Published on: May 30, 2023

ಗೋ ಸಾಗಣೆಗೆ ಇ – ಪರವಾನಗಿ’

ಗೋ ಸಾಗಣೆಗೆ ಇ – ಪರವಾನಗಿ’

ಸುದ್ದಿಯಲ್ಲಿ ಏಕಿದೆ?  ಕರ್ನಾಟಕದಲ್ಲಿ ಜಾನುವಾರು ಸಾಗಣೆಯ ಪರವಾನಗಿ ಪಡೆಯುವ ವ್ಯವಸ್ಥೆಗೆ ತಾಂತ್ರಿಕ ಸ್ಪರ್ಶ ನೀಡಿರುವ ಪಶುಸಂಗೋಪನಾ ಇಲಾಖೆಯು, ‘ಇ–ಪರವಾನಗಿ’ಯನ್ನು ಕಡ್ಡಾಯಗೊಳಿಸಿದೆ.

ಮುಖ್ಯಾಂಶಗಳು

  • ವಾಹನದಲ್ಲಿ ಸಾಗಣೆಯಾಗುವ ಜಾನುವಾರುಗಳ ಖಚಿತತೆಗೆ ಇದು ಸಹಕಾರಿಯಾಗುತ್ತಿದೆ. ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2021’ಕ್ಕೆ ಅನುಗುಣವಾಗಿ ನೂತನ ವ್ಯವಸ್ಥೆ ರೂಪುಗೊಂಡಿದೆ.
  • ಹಸು, ಕರು, ಎತ್ತು, ಎಮ್ಮೆ ಹಾಗೂ ಕೋಣ ಸಾಗಣೆಗೆ ಪರವಾನಗಿಯನ್ನು ಕಡ್ಡಾಯಗೊಳಿಸಿ ಇಲಾಖೆಯು 2021ರ ಜನವರಿಯಲ್ಲಿ ನೀತಿ ರೂಪಿಸಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡ ಬಳಿಕ ಇದು ಕಟ್ಟುನಿಟ್ಟಾಗಿ ಜಾರಿಗೊಂಡಿತ್ತು.
  • ಅರ್ಜಿ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಿ ‘ಸಕಾಲ’ದ ವ್ಯಾಪ್ತಿಗೆ ತರಲಾಗಿದೆ. ಕ್ಯೂ ಆರ್ ಕೋಡ್ಹೊಂದಿದ ಇ–ಪರವಾನಗಿಯನ್ನು ಸಾಗಣೆ ಸಂದರ್ಭದಲ್ಲಿ ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತೋರಿಸಬಹುದು.

ಉದ್ದೇಶ

  • ಜಾನುವಾರುಗಳ ಮಾಲೀಕರು, ಖರೀದಿದಾರರು, ಸಾಗಣೆದಾರರಿಗೆ ಎದುರಾಗುತ್ತಿದ್ದ ತೊಂದರೆಯನ್ನು ನೀಗಿಸಲು ಈ ವ್ಯವಸ್ಥೆ ನೆರವಾಗಿದೆ. ಕೃಷಿ ಹಾಗೂ ಪಶುಸಂಗೋಪನೆಯ ಉದ್ದೇಶಕ್ಕೂ ಜಾನುವಾರು ಸಾಗಣೆಗೆ ಪರವಾನಗಿ ಕಡ್ಡಾಯಗೊಳಿಸಲಾಗಿತ್ತು. ಪರವಾನಗಿ ಪಡೆಯಲು ಇಲಾಖೆ, ಪಶು ಆಸ್ಪತ್ರೆಗಳಿಗೆ ಅಲೆಯಬೇಕಾಗಿತ್ತು. ಹೊಸ ವ್ಯವಸ್ಥೆಯಿಂದ ಇದು ತಪ್ಪಲಿದೆ. ಪರವಾನಗಿ ಅಗತ್ಯ ಇರುವವರು ಮನೆಯಿಂದಲೇ ಅರ್ಜಿ ಸಲ್ಲಿಸಬಹುದು. ಜಾನುವಾರುಗಳ ಕಳ್ಳಸಾಗಣೆ ತಡೆಯಲು ಈ ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ. ಅಲ್ಲದೆ, ಕೆಲವು ಕೋಮುಗಳ ನಡುವೆ ನಡೆಯುತ್ತಿದ್ದ ಕಲಹಕ್ಕೂ ಕಡಿವಾಣ ಬೀಳಲಿದೆ.