Published on: February 16, 2023
ಚಾಟ್ ಜಿಪಿಟಿ
ಚಾಟ್ ಜಿಪಿಟಿ
ಸುದ್ದಿಯಲ್ಲಿ ಏಕಿದೆ? 10 ಹಾಗೂ 12 ನೇ ತರಗತಿ ಪರೀಕ್ಷೆಗಳಲ್ಲಿ ಕೃತಕ ಬುದ್ದಿ ಮತ್ತೆ ಆಧಾರಿತ ಚಾಟ್ ಜಿಪಿಟಿ ತಂತ್ರಾಂಶದ ಬಳಕೆಯನ್ನು ನಿಷೇಧಿಸಲಾಗಿದೆ, ಎಂದು ರಾಷ್ಟೀಯ ಪ್ರೌಢಶಾಲಾ ಶಿಕ್ಷಣ ಮಂಡಳಿ ಹೇಳಿದೆ.
ಏನಿದು ಚಾಟ್ ಜಿಪಿಟಿ?
- ಚಾಟ್ಜಿಪಿಟಿ ಎಂಬುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುವಂತಹ ಒಂದು ತಂತ್ರಜ್ಞಾನವಾಗಿದೆ.
- ಚಾಟ್ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ ಓಪನ್ಎಐ ಅಭಿವೃದ್ಧಿಪಡಿಸಿದ ಎಐ ಬೆಂಬಲಿತ ಚಾಟ್‌ಬಾಟ್ ಆಗಿದೆ. ಈ ಚಾಟ್‌ಬಾಟ್ ಬಳಕೆದಾರರು ಕೇಳುವಂತಹ ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ಅಥವಾ ಉತ್ತರಗಳನ್ನು ನೀಡಲು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.
- ಚಾಟ್ಜಿಪಿಟಿ ಎಐ ಇಂಟರ್ನೆಟ್ ಟೆಕ್ಸ್ಟ್ ಡೇಟಾಸೆಟ್‌ನಲ್ಲಿ ತರಬೇತಿ ಪಡೆದಿದ್ದು, ಮನುಷ್ಯರ ತರಹ ಉತ್ತರಗಳನ್ನು ತನ್ನ ಬಳಕೆದಾರರಿಗೆ ನೀಡುವ ತಂತ್ರಜ್ಞಾನವಾಗಿದೆ. ಭಾಷಾ ಅನುವಾದ, ಟೆಕ್ಸ್ಟ್ ವಿವರಣೆಗಳಿಗಾಗಿ ವಿವಿಧ ನೈಸರ್ಗಿಕ ಭಾಷಾ ಸಂಸ್ಕರಣಾ ಕಾರ್ಯಗಳಿಗೆ ಚಾಟ್ಜಿಪಿಟಿ ಅನ್ನು ಬಳಸಬಹುದು. ಇದರೊಂದಿಗೆ ಪ್ರಶ್ನೆಗೆ ಉತ್ತರಿಸುವುದಕ್ಕೆ ಈ ಚಾಟ್‌ಬಾಟ್ ಸಹಕಾರಿಯಾಗುತ್ತದೆ.
- ಇದನ್ನು ಹೊರತುಪಡಿಸಿ, ಮಾರ್ಕೆಟಿಂಗ್, ಕಾಪಿರೈಟಿಂಗ್, ಇಲ್ಲಸ್ಟ್ರೇಶನ್ ಮತ್ತು ವಿನ್ಯಾಸ, 3ಡಿ ಮಾಡೆಲಿಂಗ್, ಗ್ರಾಹಕಸೇವೆ, ಸಾಫ್ಟ್ವೇರ್ ಕೋಡಿಂಗ್, ವೀಡಿಯೋ ಎಡಿಟಿಂಗ್, ಸಿನಿಮಾ ನಿರ್ಮಾಣ, ಗೇಮಿಂಗ್, ಕಾನೂನು ವಿಷಯಗಳು, ವೈಜ್ಞಾನಿಕ ಸಂಶೋಧನೆ ಸೇರಿದಂತೆ ಬಹುತೇಕ ಎಲ್ಲ ವಲಯಗಳಲ್ಲೂ ಜನರೇಟಿವ್ ಎಐ ಬಳಕೆಯಾಗಲಿದೆ.
