Published on: March 25, 2023

ಗಾಂಧಿ ಗ್ರಾಮ ಪುರಸ್ಕಾರ ಮತ್ತು ನರೇಗಾ ಪ್ರಶಸ್ತಿ

ಗಾಂಧಿ ಗ್ರಾಮ ಪುರಸ್ಕಾರ ಮತ್ತು ನರೇಗಾ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮಾ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಹಾಗೂ ಪಂಚತಂತ್ರ 2.0, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ, ತೆರಿಗೆ ಸಂಗ್ರಹದ ಪಿಓಎಸ್ ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಆಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಮುಖ್ಯಾಂಶಗಳು

  • ನಮ್ಮ ರಾಜ್ಯವು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ.
  • ನೀಡುವ ಅನುದಾನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚುವರಿ ಅನುದಾನಕ್ಕೆ ರಾಜ್ಯದ ಅನೇಕ ಪಂಚಾಯಿತಿಗಳು ಪಾತ್ರವಾಗಿವೆ.
  • ನರೇಗಾದ ವಿವಿಧ ವಿಭಾಗದಲ್ಲಿ 79 ಪಂಚಾಯಿತಿಗಳು ಪ್ರಶಸ್ತಿ ಗೆದ್ದುಕೊಂಡಿವೆ. ಕಳೆದ ಮೂರು ವರ್ಷಗಳ ಗಾಂಧಿ ಗ್ರಾಮ ಪುರಸ್ಕಾರಕ್ಕೆ 500ಕ್ಕೂ ಹೆಚ್ಚು ಪಂಚಾಯಿತಿಗಳು ಪಾತ್ರವಾಗಿವೆ.

ನರೇಗಾ ಪ್ರಶಸ್ತಿ ಗೆದ್ದ ಪಂಚಾಯತ್ಗಳು:

  • ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರದ ಮೊದಲ ಬಹುಮಾನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ (15 ಲಕ್ಷ ರೂ.), ದ್ವಿತೀಯ ಬಹುಮಾನ ಶಿವಮೊಗ್ಗ ಜಿ.ಪಂ. (12.50 ಲಕ್ಷ ರೂ), ತೃತೀಯ ಬಹುಮಾನ ಬಳ್ಳಾ ರಿ, ಬಾಗಲಕೋಟೆ ಜಿ.ಪಂ. (ತಲಾ 10 ಲಕ್ಷ ರೂ.) ಗೆದ್ದುಕೊಂಡಿವೆ.
  • ತಾಲೂಕು ಪಂಚಾಯಿತಿ ವಿಭಾಗದಲ್ಲಿ ಮೊದಲ ಬಹುಮಾನವನ್ನು ಗುಳೇದಗುಡ್ಡ (10 ಲಕ್ಷ ರೂ.), ಎರಡನೇ ಬಹುಮಾನ ದೊಡ್ಡಬಳ್ಳಾ ಪುರ (7.50 ಲಕ್ಷ ರೂ.), ಮೂರನೇ ಬಹುಮಾನ ಭದ್ರಾವತಿ ಗೆದ್ದುಕೊಂಡಿದೆ.
  • ಗ್ರಾಮ ಪಂಚಾಯಿತಿ ವಿಭಾಗದಲ್ಲಿ ಮುಧೋಳದ ಹಲಗಲಿ, ಹಾಸನದ ಮಾಡಬಾಳ, ಕುಂದಾಪುರದ ಹಕ್ಲಾಡಿ, ಕೊಡಗಿನ ದೇವರಪುರ, ದೊಡ್ಡಬಳ್ಳಾಪುರದ ತೂಬಗೆರೆ ಪಂಚಾಯಿತಿಗಳು ಅತ್ಯುತ್ತಮ ವಿಭಾಗದಲ್ಲಿ ಆಯ್ಕೆಯಾಗಿದ್ದು ತಲಾ 5 ಲಕ್ಷ ರೂ. ಬಹುಮಾನಕ್ಕೆ ಪಾತ್ರವಾಗಿವೆ.

