Published on: February 13, 2023

ಚುಟುಕು ಸಮಾಚಾರ – 13 ಫೆಬ್ರವರಿ 2023

ಚುಟುಕು ಸಮಾಚಾರ – 13 ಫೆಬ್ರವರಿ 2023

  • ಕರ್ನಾಟಕ ರಾಜ್ಯದ 35 ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯ ಸ್ಥಾಪಿಸುವ ಗುರಿಯನ್ನುಳ್ಳ ಮಹತ್ತ್ವದ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಅಂಕಿತ ಹಾಕಿವೆ.
  • ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ತಳಿಗಳು: BGV-44 ಮತ್ತು CSV-29 ಎಂದು ಇವುಗಳನ್ನು ಹೆಸರಿಸಲಾಗಿದ್ದು, ಈ ಎರಡು ತಳಿಗಳು ಜೋಳದ ಉತ್ಪಾದನೆಗೆ ಉತ್ತೇಜನ ನೀಡುತ್ತವೆ.
  • ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಪ್ರಮುಖ ಶಿಕ್ಷಣ ಸಮಾವೇಶ ಥಿಂಕ್‌ಎಡುವಿನ ಹನ್ನೊಂದನೇ ಆವೃತ್ತಿಯನ್ನು ಶ್ಲಾಘಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. “ನ್ಯೂ ಇಂಡಿಯಾ: ರೈಸಿಂಗ್ ಫಾರ್ ದಿ ವರ್ಲ್ಡ್’ ಎಂಬ ವಿಷಯದ ಕುರಿತು ಥಿಂಕ್‌ಎಡುವಿನ 11 ನೇ ಆವೃತ್ತಿಯ ದಿ ನ್ಯೂ ಇಂಡಿಯನ್‌ನ ಈ ವರ್ಷದ ವಾರ್ಷಿಕ ಶಿಕ್ಷಣ ಸಮ್ಮೇಳನದಲ್ಲಿ ಚರ್ಚೆಯ ವಿಷಯ ಎಕ್ಸ್‌ಪ್ರೆಸ್ ರಾಷ್ಟ್ರದ ಮನಸ್ಥಿತಿ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ.
  • ಚೀನಾ ಕಳುಹಿಸಿದ ಬೇಹುಗಾರಿಕಾ ಬಲೂನು ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿದೆ. ಚೀನಾದ ಶಂಕಿತ ಬೇಹುಗಾರಿಕಾ ಬಲೂನು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕವು ಚೀನಾದ ಆರು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಈ ಕಂಪನಿಗಳು ಚೀನಾದ ಅಂತರಿಕ್ಷ ಕಾರ್ಯಕ್ರಮಗಳೊಂದಿಗೆ ನಂಟು ಹೊಂದಿವೆ ಎಂದೂ ಆರೋಪಿಸಿದೆ.