Published on: July 29, 2021

ಗ್ಯಾನಿಮಿಡ್‌ನಲ್ಲಿ ವಾಟರ್ ವೇಪರ್ ಅಂಶ

ಗ್ಯಾನಿಮಿಡ್‌ನಲ್ಲಿ ವಾಟರ್ ವೇಪರ್ ಅಂಶ

ಸುದ್ಧಿಯಲ್ಲಿ ಏಕಿದೆ ? ನಮ್ಮ ಸೌರಮಂಡಲದ ದೈತ್ಯ ಸದಸ್ಯ ಗುರು ಗ್ರಹದ ಉಪಗ್ರಹ ಗ್ಯಾನಿಮಿಡ್‌ನಲ್ಲಿ ವಾಟರ್ ವೇಪರ್(ನೀರಿನ ಆವಿ) ಅಂಶವನ್ನು ನಾಸಾದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

  • ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರದ ಸಹಾಯದಿಂದ ಗ್ಯಾನಿಮಿಡ್‌ನಲ್ಲಿ ವಾಟರ್ ವೇಪರ್ ಅಂಶವನ್ನು ಪತ್ತೆ ಮಾಡಲಾಗಿದೆ. ಗ್ಯಾನಿಮಿಡ್ ಉಪಗ್ರಹದ ಮಂಜುಗಡ್ಡೆಯು ಘನ ರೂಪದಿಂದ ಅನಿಲ ರೂಪಕ್ಕೆ ರೂಪಾಂತರ ಹೊಂದಿದಾಗ, ನೀರಿನ ಆವಿ ಸೃಷ್ಟಿಯಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
  • ಗ್ಯಾನಿಮಿಡ್‌ ಉಪಗ್ರಹದಲ್ಲಿ ಭೂಮಿಯ ಎಲ್ಲಾ ಸಾಗರಗಳಿಗಿಂತ ಹೆಚ್ಚಿನ ಪ್ರಮಾಣದ ನೀರು ಇದೆ ಎಂಬುದು ಈ ಹಿಂದಿನ ಸಂಶೋಧನೆಗಳಿಂದ ಸಾಂದರ್ಭಿಕವಾಗಿಯಾದರೂ ಸಾಬೀತಾಗಿದೆ. ಅಲ್ಲದೇ ಈ ಸಾಗರ ಗ್ಯಾನಿಮಿಡ್‌ ಉಪಗ್ರಹದ ಮೇಲ್ಮೈಯಿಂದ ಸುಮಾರು 160 ಕಿ.ಮೀ ಆಳದಲ್ಲಿ ಸುಪ್ತವಾಗಿ ಅಡಗಿದೆ. ಆದರೆ ಗ್ರಹದ ಅತ್ಯಂತ ಶೀತ ತಾಪಮಾನದ ಪರಿಣಾಮವಾಗಿ ಅಲ್ಲಿನ ಸಾಗರ ಸಂಪೂರ್ಣ ಘನ ರೂಪದಲ್ಲಿದೆ.
  • ಸ್ವಿಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ಕೆಟಿಎಚ್ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಲಾರೆನ್ಸ್ ರೋತ್ ನೇತೃತ್ವದ ತಂಡ, ಹಬಲ್ ದೂರದರ್ಶಕ ಯಂತ್ರದ ಸಹಾಯದಿಂದ ಗ್ಯಾನಿಮಿಡ್‌ನ ಪರಮಾಣು ಆಮ್ಲಜನಕದ ಪ್ರಮಾಣ ಅಳೆಯಲು ಪ್ರಯತ್ನಿಸಿದೆ. ಈ ವೇಳೆ ಉಪಗ್ರಹದ ಮೇಲ್ಮೈಯಲ್ಲಿ ವಾಟರ್ ವೇಪರ್ ಅಂಶ ಪತ್ತೆಯಾಗಿದೆ.
  • ಗ್ಯಾನಿಮಿಡ್‌ನ ತಾಪಮಾನ ದಿನವೀಡಿ ಬಲವಾಗಿ ಬದಲಾಗುತ್ತಲೇ ಇರುತ್ತದೆ. ಆದರೆ ಮಧ್ಯಾಹ್ನದ ವೇಳೆಗೆ ಹಿಮದ ಮೇಲ್ಮೈ ಪದರದಲ್ಲಿ ಸಣ್ಣ ಪ್ರಮಾಣದ ನೀರಿನ ಅಣುಗಳು ಬಿಡುಗಡೆಯಾಗುತ್ತವೆ