Published on: January 13, 2023
ಚುಟುಕು ಸಮಾಚಾರ – 13 ಜನವರಿ 2023
ಚುಟುಕು ಸಮಾಚಾರ – 13 ಜನವರಿ 2023
- ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಉದ್ದದ ನದಿ ವಿಹಾರ ಬೋಟ್ ಎಂವಿ ಗಂಗಾ ವಿಲಾಸ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ವಾರಣಾಸಿಯ ಗಂಗಾ ನದಿಯ ದಡದಲ್ಲಿ ‘ಟೆಂಟ್ ಸಿಟಿ’ ಕೂಡ ಉದ್ಘಾಟಿಸುವರು.
- ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಮೊದಲ ಬಾರಿಗೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಮತ್ತು ಗುಡ್ಡಗಾಡು ಟೆಥಾನ್ ಹಳ್ಳಿಯ ಗ್ರಾಮಕ್ಕೆ ವಿದ್ಯುತ್ ತಲುಪಿದೆ. ಪ್ರಧಾನಮಂತ್ರಿ ಅಭಿವೃದ್ಧಿ ಕಾರ್ಯಕ್ರಮ ‘ಹರ್ ಘರ್ ಬಿಜ್ಲಿ ಯೋಜನೆ’ ಅಡಿಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
- ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಈ ಕಾಲುವೆಯು ಮುನ್ನಾರ್ ಕೊಲ್ಲಿಯಿಂದ ಪಾಲ್ಕ್ ಜಲಸಂಧಿಯವರೆಗೆ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಆದ್ದರಿಂದ ಹಡಗುಗಳು ಶ್ರೀಲಂಕಾವನ್ನು ಸುತ್ತುವ ಅಗತ್ಯವಿಲ್ಲ, ಪ್ರಯಾಣದ ಸಮಯ ಮತ್ತು ದೂರವನ್ನು ಕಡಿಮೆ ಮಾಡುತ್ತದೆ.
- ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಡಿಎಂಕೆ ನಾಯಕ ಟಿ ಆರ್ ಬಾಲು ಅವರ ಆತ್ಮಚರಿತ್ರೆ ‘ಪಥೈ ಮಾರ ಪಯನಂ’ ಬಿಡುಗಡೆ ಮಾಡಲಾಯಿತು.
- ರಜೆಯಲ್ಲಿರುವ ಸಹೋದ್ಯೋಗಿಗೆ ಕರೆ ಮಾಡಿ ತೊಂದರೆ ನೀಡಿದಲ್ಲಿ ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ಹೊಸ ನಿಯಮವೊಂದನ್ನು ಮುಂಬೈ ಮೂಲದ ಆನ್ಲೈ ನ್ ಫ್ಯಾಂಟಸಿ ಗೇಮ್ ಸಂಸ್ಥೆ ‘ಡ್ರೀಮ್ 11‘ಕಂಪನಿ ಈ ನಿಯಮವನ್ನು ಜಾರಿಗೆ ತಂದಿದೆ. ‘ವರ್ಷದಲ್ಲಿ ಒಂದು ಬಾರಿ ಒಂದು ವಾರಗಳ ಕಾಲ ಉದ್ಯೋ ಗಿಗಳಿಗೆ ರಜೆ ನೀಡಲಾಗುವುದು. ನಮ್ಮ ಉದ್ಯಮ ಯಾರ ಮೇಲೆಯೂ ಅವಲಂಬಿತವಾಗಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಇದು ಸಹಾಯವಾಗುತ್ತದೆ‘ಎಂದು ಕಂಪನಿಯು ಹೇಳಿದೆ.
- ಉಜ್ಬೇಕಿಸ್ತಾನದಲ್ಲಿರುವ ಮಕ್ಕಳಿಗೆ ಭಾರತದ ಔಷಧೀಯ ಸಂಸ್ಥೆ ಮರಿಯನ್ ಬಯೋಟೆಕ್ ತಯಾರಿಸಿರುವ ಎರಡು ಕೆಮ್ಮಿನ ಸಿರಪ್ ಗಳಾದ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಬಳಕೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ಒ) ಸೂಚನೆ ನೀಡಿದೆ. ಕಾರಣ : ಇತ್ತೀಚೆಗೆ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಸೇವನೆಯಿಂದ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದರು. ಉಜ್ಬೇ ಕಿಸ್ತಾನದ ಆರೋಗ್ಯ ಸಚಿವಾಲಯದ ಪರೀಶೀಲನೆಯಲ್ಲಿ ಕೆಮ್ಮಿನ ಸಿರಪ್ಗಳಲ್ಲಿ ಎಥಿಲೀನ್ ಗ್ಲೈ ಕೋಲ್ನ ವಿಷಕಾರಿ ರಾಸಾಯನಿಕ ಪತ್ತೆಯಾಗಿತ್ತು.
- ಭಾರತೀಯ ಮೂಲದ ಮನ್ಪ್ರೀ ತ್ ಮೋನಿಕಾ ಸಿಂಗ್ ಅವರು ಹ್ಯಾರಿಸ್ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಪ್ರಮಾಣವಚನ ಸ್ವೀ ಕರಿಸಿದರು. ಅಮೆರಿಕದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಮೊದಲ ನ್ಯಾಯಾಧೀಶೆ ಎಂಬ ಖ್ಯಾತಿಗೆ ಮನ್ಪ್ರೀತ್ ಪಾತ್ರರಾಗಿದ್ದಾರೆ.
- ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಅಮೇರಿಕಾದ ಸೆಬಾಸ್ಟಿಯನ್ ಕೊರ್ಬಾ ಅವರನ್ನು ಸೋಲಿಸಿ ಅಡಿಲೇಡ್ ಇಂಟರ್ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು.