Published on: January 19, 2022

ಚೀನಾ ಜನಸಂಖ್ಯೆ

ಚೀನಾ ಜನಸಂಖ್ಯೆ

ಸುದ್ಧಿಯಲ್ಲಿ ಏಕಿದೆ ?  ಕಳೆದ ವರ್ಷ ಚೀನಾದ ಜನಸಂಖ್ಯೆ 5 ಲಕ್ಷಕ್ಕೂ ಕಡಿಮೆ ಏರಿಕೆ ಕಂಡಿದ್ದು, ಇದರೊಂದಿಗೆ ಸತತ 5 ವರ್ಷಗಳಿಂದ ದೇಶದ ಜನ ಪ್ರಮಾಣ ಕುಸಿತಕ್ಕೊಳಗಾದಂತಾಗಿದೆ.

ಚೀನಾದಲ್ಲಿ ಜನನ ಪ್ರಮಾಣ

  • 2021 ಅಂತ್ಯದ ವೇಳೆಗೆ ಚೀನಾ ಜನಸಂಖ್ಯೆ 1.4126 ಶತಕೋಟಿ ದಾಖಲಾಗಿತ್ತು. ಅದಕ್ಕೂ ಹಿಂದಿನ ವರ್ಷ 1.4120 ಶತಕೋಟಿ ಜನಸಂಖ್ಯೆ ದಾಖಲಾಗಿತ್ತು.

ಮಕ್ಕಳ ನೀತಿಯ ಬದಲಾವಣೆ

  • 2016 ರಲ್ಲಿ, ಚೀನಾ ರಾಷ್ಟ್ರದ “ಒಂದು ಮಗುವಿನ ನೀತಿ” ಯನ್ನು ಸಡಿಲಗೊಳಿಸಿತು. ಇದು ದಂಪತಿಗಳಿಗೆ ಎರಡು ಮಕ್ಕಳಿಗೆ ಅವಕಾಶ ನೀಡಿತು. ವಿಶ್ವಾದ್ಯಂತ ಕಟ್ಟುನಿಟ್ಟಾದ ಕುಟುಂಬ ಯೋಜನಾ ನಿಯಮಗಳಲ್ಲಿ ಒಂದನ್ನು ಸಡಿಲಿಸಿದ ನಂತರವೂ, ಇದು ಮಗುವಿನ ಉತ್ಕರ್ಷವನ್ನು ತರಲು ವಿಫಲವಾಗಿದೆ. 2021 ರಲ್ಲಿ, ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಚೀನಾ ನೀತಿಯನ್ನು ವಿಸ್ತರಿಸಿತು.
  • ಇದೀಗ ಬೀಜಿಂಗ್‌, ಸಿಚುವಾನ್‌, ಜಿಯಾಂಗ್‌ಕ್ಸಿ ಮೊದಲಾದ ಪ್ರಾಂತ್ಯಗಳು ಮೂರು ಮಕ್ಕಳನ್ನು ಹೆರುವ ನಿಟ್ಟಿನಲ್ಲಿ ದಂಪತಿಗೆ ಉತ್ತೇಜನ ನೀಡುತ್ತಿದ್ದು, ಮಕ್ಕಳ ಪಾಲನೆಗಾಗಿ ಪೋಷಕರಿಗೆ ರಜೆ, ಮದುವೆ ರಜೆ ಬಾಣಂತನ ರಜೆಯಂತಹ ಕೊಡುಗೆ ನೀಡುತ್ತಿವೆ.

ಆರ್ಥಿಕತೆಗೆ ಹೊರೆ:

  • ಜನನ ಪ್ರಮಾಣ ಕಡಿಮೆಯಾದಂತೆ ಆರ್ಥಿಕತೆಗೆ ಹೊರೆ ಬೀಳುತ್ತದೆ. ದುಡಿಯುವ ವರ್ಗ ಮತ್ತು ಅವಲಂಬಿತರ ವ್ಯಕ್ತಿಗಳ ನಡುವಿನ ಅನುಮಾತದಲ್ಲಿ ಹೆಚ್ಚಳವಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಉಂಟಾಗುತ್ತದೆ. ದೇಶದಲ್ಲಿ ಸದ್ಯ 60 ವರ್ಷ ಮೇಲ್ಪಟ್ಟವರ ಸಂಖ್ಯೆ 26.4 ಕೋಟಿಗೆ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 18.7ರಷ್ಟು ಅಧಿಕವಾಗಿದೆ.