Published on: June 7, 2024

ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ

ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ

ಸುದ್ದಿಯಲ್ಲಿ ಏಕಿದೆ? ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ICAR) ಅಂಗಸಂಸ್ಥೆಯಾದ ಮೀನು ತಳಿ ಆನುವಂಶಿಕ ಸಂಪನ್ಮೂಲಗಳ ಸಂಶೋಧನಾ ಸಂಸ್ಥೆ (NBFGR) ಅರುಣಾಚಲ ಪ್ರದೇಶ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯ ಉಪನದಿ ಟಿಸ್ಸಾ ನದಿಯ ಜಲಾನಯನ ಪ್ರದೇಶದಲ್ಲಿರುವ ‘ತುಂಗ್’ ಹೆಸರಿನ ಒಳನಾಡು ಪ್ರವಾಹದ ಝರಿಯಲ್ಲಿ ಹೊಸ ಪ್ರಜಾತಿಯ ಕ್ಯಾಟ್ಫಿಶ್ಗಳನ್ನು ಪತ್ತೆಮಾಡಿದೆ.

ಮುಖ್ಯಾಂಶಗಳು

  • ICAR–NBFGR ಸ್ಥಾಪಕ ನಿರ್ದೇಶಕ ಡಾ.ಪುಣ್ಯಬರತ ದಾಸ್ ಅವರು ಜಲಚರಗಳ ಸಂರಕ್ಷಣೆ ಮತ್ತು ವರ್ಧನೆಯಲ್ಲಿ ನೀಡಿದ ಕೊಡುಗೆಯ ಗೌರವಾರ್ಥ ಹೊಸದಾಗಿ ಗುರುತಿಸಲಾದ ಈ ಕ್ಯಾಟ್ ಫಿಶ್ ಗೆ ‘ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ’ (Glyptothorax punyabratai) ಎಂದು ಹೆಸರಿಸಲಾಗಿದೆ.
  • ಹೊಸದಾಗಿ ಪತ್ತೆಯಾದ ಕ್ಯಾಟ್ ಫಿಶ್ ನ ಹೋಲೋ ಟೈಪ್ (ಪತ್ತೆಯಾದ ಮೂಲಮಾದರಿ) ಮತ್ತು ಪ್ಯಾರಾಟೈಪ್ (ಸಮಾನ ಗುಣಲಕ್ಷಣಗಳನ್ನು ಹೊಂದಿರುವ ಹೆಚ್ಚುವರಿ ಮಾದರಿ) ಗಳನ್ನು ಲಕ್ನೋದಲ್ಲಿನ ನ್ಯಾಷನಲ್ ಫಿಶ ಮ್ಯೂಸಿಯಂ –ಕಮ್–ರೆಪೊಸಿಟರಿಯಲ್ಲಿ ಸಂರಕ್ಷಿಸಿ ಇರಿಸಲಾಗಿದೆ.

ವೈಶಿಷ್ಟ್ಯಗಳು

  • ‘ಗ್ಲಿಪ್ಟೊಥೊರಾಕ್ಸ್ ಕ್ಯಾಟ್ಫಿಶ್’ ಕುಲದ ಭಾಗವಾಗಿದೆ.
  • ಇದು ವೇಗವಾಗಿ ಹರಿಯುವ ನೀರಿನಲ್ಲಿರುವ ಬಂಡೆಗಳ ಮೇಲೆ ಅಂಟಿಕೊಳ್ಳಲು ಸಾಧ್ಯವಾಗುವಂಥ ಜೆಲ್ (ಲೋಳೆ) ಲೇಪಿತ ದೇಹರಚನೆಯನ್ನು ಹೊಂದಿದೆ.
  • ಈ ಮೀನು ಸಾಮಾನ್ಯವಾಗಿ 63 ಸೆಂ.ಮೀ. ಉದ್ದದವರೆಗೆ ಬೆಳೆಯುತ್ತದೆ.
  • ಸಿಹಿನೀರಿನ ಮೂಲದಲ್ಲಿ ವಾಸಿಸುವ ಮೀನು ಪ್ರಭೇದವಾಗಿದೆ.
  • ಈ ತಳಿಯ ಉಪಸ್ಥಿತಿ ಆಯಾ ಜೀವಪರಿಸರ ವ್ಯವಸ್ಥೆಯಲ್ಲಿನ ಆಹಾರ ಸರಪಳಿಯಲ್ಲಿ ಪೋಷಕಾಂಶಗಳ ಪೂರೈಕೆ ಮತ್ತು ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ.
  • ನದಿಪಾತ್ರದಲ್ಲಿ ಲಭ್ಯವಿರುವ ಜಲಸಸ್ಯಗಳನ್ನು, ಚಿಕ್ಕಪುಟ್ಟ ಮೀನುಗಳು ಹಾಗೂ ಜಲಚರಗಳನ್ನು ಸೇವಿಸುತ್ತದೆ.
  • ಸಾಮಾನ್ಯವಾಗಿ ಮಾನಸೂನ್ ಮಳೆ ಸಂದರ್ಭದಲ್ಲಿ ಈ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುತ್ತವೆ.
  • ಎಲ್ಲ ಕ್ಯಾಟ್ಫಿಶ್ಗಳ ಬಾಯಿಯ ಸುತ್ತಲೂ ಬೆಕ್ಕಿನ ಮೀಸೆಯನ್ನು ಹೋಲುವ ಉದ್ದನೆಯ ಮೀಸೆಗಳು (ಬಾರ್ಬೆಲ್ಗಳು ಅಥವಾ ಫೀಲರ್ಗಳು) ಇರುವುದರಿಂದಲೇ ಇವುಗಳಿಗೆ ಬೆಕ್ಕುಮೀನುಗಳು ಅಥವಾ ಕ್ಯಾಟ್ಫಿಶ್ ಎಂದು ಹೆಸರಿಸಲಾಗಿದೆ.

 ICAR–NBFGR

  • ಸಂಸ್ಥೆಯನ್ನು 1983ರಲ್ಲಿ ಅಲಹಾಬಾದ್ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಆಶ್ರಯದಲ್ಲಿ ಸ್ಥಾಪಿಸಲಾಗಿದೆ.
  • ಭಾರತದಲ್ಲಿನ ಮೀನು ತಳಿಗಳ ಆನುವಂಶಿಕ ಸಂಪನ್ಮೂಲಗಳ ಮೌಲ್ಯಮಾಪನ, ಸಂರಕ್ಷಣೆ, ನಿರ್ವಹಣೆ ಮತ್ತು ಅವುಗಳ ಜೀವವೈವಿಧ್ಯದ ಅಧ್ಯಯನ ನಡೆಸುವುದು ಈ ಸಂಸ್ಥೆಯ ಜವಾಬ್ದಾರಿ ಆಗಿದೆ.