Published on: July 1, 2024
ಚುಟುಕು ಸಮಾಚಾರ :1 ಜುಲೈ 2024
ಚುಟುಕು ಸಮಾಚಾರ :1 ಜುಲೈ 2024
- ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದು 7 ವರ್ಷಗಳಾದವು. ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ವ್ಯಾಪಾರ ಸ್ನೇಹಿಯಾಗಿಸಲು 2017ರ ಜುಲೈ 1ರಂದು ದೇಶದಾದ್ಯಂತ ಏಕಕಾಲಕ್ಕೆ ಜಿಎಸ್ಟಿ ಜಾರಿಗೊಳಿಸಲಾಯಿತು. ಇದರ ಜಾರಿಗೂ ಮೊದಲು ದೇಶದಲ್ಲಿ 17ಕ್ಕಿಂತಲೂ ಹೆಚ್ಚು ವಿವಿಧ ಬಗೆಯ ಪರೋಕ್ಷ ತೆರಿಗೆ ಮತ್ತು ಸುಂಕಗಳಿದ್ದವು.
- ಬಿಎಂಟಿಸಿ ನೌಕರರು ನಿವೃತ್ತರಾದಾಗ ಇಪಿಎಫ್, ಪಿಂಚಣಿಗಾಗಿ ಅಲೆದಾಟ ನಡೆಸುವುದನ್ನು ‘ಪ್ರಯಾಸ್’ ಯೋಜನೆ ತಪ್ಪಿಸಿದೆ. ನಿವೃತ್ತರಾದ ಒಂದೇ ತಿಂಗಳಲ್ಲಿ ಈ ಸೌಲಭ್ಯಗಳು ನೌಕರರ ಕೈ ಸೇರುತ್ತಿವೆ. ಬಿಎಂಟಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಪ್ರಯಾಸ್ ಉಪಕ್ರಮದ ಮೂಲಕ ನೌಕರರ ಪಿಂಚಣಿ ಯೋಜನೆ, 1995 ರ ಅಡಿಯಲ್ಲಿ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಪಾವತಿ ಆದೇಶಗಳನ್ನು ನೀಡುತ್ತದೆ. ನಿವೃತ್ತಿ / ನಿವೃತ್ತಿಯ ದಿನದಂದು ಪಿಂಚಣಿ ಪಾವತಿ ಆದೇಶವನ್ನು ವಿತರಿಸಲು ಪ್ರಯಾಸ್ ಇಪಿಎಫ್ಒನ ಉಪಕ್ರಮವಾಗಿದೆ. 2020ರಲ್ಲಿ ಈ ಯೋಜನೆಯನ್ನು ಜಾರಿಮಾಡಲಾಗಿದೆ.
ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ: ಭಾರತದ 5 ಸಾವಿರ ವರ್ಷಗಳ ಇತಿಹಾಸವನ್ನು ಸಾರುವ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯವನ್ನು 2025ರ ಒಳಗೆ ನಿರ್ಮಿಸಲಾಗುವುದು. ಈ ಬಗ್ಗೆ ಭಾರತ ಹಾಗೂ ಫ್ರಾನ್ಸ್ ನಡುವೆ ಒಪ್ಪಂದ ಏರ್ಪಟ್ಟಿದೆ’ ಎಂದು ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಘೋಷಿಸಿದ್ದಾರೆ. ಫ್ರಾನ್ಸ್ನಲ್ಲಿರುವ ಲೂವರ್ ವಸ್ತು ಸಂಗ್ರಹಾಲಯ(ಸ್ಥಾಪನೆ: 10 ಆಗಸ್ಟ್ 1793)ವು ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯವಾಗಿದೆ. ಇದಕ್ಕೂ ಎರಡು ಪಟ್ಟು ವಿಸ್ತಾರವಾದುದ್ದನ್ನು ಭಾರತದಲ್ಲಿ ನಿರ್ಮಿಸಲಾಗುವುದು. ದೆಹಲಿಯ ರಯಸೀನಾ ಹಿಲ್ಸ್ನಲ್ಲಿರುವ ಉತ್ತರ ಹಾಗೂ ದಕ್ಷಿಣ ಬ್ಲಾಕ್ಗಳನ್ನು ವಸ್ತುಸಂಗ್ರಹಾಲಯವನ್ನಾಗಿ ನಿರ್ಮಿಸಲಾಗುವುದು. ಭಾರತ ಅತಿ ಹೆಚ್ಚು ವಿಶ್ವ ಪಾರಂಪರಿಕ ಸ್ಥಳಗಳಿರುವ ಮೂರನೇ ದೇಶವಾಗಿದೆ
- ದಕ್ಷಿಣ ಚೀನಾ ಸಮುದ್ರ ಮತ್ತು ಉತ್ತರ ಪೆಸಿಫಿಕ್ ಸಾಗರದಲ್ಲಿ ರಿಮ್ ಆಫ್ ದಿ ಪೆಸಿಫಿಕ್ (RIMPAC) ವ್ಯಾಯಾಮದಲ್ಲಿ ಪಾಲ್ಗೊಳ್ಳಲು ನಿಯೋಜಿಸಲಾದ ಭಾರತೀಯ ಬಹು-ಪಾತ್ರದ ಸ್ಟೆಲ್ತ್ ಫ್ರಿಗೇಟ್ INS ಶಿವಾಲಿಕ್, ಹವಾಯಿಯ ಪರ್ಲ್ ಹಾರ್ಬರ್ ಅನ್ನು ತಲುಪಿದೆ. ಇದು ಹವಾಯಿಯಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಅಂತರಾಷ್ಟ್ರೀಯ ಸಾಗರ ವ್ಯಾಯಾಮವಾಗಿದೆ. ಥೀಮ್; ಪಾರ್ಟನರ್ಸ್: ಇಂಟಿಗ್ರೇಟೆಡ್ ಮತ್ತು ಪ್ರಿಪೇರ್ಡ್(ಸಂಯೋಜಿತ ಮತ್ತು ಸಿದ್ದಗೊಂಡ ಪಾಲುದಾರರು). US ನೌಕಾಪಡೆ ನೇತೃತ್ವವನ್ನು ವಹಿಸುತ್ತಿದೆ. ಪ್ರಸ್ತುತ ಆವೃತ್ತಿಯಲ್ಲಿ ಸುಮಾರು 29 ದೇಶಗಳು ಭಾಗವಹಿಸುತ್ತಿವೆ.
- ಕಿಂಗ್ಸ್ಟನ್ ಓವಲ್, ಬ್ರಿಡ್ಜ್ಸ್ಟೋನ್ ವೆಸ್ಟ್ ಇಂಡೀಸ್ನ ಪ್ರಸಿದ್ಧ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಭಾರತ(176 ರನ್) ವು 7 ರನ್ನಗಳಿಂದ ಜಯ ಸಾಧಿಸಿದೆ. ಆ ಮೂಲಕ ಇದು ಭಾರತದ ಎರಡನೇ ಪ್ರಶಸ್ತಿಯಾಗಿದೆ. ಭಾರತ ಯಾವುದೇ ಪಂದ್ಯವನ್ನು ಸೋಲದೆ ಪಂದ್ಯಾವಳಿಯನ್ನು ಗೆದ್ದ ಮೊದಲ ದೇಶವಾಗಿದೆ.