Published on: July 14, 2023
ಚುಟುಕು ಸಮಾಚಾರ – 12-13 ಜುಲೈ 2023
ಚುಟುಕು ಸಮಾಚಾರ – 12-13 ಜುಲೈ 2023
- ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸುಧಾರಣೆಗೆ ನ್ಯಾಕ್ ಮಾದರಿಯಲ್ಲಿ ರೇಟಿಂಗ್ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವೈಜ್ಞಾನಿಕವಾಗಿ ಜವಾಬ್ದಾರಿ ಹೆಚ್ಚಿಸಿ ಇನ್ನಷ್ಟು ಸಶಕ್ತವನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಜವಾಬ್ದಾರಿ ಸಹ ಹೆಚ್ಚಾಗಿದೆ. ಆದರೆ, ಕೆಲಸ ಆಗುತ್ತಿಲ್ಲ. ಅನೇಕ ವಿಷಯಗಳಲ್ಲಿ ಹಿಂದುಳಿದಿವೆ. ಅವುಗಳ ಸುಧಾರಣೆಗೆ 20 ಅಂಶಗಳ ರೇಟಿಂಗ್ ಮಾಡಲಾಗುತ್ತದೆ.
- ಹಂಪಿಯಲ್ಲಿ ನಡೆಯುತ್ತಿರುವ ಜಿ -20 ಮೂರನೇ ಸಾಂಸ್ಕೃತಿಕ ಕಾರ್ಯಪಡೆ (ಸಿಎಬ್ಲುಜಿ) ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಕುಶಲ ಕಲಾಕೇಂದ್ರದ 450 ಮಹಿಳೆಯರು ತಯಾರಿಸಿದ ಸುಮಾರು 1750 ಲಂಬಾಣಿ ಕಸೂತಿ ಕಲೆಯ ಅತಿದೊಡ್ಡ ವಸ್ತ್ರ ಪ್ರದರ್ಶನವನ್ನು ಏರ್ಪಡಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿತು.ಸಂಡೂರಿನ ಲಂಬಾಣಿ ಕುಶಲ ಕಲಾ ಕೇಂದ್ರ ಕೇವಲ 5 ಲಂಬಾಣಿ ಮಹಿಳೆಯರಿಂದ 1988 ರಲ್ಲಿ ಆರಂಭವಾಗಿದೆ. ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿಐ ಟ್ಯಾಗ್ (2008 ರಲ್ಲಿ) ಪಡೆಯುವಲ್ಲಿ ಸಂಡೂರಿನ ಕಲಾ ಕೇಂದ್ರ ಯಶಗಳಿಸಿದೆ.
- ಸೂರ್ಯನು 2025 ರಲ್ಲಿ “ಸೌರ ಗರಿಷ್ಠ” (Solar Maximum) – ನಿರ್ದಿಷ್ಟವಾಗಿ ಸಕ್ರಿಯ ಅವಧಿಯನ್ನು ತಲುಪುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಸೂರ್ಯನ ಪ್ರಖರತೆ ಇನ್ನೆರಡು ವರ್ಷದಲ್ಲಿ ಗರಿಷ್ಠ ಮಟ್ಟ ತಲುಪಲಿದ್ದು, ಇದರಿಂದ ಸೌರ ಮಾರುತ ಪ್ರಬಲವಾಗುವ ಕಾರಣ ಭೂಮಿಯ ಮೇಲಿನ ಎಲ್ಲ ವಿಧದ ಸಂವಹನ ಸಾಧನಗಳು ನಾಶವಾಗುವ ಸಾಧ್ಯತೆ ಇದೆ.
- ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ವಿಲೀನ ಪೂರ್ಣಗೊಂಡಿದ್ದು, ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳ ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.ವಿಲೀನದ ಪರಿಣಾಮವಾಗಿ, ಎಚ್ಡಿಎಫ್ಸಿ ಬ್ಯಾಂಕ್ ಈಗ ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ಜಗತ್ತಿನ ಟಾಪ್–10 ಬ್ಯಾಂಕ್ಗಳ ಸಾಲಿಗೆ ಸೇರಿದೆ. ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್ಡಿಎಫ್ಸಿ) ಜುಲೈ 1ರಂದು ವಿಲೀನಗೊಂಡಿವೆ. ಮಂಡಳಿ, ಷೇರುದಾರರು ಮತ್ತು ನಿಯಂತ್ರಕ ಅಧಿಕಾರಿಗಳಿಂದ ಮೊದಲು ಅನುಮೋದನೆ ಪಡೆದ ನಂತರ ಎರಡು ಘಟಕಗಳು ಏಪ್ರಿಲ್ 4, 2022 ರಂದು ವಿಲೀನವನ್ನು ಘೋಷಿಸಿದ್ದವು.