ಮಾನವರಂತೆಯೇ ಪ್ರತಿಕ್ರಿಯಿಸುವ ಚಾಟ್ಜಿಪಿಟಿ
- ಇದು ಮಾನವ ರೀತಿಯ ಉತ್ತರಗಳನ್ನು ನೀಡುವಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ಈ ಚಾಟ್‌ಬಾಟ್ ಮೂಲಕ ದೀರ್ಘವಾದ ಮಾಹಿತಿ ಹಾಗೂ ಲೇಖನ ರೀತಿಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಬೇರೆ ಭಾಷೆಗಳ ಪಠ್ಯವನ್ನು ಸುಲಭವಾಗಿ ಭಾಷಾಂತರಿಸಲು, ಕಥೆ, ಕವಿತೆಗಳನ್ನು ರಚಿಸಲು ChatGPT AI ಚಾಟ್‌ಬಾಟ್ ಅನ್ನು ಬಳಕೆ ಮಾಡಬಹುದಾಗಿದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ?
- ವ್ಯಕ್ತಿಯೊಬ್ಬನಿಗೆ ಒಂದು ವಿಷಯದ ವಿವರ ಪಡೆಯಲು ಆತ ಸಾಮಾನ್ಯವಾಗಿ ಗೂಗಲ್ನಲ್ಲಿ ಹುಡುಕಾಟ ನಡೆಸುತ್ತಾನೆ. ಅವನಿಗೆ ವಿವಿಧ ವೆಬ್ಸೈಟ್ಗಳಲ್ಲಿ ಮಾಡಿದ ಪಟ್ಟಿಗಳು ಕಾಣಿಸುತ್ತವೆ. ಅವೆಲ್ಲವನ್ನೂ ಓದಿ ತನಗೆ ಹೊಂದುವುದನ್ನು ಹುಡುಕುವ ಕೆಲಸ ಅವನದ್ದೇ . ಆದರೆ, ಇದೇ ಪ್ರಶ್ನೆಯನ್ನು ಆತ ಚಾಟ್ ಜಿಪಿಟಿಗೆ ಕೇಳಿದರೆ, ಅದು ಎಲ್ಲ ವೆಬ್ಸೈಟ್ಗಳನ್ನೂ ಹುಡುಕಿ ತಂದು ಒಂದು ಪಟ್ಟಿಯನ್ನು ಅವನಿಗೆ ನೀಡುತ್ತದೆ. ಆಗ ಅವನಿಗೆ ಒಂದೇ ಕಡೆ ಎಲ್ಲ ಮಾಹಿತಿಯೂ ಸಿಕ್ಕಂತಾಯಿತು. ಬೇರೆ ಬೇರೆ ವೆಬ್ಸೈಟ್ಗಳನ್ನು ಕ್ಲಿಕ್ ಮಾಡಿ, ಅವುಗಳ ನಿಖರತೆಯನ್ನು ಪರಿಶೀಲಿಸಿಕೊಂಡು, ಅದರಲ್ಲಿರುವ ಮಾಹಿತಿಯನ್ನು ಓದಿ ತನಗೆ ಬೇಕಾದ್ದನ್ನು ಮಾತ್ರ ಸೋಸಿಕೊಳ್ಳುವ ತೊಂದರೆ ಇಲ್ಲ. ಇಲ್ಲಿ ಎಲ್ಲ ಸಿದ್ಧ ಮಾಹಿತಿ ಅವನಿಗೆ ಲಭ್ಯವಾಗುತ್ತದೆ.
ಮುನ್ನೆಚ್ಚರಿಕೆ
- ಜನರೇಟಿವ್ ಎಐನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇದನ್ನು ಬಳಸಿ ಅಸಲಿಯಂತೆಯೇ ನಕಲಿಯನ್ನು ಸೃಷ್ಟಿಸುವುದೂ ತುಂಬ ಸುಲಭ ಚಾಟ್ಜಿಪಿಟಿ ಬಳಸಿಕೊಂಡು ಅಸಲಿಯಂತೆಯೇ ಕಾಣುವ ನಕಲಿ ವೆಬ್ಸೈಟ್ಗಳನ್ನು ಹುಟ್ಟುಹಾಕುವುದು ಸುಲಭ. ನಕಲಿಯನ್ನು ಪತ್ತೆ ಹಚ್ಚುವುದು ಮೊದಲಿಗಿಂತ ಕಷ್ಟಕರವಾಗಬಹುದು. ಅದೇ ರೀತಿ, ಹಲವು ಉದ್ಯಮಗಳು ಈ ಚಾಟ್ಜಿಪಿಟಿ ಇಂದ ಬುಡಮೇಲಾಗಬಹುದು, ಉದ್ಯಮಗಳು ವಹಿವಾಟು ನಡೆಸುವ ಸ್ವರೂಪ ಬದಲಾಗಬಹುದು. ಪುನರಾವರ್ತಿತ ಕೆಲಸಗಳನ್ನು ಮಾಡುವವರಿಗೆ ಕೆಲಸ ಕಡಿಮೆಯಾಗಬಹುದು.