ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಲ್ಯಾಬ್, ಕ್ಲಿನಿಕ್ ಸೇವೆ ಆರಂಭ
ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಲ್ಯಾಬ್, ಕ್ಲಿನಿಕ್ ಸೇವೆ ಆರಂಭ
ಸುದ್ಧಿಯಲ್ಲಿಏಕಿದೆ?
ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್‍ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ – ಮೊಬೈಲ್ ಕ್ಲಿನಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.
ಉದ್ದೇಶ
· ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್‍ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ – ಮೊಬೈಲ್ ಕ್ಲಿನಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.
ಲ್ಯಾಬ್ ಬಿಲ್ಟ್ ಆನ್ ವೀಲ್ಸ್ – ಮೊಬೈಲ್ ಕ್ಲಿನಿಕ್
- ನಾಲ್ಕು ಮೊಬೈಲ್ ಲ್ಯಾಬ್‌ಗಳಲ್ಲಿ ಕ್ಲಿನಿಕ್, ಔಷಧ ಸಾಗಿಸಲು ರೆಫ್ರಿಜರೇಟರ್, ತುರ್ತು ಚಿಕಿತ್ಸೆ ವೇಳೆ ಆಮ್ಲಜನಕ, ಸಾಂಕ್ರಾಮಿಕ ರೋಗ ಪತ್ತೆ ಸೌಲಭ್ಯ, ಕನಿಷ್ಟ ಸರ್ಜರಿಗೆ ಪ್ರತ್ಯೇಕ ಹಾಸಿಗೆ ಹಾಗೂ ಯುಪಿಎಸ್’ನ್ನು ಅಳವಡಿಸಲಾಗಿದೆ.
-
ಈ ಬಾರಿಯ ಆಯವ್ಯಯದಲ್ಲಿ ಗಾಲಿಗಳ ಮೇಲೆ ಆಸ್ಪತ್ರೆಗೆ ಸರ್ಕಾರ ಅನುದಾನ ಮೀಸಲಿರಿಸಿದೆ. ಬಸ್ನಲ್ಲಿ ಪ್ರಯೋಗಾಲಯ ಹಾಗೂ ಆರೋಗ್ಯ ಸೇವಾ ಸೌಲಭ್ಯಗಳನ್ನು ನಾಲ್ಕು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುವುದು. ಪ್ರಯೋಗ ಯಶಸ್ವಿಯಾದರೆ, ಇನ್ನುಳಿದ ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕೆಂಬ ಚಿಂತನೆ ಇದೆ.