, ಟಾಯ್ಸ್ ಗಳು, ಚೇರ್ ಗಳನ್ನು ಮತ್ತು ಟೇಬಲ್ ಗಳನ್ನು ಒದಗಿಸಲಾಗಿದೆ.