Published on: October 28, 2023

ಗೋವಾದ ಗೋಡಂಬಿಗೆ ಭೌಗೋಳಿಕ ಸೂಚಕ( ಜಿಐ ಟ್ಯಾಗ್)

ಗೋವಾದ ಗೋಡಂಬಿಗೆ ಭೌಗೋಳಿಕ ಸೂಚಕ( ಜಿಐ ಟ್ಯಾಗ್)

ಸುದ್ದಿಯಲ್ಲಿ ಏಕಿದೆ?  ನಿರ್ದಿಷ್ಟ ಭೌಗೋಳಿಕ ಪ್ರದೇಶ ಗಳಲ್ಲಿಉತ್ಪಾದನೆ ಯಾಗುವ ಕೃಷಿ ಉತ್ಪನ್ನಗಳಿಗೆ ಮತ್ತು ವಸ್ತುಗಳಿಗೆ ನೀಡುವ ಭೌಗೋಳಿಕ ಸೂಚಕ ಸ್ಥಾನಮಾನವನ್ನು ಇತ್ತೀಚೆಗೆ ಗೋವಾದ ಗೋಡಂಬಿಗೆ ನೀಡಲಾಗಿದೆ.

ಮುಖ್ಯಾಂಶಗಳು

  • ಭೌಗೋಳಿಕ ಸೂಚಕ ಸ್ಥಾನಮಾನವನ್ನು ಚೆನ್ನೈನಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಶನ್ಸ್ ರಿಜಿಸ್ಟ್ರಿ ಸಂಸ್ಥೆಯಿಂದ ನೀಡಲಾಗುತ್ತದೆ.
  • ಗೋವಾ ಗೋಡಂಬಿ ಉತ್ಪಾದಕರ ಸಂಘಟನೆ, ಗೋವಾ ಸರ್ಕಾರ, ವಿಜ್ಞಾನ ಇಲಾಖೆ ಮತ್ತುತ್ಯಾಜ್ಯ ನಿರ್ವಹಣೆ ಸಂಸ್ಥೆ, ಭೌಗೋಳಿಕ ಸೂಚಕ ಸ್ಥಾನಮಾನವನ್ನು ಕಲ್ಪಿಸುವಂತೆ ಅರ್ಜಿಯನ್ನು ಸಲ್ಲಿಸಿತ್ತು.

ಹಿನ್ನೆಲೆ

ಲ್ಯಾಟಿನ್ ಅಮೆರಿಕದ ಈಶಾನ್ಯ ಬ್ರೆಜಿಲ್‌ಗೆ ಸ್ಥಳೀಯ ಬೆಳೆಯಾಗಿತ್ತು. ಈ ಬೆಳೆಯನ್ನು ಮರು ಅರಣ್ಯೀಕರಣಕ್ಕಾಗಿ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಪೋರ್ಚುಗೀಸರು 16ನೇ ಶತಮಾನದಲ್ಲಿ ಬಿತ್ತನೆ ಪ್ರಾರಂಭಿಸಿದರು. ಇದರ ರುಚಿ ಮತ್ತು ಪೌಷ್ಟಿಕಾಂಶತೆ ಬಗ್ಗೆ ಅರಿವು ಹೆಚ್ಚಾಯಿತು. ಮೊದಲ ಗೋಡಂಬಿ ಕಾರ್ಖಾನೆಯನ್ನು ಗೋವಾದಲ್ಲಿ 1926 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಗೋವಾದ ಗೋಡಂಬಿಯನ್ನು 1930 ರಿಂದ ಹೊರ ರಾಷ್ಟ್ರಗಳಿಗೆ ರಫ್ತುಮಾಡಲಾಯಿತು.