Published on: January 10, 2023
ಚುಟುಕು ಸಮಾಚಾರ – 10 ಜನವರಿ 2023
ಚುಟುಕು ಸಮಾಚಾರ – 10 ಜನವರಿ 2023
- ಅಪರಾಧದ ದೃಶ್ಯಗಳಿಂದ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ವಿಧಿವಿಜ್ಞಾನದ ಕೋರ್ಸ್ಗಳನ್ನು ನೀಡಲು ರಾಜ್ಯ ಸರ್ಕಾರವು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ.
- ರಾಷ್ಟ್ರೀಯ ಹಸಿರು ಜಲಜನಕ (ಹೈಡ್ರೋ ಜನ್) ಮಿಷನ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್ಆರ್ ಇ) ಆಯಾ ಘಟಕಗಳ ಅನುಷ್ಠಾನಕ್ಕಾಗಿ ಯೋಜನೆಯ ಮಾರ್ಗಸೂಚಿಗಳನ್ನು ರೂಪಿಸುತ್ತದೆ.
- ಇತಿಹಾಸ ಪ್ರಸಿದ್ಧ ಉತ್ತರಾಖಂಡ್ನ ಜೋಶಿಮಠ ಅಳವಿನಂಚಿಗೆ ತಲುಪುತ್ತಿದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಕೋರ್ಟ್ ನಿರಾಕರಿಸಿದೆ. ಜೋಶಿಮಠವನ್ನು ಭೂಕುಸಿತ ವಲಯ ಎಂದು ಘೋಷಿಸಲಾಗಿದ್ದು ಕುಸಿಯುತ್ತಿರುವ ಪಟ್ಟಣದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
- ಈ ಬಾರಿಯ ಆಸ್ಕರ್ ಪ್ರಶಸ್ತಿಯ ಉತ್ತಮ ಚಿತ್ರ ಮತ್ತು ಉತ್ತಮ ನಟ ಸ್ಪರ್ಧಾ ಪಟ್ಟಿಯ ಮುಖ್ಯ ವಿಭಾಗದಲ್ಲಿ ಕಾಂತಾರ ಪ್ರವೇಶ ಪಡೆದಿದೆ. ಇತರ 301 ಚಿತ್ರಗಳ ಜೊತೆ ಕಾಂತಾರ ಮುಂದಿನ ಹಂತದಲ್ಲಿ ಸೆಣೆಸಲಿದೆ.
- ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಸರಾಂತ ಕವಿ ಮತ್ತು ಪ್ರೊಫೆಸರ್ ರೆಹಮಾನ್ ರಹಿ ನಿಧನರಾದರು. ಮೇ 6, 1925ರಲ್ಲಿ ಜನಿಸಿದ ರಹಿ ಹಲವು ಕವಿತೆಗಳನ್ನು ಬರೆದಿದ್ದಾರೆ. ಇತರ ಭಾಷೆಗಳ ಹಲವು ಖ್ಯಾತ ಕವಿಗಳ ಕೃತಿಗಳನ್ನು ಕಾಶ್ಮೀರಿಗೆ ಭಾಷೆಗೆ ಅನುವಾದ ಮಾಡಿದ್ದಾರೆ. ಕವನಗಳ ಸಂಕಲನ ನವ್ರೋಜ್ -ಐ-ಸಬಾಕ್ಕೆ 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ರಹಿ, 2007ರಲ್ಲಿ ದೇಶದ ಅತ್ಯುನ್ನತ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅವರ ಸಾಹಿತ್ಯದ ಕೆಲಸಕ್ಕಾಗಿ 2000ದಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.
- ಗುಜರಾತ್ನ ಅಹಮದಾಬಾದ್ನಲ್ಲಿ ಎರಡು ವರ್ಷಗಳ ಬಳಿಕ 32 ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಿದೆ. ಈ ಉತ್ಸವ ಜನವರಿ 14ರವರೆಗೆ ನಡೆಯಲಿದೆ. “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಜಿ-20 ಥೀಮ್ ಆಧಾರಿತವಾಗಿ 68 ರಾಷ್ಟ್ರಗಳ ಸುಮಾರು 125 ಗಾಳಿಪಟ ಹಾರಾಟಗಾರರು ಈ ಉತ್ಸವದ್ಲಿ ಪಾಲ್ಗೊಳ್ಳಲಿದ್ದಾರೆ.
- ಅಮೆರಿಕದಲ್ಲಿ ಶೇ. 40.5 ರಷ್ಟು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ COVID-19 ಹೊಸ ತಳಿ ಎಕ್ಸ್ಬಿಬಿ 1.5 ವೈರಸ್ ಉತ್ತರಾಖಂಡದಲ್ಲೂ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಎಕ್ಸ್ಬಿಬಿ 1.5 ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಗುಜರಾತ್ನಲ್ಲಿ ಮೂರು, ಕರ್ನಾಟಕ, ತೆಲಂಗಾಣ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಒಕ್ಕೂಟ(INSACOG) ತಿಳಿಸಿದೆ. ಎಕ್ಸ್ಬಿಬಿ 1.5 ತಳಿಯು ಓಮಿಕ್ರಾನ್ ನ ಎಕ್ಸ್ಬಿಬಿ ರೂಪಾಂತರದ ಸಂಬಂಧಿಯಾಗಿದ್ದು, ಒಮಿಕ್ರಾನ್ ನ ಸಬ್ವೇರಿಯೆಂಟ್ ಎಕ್ಸ್ಬಿಬಿ 1.5 ಪ್ರಕರಣವು ಡಿಸೆಂಬರ್ 31 ರಂದು ಗುಜರಾತ್ನಲ್ಲಿ ಮೊದಲ ಬಾರಿಗೆ ವರದಿಯಾಗಿತ್ತು.