ಗಾಂಧಿ ಗ್ರಾಮ ಪುರಸ್ಕಾರ

  • ಪ್ರತಿ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಒಂದು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಜೀವನದ ಗುಣಮಟ್ಟ ಸುಧಾರಣೆಗೆ ಕೈಗೊಂಡಿರುವ ಕ್ರಮ, ಹಣಕಾಸಿನ ನಿರ್ವಹಣೆ, ಮೂಲಭೂತ ಸೌಕರ್ಯ , ಉತ್ತಮ ಆಡಳಿತ, ಪಂಚಾಯತ್ ನೀಡುವ ಸೇವೆ, ವಿನೂತನ ಪ್ರಯೋಗಗಳು ಮತ್ತು ಕೋವಿಡ್ ನಿರ್ವಹಣೆಯನ್ನು ಆಧರಿಸಿ ಪ್ರಶಸ್ತಿ ನೀಡಲಾಗಿದೆ.

ನರೇಗಾ ಪ್ರಶಸ್ತಿ

ಮಹಾತ್ಮ ಗಾಂಧಿ ರಾಷ್ಟ್ರೀ ಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ 100 ದಿನ ಉದ್ಯೋಗ ನೀಡುವುದರ ಜತೆಗೆ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ, ಜನರ ಜೀವನೋಪಾಯ ಬಲಪಡಿಸುವ ಆಸ್ತಿಗಳನ್ನು ಸೃಷ್ಟಿಸಿದ ಪಂಚಾಯತ್ಗಳಿಗೆ ನೀಡಲಾಗಿದೆ.

  • ಪಂಚತಂತ್ರ 2.0, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ: ಆನ್ಲೈನ್ನಲ್ಲೇ ಪಂಚಾಯಿತಿ ತೆರಿಗೆ ಪಾವತಿಸುವುದು: ಬಾಪೂಜಿ ಸೇವಾ ಕೇಂದ್ರ ಪೋರ್ಟಲ್ ಮತ್ತು ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಆ್ಯಪ್ಗೆ ಚಾಲನೆ ನೀಡಿದ್ದು ಸಾರ್ವಜನಿಕರು ಗ್ರಾಪಂಗಳಿಗೆ ಆನ್ಲೈನ್ ಮೂಲಕ ತೆರಿಗೆ ಪಾವತಿಸಬಹುದಾಗಿದೆ.
  • ದೇಶದಲ್ಲೇ ಮೊದಲ ಬಾರಿಗೆ ಆಸ್ತಿ ತೆರಿಗೆಯನ್ನು ಪೋನ್ ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಆ್ಯಪ್ಗ್ಳ ಮೂಲಕ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.
  • ಪಂಚಾಯಿತಿಗಳಲ್ಲಿ ಈಗಾಗಲೇ ಬಳಸಲಾಗುತ್ತಿರುವ ಪಂಚತಂತ್ರ ತಂತ್ರಾಂಶವನ್ನು ಉನ್ನತೀಕರಿಸಿ ಪಂಚತಂತ್ರ 2.0 ಬಿಡುಗಡೆ ಮಾಡಲಾಗಿದ್ದು ಪಂಚಾಯಿತಿಗಳ ದಿನನಿತ್ಯದ ಕಾರ್ಯಚಟುವಟಿಕೆ, ಸೇವೆಗಳ ವಿಲೇವಾರಿ, ಯೋಜನೆಗಳ ಅನುಷ್ಠಾನ ಮತ್ತು ತೀರ್ಮಾನವನ್ನು ಕೈಗೊಳ್ಳಲು ಬಳಸಲಾಗುತ್ತದೆ.
  • ಇದರ ಅನುಷ್ಠಾನದಿಂದ ಪಾರದರ್ಶಕತೆ ಹೆಚ್ಚಾಗುತ್ತದೆ. ಜನ ವಸತಿ ಸಭೆ, ವಾರ್ಡ್‌ಸಭೆ, ಗ್ರಾಮ ಸಭೆ, ಸ್ಥಾಯಿ ಸಮಿತಿ ಸಭೆ, ಸಾಮಾನ್ಯ ಸಭೆ, ಸಭೆಗಳ ಆಯೋಜಿಸುವಿಕೆ, ಹಾಜರಾತಿ, ಸಭಾ ನಡಾವಳಿಗಳಿಗೆ ಇದನ್ನು ಬಳಸಬಹುದಾಗಿದ್ದು ಇಂತಹ ಸವಲತ್ತು ಒದಗಿಸುವ ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