Published on: February 3, 2023

ಗೋಬರ್ ಧನ್

ಗೋಬರ್ ಧನ್


ಸುದ್ದಿಯಲ್ಲಿ ಏಕಿದೆ? ಮರುಬಳಕೆ  ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ ಧನ್  ಯೋಜನೆ ಅಡಿಯಲ್ಲಿ 500 ಹೊಸ ವೆಸ್ಟ್ ಟು ವೆಲ್ತ್ ಘಟಕಗಳನ್ನು ಸ್ಥಾಪಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ


ಮುಖ್ಯಾಂಶಗಳು

  • ಇದರಲ್ಲಿ 200 ಸಿಬಿಜಿ (ಕಂಪ್ರೆಸ್ಸ್ಡ್ ಬಯೋಗ್ಯಾಸ್) ಮತ್ತು 300 ಸಮುದಾಯ ಘಟಕಗಳು ಸೇರಿದ್ದ್ದು ಇದಕ್ಕಾಗಿ ಹೂಡಿಕೆ ಮಾಡುವ ಉದ್ದೇಶದಿಂದ ಬಜೆಟ್ ನಲ್ಲಿ ಅನುದಾನವನ್ನು ಘೋಷಿಸಲಾಗಿದೆ.
  • ನೈಸರ್ಗಿಕ ಮತ್ತು ಜೈವಿಕ ಅನಿಲವನ್ನು ಮಾರಾಟ ಮಾಡುವ ಎಲ್ಲ ಸಂಸ್ಥೆಗಳಿಗೆ ಶೇ. 5 ರಷ್ಟು ಸಿಬಿಜಿ ಖರೀದಿ ಮಾಡಲು ಕಡ್ಡಾಯ ಮಾಡಲಾಗುತ್ತಿದೆ.

ಏನಿದು ಗೋಬರ್-ಧನ್?

  • (ಗ್ಯಾಲ್ವನೈಸಿಂಗ್ ಆರ್ಗನಿಕ ಬಯೋಗ್ಯಾಸ್ ಆಗ್ರೋ ರಿಸೋರ್ಸ್ ಧನ್)ಗೋಬರ್ ಧನ್ ಸಂಕ್ಷಿಪ್ತ ರೂಪ ಇದು. ಜಾನುವಾರುಗಳ ಕೃಷಿ ತ್ಯಾಜ್ಯ ಮತ್ತು ಸಗಣಿ ಸಂಗ್ರಹಿಸಿ ನೈಸರ್ಗಿಕ ಅನಿಲ, ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(CNG) ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿಸುವ ಗುರಿ ಹೊಂದಿದೆ.

ಯೋಜನೆಯ ಉದ್ದೇಶ

  • ಸಾವಯವ ಗೊಬ್ಬರದಿಂದ ನೈಸರ್ಗಿಕ ಅನಿಲ ಉತ್ಪಾದನೆ ಉತ್ತೇಜಿಸಲು ಸಗಣಿ ಮತ್ತು ಕೃಷಿ ತ್ಯಾಜ್ಯಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಅನುಕೂಲ ಆಗುವಂತೆ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಈ ಗೋಬರ್ ಧನ್ ಜಾರಿಗೊಳಿಸಿದೆ. ಈ ಯೋಜನೆಯನ್ನು ಪ್ರಸ್ತಾಪಿಸುವ ಜತೆಗೆ ಇದರಿಂದ ರೈತರು ಮತ್ತು ಹೈನುಗಾರರ ಆದಾಯ ಹೆಚ್ಚಲಿರುವ ಭರವಸೆಯನ್ನು ನೀಡಿದೆ.

ಗೋಬರ್‌ಧನ್‌ ಯೋಜನೆಯ ಪ್ರಯೋಜನಗಳು

  • ಪರಿಣಾಮಕಾರಿ ಜೈವಿಕ ವಿಘಟನೀಯ ತ್ಯಾಜ್ಯ ನಿರ್ವಹಣೆ.
  • ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಕಡಿತ.
  • ಕಚ್ಚಾ ತೈಲ ಆಮದು ಕಡಿತ.
  • ಸ್ಥಳೀಯ ಸಮುದಾಯಕ್ಕೆ ಉದ್ಯೋಗಾವಕಾಶ.
  • ಉದ್ಯಮಶೀಲತೆಗೆ ಉತ್ತೇಜನ.
  • ಸಾವಯವ ತ್ಯಾಜ್ಯದಿಂದ ರೈತರಿಗೆ/ ಸ್ಥಳೀಯ ಗ್ರಾಮ ಸಮುದಾಯಕ್ಕೆ ಹೆಚ್ಚುವರಿ ಆದಾಯ.
  • ಸಾವಯವ ಕೃಷಿಗೆ ಉತ್ತೇಜನ.

ಗ್ರಾಮ ಪಂಚಾಯಿತಿಗಳ ಮೇಲೆ ಯೋಜನೆ ಪರಿಣಾಮ

  • ಶಕ್ತಿ: ಜೈವಿಕ ಅನಿಲ ಸ್ಥಾವರಗಳ ಮೂಲಕ ಜೈವಿಕ ಶಕ್ತಿಯನ್ನು ಉತ್ಪಾದಿಸಲು ಕೃಷಿ ಮತ್ತು ಪ್ರಾಣಿಗಳ ತ್ಯಾಜ್ಯದ ಬಳಕೆಯ ಮೂಲಕ ಶಕ್ತಿಗೆ ಸಂಬಂಧಿಸಿದಂತೆ ಸ್ವಾವಲಂಬನೆ.
  • ಸಬಲೀಕರಣ:ಜೈವಿಕ ಅನಿಲ ಸ್ಥಾವರಗಳ ನಿರ್ಮಾಣ, ನಿರ್ವಹಣೆ ಮತ್ತು ದಿನನಿತ್ಯದ ಕಾರ್ಯಾಚರಣೆಗಳಲ್ಲಿ ಗ್ರಾಮೀಣ ಜನರನ್ನು ವಿಶೇಷವಾಗಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳುವುದು.
  • ಉದ್ಯೋಗ:ತ್ಯಾಜ್ಯ ಸಂಗ್ರಹಣೆ, ಸಂಸ್ಕರಣಾ ಘಟಕಗಳಿಗೆ ಸಾಗಣೆ, ಸಂಸ್ಕರಣಾ ಘಟಕದ ನಿರ್ವಹಣೆ, ಉತ್ಪಾದಿಸಿದ ಜೈವಿಕ ಅನಿಲದ ಮಾರಾಟ ಮತ್ತು ವಿತರಣೆ ಇತ್ಯಾದಿಗಳ ಮೂಲಕ ಗ್ರಾಮೀಣ ಯುವಕರು ಮತ್ತು ಮಹಿಳೆಯರಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು.