ಗ್ರ್ಯಾಮಿ ಪ್ರಶಸ್ತಿ 2024
ಗ್ರ್ಯಾಮಿ ಪ್ರಶಸ್ತಿ 2024
ಸುದ್ದಿಯಲ್ಲಿ ಏಕಿದೆ? ಅಮೆರಿಕದ ಲಾಸ್ ಏಂಜಲೀಸನಲ್ಲಿ ನಡೆದ 66 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ದಿಸ್ ಮೂಮೆಂಟ್’ ಆಲ್ಬಮ್ಗಾಗಿ ಗಾಯಕ ಶಂಕರ್ ಮಹದೇವನ್, ತಬಲ ವಾದಕ ಜಾಕೀರ್ ಹುಸೇನ್, ಗಿಟಾರಿಸ್ಟ್ ಜಾನ್ ಮೆಕ್ಲಾಲಿನ್, ಪಿಟೀಲು ವಾದಕ ಗಣೇಶ್ ರಾಜಗೋಪಾಲನ್, ತಾಳ ವಾದಕ ವಿ.ಸೆಲ್ವ ಗಣೇಶ್ ಅವರನ್ನೊಳಗೊಂಡ ಫ್ಯೂಷನ್ ಬ್ಯಾಂಡ್ ‘ಶಕ್ತಿ’, ‘Best Global Music Album’ ಪ್ರಶಸ್ತಿ ಪಡೆದಿದೆ.
ಮುಖ್ಯಾಂಶಗಳು
- ಇದೇ ಸಮಾರಂಭದಲ್ಲಿ ಭಾರತದ ಸುಪ್ರಸಿದ್ಧ ಕೊಳಲು ವಾದಕ ರಾಕೇಶ್ ಚೌರಾಸಿಯಾ, ಎರಡು ಪ್ರಶಸ್ತಿ ಗೆದ್ದಿದ್ದಾರೆ.
- ಟೇಲರ್ ಸ್ವಿಫ್ಟ್ ಅವರು “ಮಿಡ್ನೈಟ್ಸ್” ಆಲ್ಬಮಗಾಗಿ ವರ್ಷದ ಆಲ್ಬಮ್ ಪ್ರಶಸ್ತಿಯನ್ನು ಅನ್ನು ಪಡೆದುಕೊಂಡರು, ವರ್ಗದಲ್ಲಿ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದ ಮೊದಲ ವ್ಯಕ್ತಿಯಾಗಿದ್ದಾರೆ.
ಶಕ್ತಿ ಬ್ಯಾಂಡ್
ಶಕ್ತಿ – ಶಾಸ್ತ್ರೀಯ ಸಂಗೀತವನ್ನು ಪಾಶ್ಚಿಮಾತ್ಯ ಸಂಗೀತದೊಂದಿಗೆ ಸಂಯೋಜಿಸುವ ಒಂದು ಫ್ಯೂಷನ್ ಬ್ಯಾಂಡ್ ಆಗಿದ್ದು, 1973ರಲ್ಲಿ ಗಿಟಾರಿಸ್ಟ್ ಜಾನ್ ಮೆಕ್ಲಾಲಿನ್ ಇತರ ಸಂಗೀತಗಾರರ ಸಹಯೋಗದೊಂದಿಗೆ ಸ್ಥಾಪಿಸಿದ್ದರು. 1978ರಲ್ಲಿ ಬ್ಯಾಂಡ್ನಿಂದ ಸ್ಥಾಪಕ ಸದಸ್ಯರು ಬೇರ್ಪಟ್ಟಿದ್ದರು.
ಗ್ರ್ಯಾಮಿ ಪ್ರಶಸ್ತಿ
ಗ್ರ್ಯಾಮಿ ಪ್ರಶಸ್ತಿಯು ಸಂಗೀತ ಉದ್ಯಮದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗೌರವಿಸಲು ರೆಕಾರ್ಡಿಂಗ್ ಅಕಾಡೆಮಿಯು ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
ಸ್ಥಾಪನೆ:1958 ರಲ್ಲಿ ಸ್ಥಾಪಿಸಲಾಯಿತು.
ನಿಮಗಿದು ತಿಳಿದಿರಲಿ
- ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಸಿತಾರ್ ಕಲಾವಿದ ರವಿಶಂಕರ್, ಅವರು 1967 ರಲ್ಲಿ ಅತ್ಯುತ್ತಮ ಚೇಂಬರ್ ಸಂಗೀತ ಪ್ರದರ್ಶನ ಮತ್ತು ” ವೆಸ್ಟ್ ಮೀಟ್ಸ್ ಈಸ್ಟ್ ವರ್ಷದ ಆಲ್ಬಮ್ ವರ್ಗದಲ್ಲಿ ಪ್ರಶಸ್ತಿಯನ್ನು ಪಡೆದಿದ್ದರು.
- ಗ್ರ್ಯಾಮಿ ಪ್ರಶಸ್ತಿ 2023: ಭಾರತದ ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕಿ ಕೇಜ್ ಅವರು ‘ಡಿವೈನ್ ಟೈಡ್ಸ್’ ಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು, ಇದು ಅವರ ಮೂರನೆಯ ಗ್ರ್ಯಾಮಿ ಪ್ರಶಸ್ತಿಯಾಗಿದೆ.