Published on: July 13, 2024
ಚುಟುಕು ಸಮಾಚಾರ :12 ಜುಲೈ 2024
ಚುಟುಕು ಸಮಾಚಾರ :12 ಜುಲೈ 2024
- ಯುನೈಟೆಡ್ ಸ್ಟೇಟ್ಸ್ನ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದ (ನಾಸಾ) ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆ ಪ್ರಯಾಣಿಸಲು Axiom -4 ಮಿಷನ್ಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ತನ್ನ ನಾಲ್ಕು ತರಬೇತಿ ಪಡೆದ ಗಗನ್ ಯಾನ್ ಗಗನಯಾತ್ರಿಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಿದೆ. ಆಯ್ಕೆ ಮಾಡಲಾದ ಗಗನಯಾತ್ರಿಗಳಲ್ಲಿ ಒಬ್ಬರು ಮಾತ್ರ “ಅಕ್ಟೋಬರ್ 2024 ಕ್ಕಿಂತ ಮುಂಚಿತವಾಗಿ” ನಡೆಯಲಿರುವ ಮಿಷನ್ ನಲ್ಲಿ ಪ್ರಯಾಣಿಸಲಿದ್ದಾರೆ. NASA ಮತ್ತು Axiom ಸ್ಪೇಸ್(ಅಮೇರಿಕನ್ ಖಾಸಗಿ ಅನುದಾನಿತ ಬಾಹ್ಯಾಕಾಶ ಮೂಲಸೌಕರ್ಯ ಡೆವಲಪರ್), ನಾಲ್ಕನೇ ಖಾಸಗಿ ಗಗನಯಾತ್ರಿ ಮಿಷನ್ಗಾಗಿ ಸಹಿ ಹಾಕಿವೆ, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ.
- ಭೂಭೌತಶಾಸ್ತ್ರ ಕೊಳವೆರಂಧ್ರ ಸಂಶೋಧನಾ ಪ್ರಯೋಗಾಲಯ(BGRL), ಭಾರತದ ವೈಜ್ಞಾನಿಕವಾಗಿ ಭೂಮಿಯನ್ನು ಆಳವಾಗಿ ಕೊರೆಯುವ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಕರಡನಲ್ಲಿ ಕಾರ್ಯಗತಗೊಳಿಸುತ್ತಿದೆ. ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತದ ಏಕೈಕ ವೈಜ್ಞಾನಿಕ ಆಳವಾದ ಕೊರೆಯುವ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕೊಯ್ನಾದಲ್ಲಿ BGRL ನ 3-ಕಿಮೀ ಆಳದ ಕೊಳವೆ ರಂಧ್ರ ಪೂರ್ಣಗೊಂಡಿದೆ; ಇದು ವಿಶಿಷ್ಟವಾದ ಡ್ರಿಲ್ಲಿಂಗ್ ತಂತ್ರವನ್ನು ಬಳಸಿಕೊಳ್ಳುತ್ತದೆ-ಮಡ್ ರೋಟರಿ ಡ್ರಿಲ್ಲಿಂಗ್ ಮತ್ತು ಏರ್ ಹ್ಯಾಮರಿಂಗ್ನ ಹೈಬ್ರಿಡ.
- ರಕ್ಷಣಾ ಸಚಿವಾಲಯವು ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್ ಲಿಮಿಟೆಡ್ (GRSE) ನ, “GRSE ವೇಗವರ್ಧಿತ ನಾವೀನ್ಯತಾ ಪೋಷಣಾ ಯೋಜನೆ(GAINS 2024)” ಅನ್ನು ಪ್ರಾರಂಭಿಸಿದೆ. GAINS ಶಿಪ್ಯಾರ್ಡ್(ಬಂದರು)ಗಳಲ್ಲಿನ ಸವಾಲುಗಳನ್ನು ಎದುರಿಸಲು ಮತ್ತು ದೇಶದಲ್ಲಿ ಪೋಷಿಸಲ್ಪಟ್ಟ ಸ್ಟಾರ್ಟ್ಅಪ್ಗಳ ಮೂಲಕ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್-ಅಪ್ ಇಂಡಿಯಾ’ ನೀತಿಗಳೊಂದಿಗೆ ಹೊಂದಿಕೆಯಾಗುತ್ತದೆ.
- 2024 ರ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಸಲ್ಲಿಸಲು ಪೋರ್ಟಲ್ ಅನ್ನು ತೆರೆಯಲಾಗುತ್ತದೆ. ನವೆಂಬರ್ 26 ರಂದು ಆಚರಿಸಲಾಗುವ ರಾಷ್ಟ್ರೀಯ ಹಾಲು ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಈ ವರ್ಷದಿಂದ, ಇಲಾಖೆಯು ಈಶಾನ್ಯ ಪ್ರದೇಶ (ಎನ್ಇಆರ್) ನಲ್ಲಿ ಡೈರಿ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು ಈಶಾನ್ಯ ಪ್ರದೇಶ (ಎನ್ಇಆರ್) ರಾಜ್ಯಗಳಿಗೆ ವಿಶೇಷ ಪ್ರಶಸ್ತಿಯನ್ನು ಸಂಯೋಜಿಸಿದೆ. 2021 ರಿಂದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪ್ರತಿ ವರ್ಷ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಯನ್ನು ನೀಡುತ್ತಿದೆ.